ಈ ವರ್ಷದ ಬಿಸಿಲು ಎಲ್ಲ ವರ್ಷಕ್ಕಿಂತಲ್ಲೂ ಹೆಚ್ಚಾಗಿದೆ. ಶಿವರಾತ್ರಿಯ ಮುಂಚೆಗಿಂತ ಬಿಸಿಲು ಜೋರಾಗಿದೆ. ಫೆಬ್ರುವರಿ ಮದ್ಯದಿಂದಲೂ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ, ಇದರಿಂದ ದಿನದಲ್ಲಿ ಆಚೆ ಕಡೆ ಹೋಗುವುದೇ ತುಂಬಾ ಕಷ್ಟ ಎನಿಸಿಬಿಡುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಬಿಸಿಲಿನಿಂದ ಅವರ ಆರೋಗ್ಯದಲ್ಲಿ ಏರು ಪೆರು ಆಗುವುದು ದಿನದಲ್ಲೂ ನೋಡುತ್ತೆವೆ. ಚಿಕ್ಕ ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ, ಡಿಹೈಡ್ರಷನ್ ಹಿಂತಹ ಹಲವಾರು ತೊಂದರೆಗಳಿಂದ ಬಳಲುವುದು ನೀವು ನೋಡುತೀರಾ. ದೊಡ್ಡವರಲ್ಲಿ ಸನ್ ಸ್ಟೊರ್ಕ್, ತಲೆ ನೋವು, ಅಷ್ಟೇ ಅಲ್ಲದೆ ಗರ್ಭಿಣಿಯರಿಗೆ ಬಿಸಿಲಿರುವ ಕಾರಣ ಅವರಿಗೆ ದೇಹದಲ್ಲಿ ಸುಸ್ತು, ವಾಂತಿ, ಕೆಲವಂದು ಸಾರಿ ಹೆಚ್ಚಾಗಿರುವ ಬಿಸಿಲು ಇರುವ ಕಾರಣ ಗರ್ಭಪಾತ ಆಗುವ ಸಂಭವ ಹೆಚ್ಚಾಗಿರುತ್ತದೆ. ಅದರಿಂದ ಆದಷ್ಟು ತಪ್ಪಾಗಿರುವ ಜ್ಯೂಸ್, ಆಹಾರವನ್ನು ಅವರಿಗೆ ನೀಡಬೇಕು. ಇನ್ನು ಬಿಸಿಲಿನಿಂದ ಆಗುವ ಅನಾರೋಗಗಳಿಗೆ ಗುರಿಯಾಗದಂತೆ ನಿಮ್ಮ ಆರೋಗ್ಯವನ್ನು ಈ ರೀತಿಯ ಕ್ರಮಗಳನ್ನು ಅನುಸರಿಸಿ  ಆರೋಗ್ಯವನ್ನು ಕಾಪಾಡಿಕೊಳ್ಳಿ…

* ಬೆಳಗಿನ ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಕಾರಣ ಬೆಳಗ್ಗೆ ಹೊರಗಡೆ ಹೋಗದೆ ನಿಮ್ಮ ಕೆಲಸಗಳನ್ನು ಸಂಜೆ ವೇಳೆಯಲ್ಲಿ ಕೆಲಸ ಮುಗಿಸಿಕೊಳ್ಳುವುದು ಉತ್ತಮ.

* ಇನ್ನ ಬಿಸಿಲಿದ್ದರೂ ಕೆಲಸಕ್ಕೆ ಹೋಗಲೇ ಬೇಕು ಅನ್ನುವು ಅನಿವಾರ್ಯತೆ ಇದ್ದರೆ ಬಿಳಿ ಬಣ್ಣದ ಛತ್ರಿಯನ್ನು ಬಳಸಿ.

* ವಯಸ್ಕರಿಗೆ ಮತ್ತು ವಯೋವೃದ್ಧರಿಗೆ ಸಾಧ್ಯವಾದಷ್ಟು ಹೆಚ್ಚಾಗಿ ನೀರು ಕುಡಿಯಲು ಕೊಡಿ. ತಂಪಾಗಿರುವ ಪಾನೀಯಗಳನ್ನು ಮತ್ತು ನೀರಿನಾಂಶ ಇರುವ ಆಹಾರ ಸೇವನೆ ಇರಲಿ.

* ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಹೆಚ್ಚಾಗಿ ಧರಿಸಬಾರದು ಸೂರ್ಯನ ಶಾಖ ಹೆಚ್ಚಾದಾಗ ಈ ತರಹದ ಬಟ್ಟೆಯ ಬಣ್ಣಗಳನ್ನು ಹೀರುತ್ತದೆ. ಸಾಧ್ಯವಾದಷ್ಟು ಶ್ವೇತ ವರ್ಣದ ಬಟ್ಟೆಗಳನ್ನು ಧರಿಸಿ.

* ಬೆಳಗ್ಗೆ ಎದ್ದ ಮೇಲೆ ” ತುಳಸಿ ” ಎಲೆಗಳನ್ನು ರುಬ್ಬಿಕೊಂಡು, ಅದಕ್ಕೆ ೨ ಗ್ಲಾಸ್ಸನಷ್ಟು ನೀರನ್ನು ಬೆರಿಸಿಕೊಂಡು ಕುಡಿಯಬೇಕು. ಇದರಿಂದ ಎಷ್ಟೇ ಕೆಲಸ ಮಾಡಿದರು  ದೇಹಕ್ಕೆ ಸುಸ್ತು ಆಗದಂತೆ ನೋಡಿಕೊಳ್ಳುತ್ತದೆ.

* ಆಹಾರದಲ್ಲಿ ಮಸಾಲೆ ಹೆಚ್ಚಾಗಿ ಬಳಸಬಾರದು. ಇದರಿಂದ ಉರಿ ಮೂತ್ರದ ತೊಂದರೆ, ಮಲವಿಸರ್ಜನೆ, ಫೈಲ್ಸ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರಿಂದ ಆದಷ್ಟು ಲೈಟ್ ಆಗಿರುವ ಖಾರ ಇಲ್ಲದ ಅಡುಗೆ ತಿನ್ನಬಹುದು.

* ಈ ಸಮಯದಲ್ಲಿ ತಲೆ ಮತ್ತು ಮೆದುಳು ತಂಪಾಗಿರುವಂತೆ ನೋಡಿಕೊಳ್ಳುವುದು ಉತ್ತಮ. ಅದರಿಂದ ಮಕ್ಕಳಿಗೆ ಎರಡು ದಿನಕೊಮ್ಮೆ ಕೊಬ್ಬರಿ ಎಣ್ಣಿ ಬದಲು ರಾತ್ರಿ ಮಲಗುವ ಮುನ್ನ ”ಹರಳೆಣ್ಣಿ ”ಹಚ್ಚಿ ಬೆಳಗ್ಗೆ ಸ್ನಾನ ಮಾಡಿಸಬೇಕು. ದೊಡ್ಡವರಿಗೂ ಕೂಡ ಹೀಗೆ ಮಾಡಬಹುದು.

* ರಾತ್ರಿ ಮಲಗುವ ಮುನ್ನ ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರಿಸಿಕೊಂಡು ತೆಳುವಾದ ಬಟ್ಟೆಯನ್ನು ಹಾಸಿಕೊಂಡು ಮಲಗಿದರೆ ದೇಹಕ್ಕೆ ಬೇಕಾಗಿರುವ ನಿದ್ದೆ ಚೆನ್ನಾಗಿ ಆಗುತ್ತದೆ.

* ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಯಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಂಡು ಕುಡಿಯಬೇಕು, ದಿನಕ್ಕೆ ೨ ಬಾರಿ ಕುಡಿಯಿರಿ ಇದರಿಂದ ದೇಹ ತಂಪಾಗಿರಲು ಇದು ಸಹಾಯ ಮಾಡುತ್ತದೆ.

* ಬಾಣಂತಿ ಹೆಣ್ಣು ಮಕ್ಕಳು ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು. ಇಲ್ಲದೆ ಹೋದಲ್ಲಿ ತಾಯಿ ಮತ್ತು ಮಗುವಿಗೆ ಸೋಂಕು ತಲಗಬಹುದು.

* ಆದಷ್ಟು ಊಟದಲ್ಲಿ ಮೊಸರಿನ ಬದಲು ಮಜ್ಜಿಗಿಯನ್ನು ಬಳಸುವುದು ಉತ್ತಮ. ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುವುದರ ಜೊತೆಗೆ ಅಸಿಡಿಟಿ ಆಗುವುದನ್ನು ತಡೆ ಹಿಡಿಯುತ್ತದೆ.

* ೫ ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿನ್ ಉಪ್ಪು ಬೆರಿಸಿದ ನೀರನ್ನು ಕುಡಿಸಬೇಕು. ಇದರಿಂದ ಮಕ್ಕಳಿಗೆ ಡಿಹೈಡ್ರಷನ್ ಆಗುವುದು ತಪ್ಪುತ್ತದೆ.

* ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಒಳ್ಳೆಯದು. ದಿನಕ್ಕೆ ೨ ಬಾರಿ ಅಂದರೆ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ೧೦ ಪುದಿನ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ತಣ್ಣೀರಿಗೆ ಬೆರಸಿ ಸ್ನಾನ ಮಾಡುವುದರಿಂದ ಬೆವರಿನ ವಾಸನೆಯನ್ನು ತಡೆಹಿಡಿಯುತ್ತದೆ. ಇಷ್ಟೇ ಅಲ್ಲದೆ ಬೆವರು ಗುಳ್ಳೆಗಳು ಆಗದಂತೆ ಕಾಪಾಡುತ್ತದೆ.

* ಬಿಗಿಯಾದ ಒಳ ಉಡುಪುಗಳನ್ನು ಕಡ್ಡಾಯವಾಗಿ ಬಳಸಬೇಡಿ. ಸಾಧ್ಯವಾದಷ್ಟು ಕಪ್ಪು, ನೀಲಿ, ಕೆಂಪು, ಘಾಡವಾಗಿರುವ ಬಣ್ಣಗಳ ಬಟ್ಟೆ ಧರಿಸಬೇಡಿ.( ಸಾಧ್ಯವಾದರೆ ಬಿಳಿ ಬಣ್ಣದ ಬಟ್ಟೆ ಧರಿಸಿ. ) ಇದರಿಂದ ರಕ್ತ ಸಂಚಾರಕ್ಕೂ ತೊಂದರೆಯಾಗುತ್ತದೆ. ಇದರ ಪರಿಣಾಮ ಕಡಿಮೆ ರಕ್ತದೊತ್ತಡ ಅಥವಾ ಹೆಚ್ಚಿನ ರಕ್ತದೊತ್ತಡ ಆಗಿ ಸಾವು ಆಗುವ ಸಾಧ್ಯತೆ ಹೆಚ್ಚಿರುತ್ತದೆ.

* ಮಕ್ಕಳಿಗೆ ಹೆಚ್ಚಾಗಿ ಕಾಟನ್ ಬಟ್ಟೆ ಹಾಕಿಸಿ. ಸ್ನಾನವಾದ ಕೂಡಲೇ ಅವರ ಮೈಗೆಲ್ಲ ಪೌಡರ್ ಅನ್ನು ಹಚ್ಚಿರಿ ಇದರಿಂದ ಬೆವರಿನ ಗುಳ್ಳೆಗಳು ಆಗುವ ಸಾಧ್ಯತೆ ಕಡಿಮೆ ಇರುತ್ತದೆ.

*ಗಾಡಿಯ ಮೇಲೆ ಹೋಗುವಾಗ ಕಣ್ಣಿಗೆ ಗಾಗಲ್ ಹಾಕಿಕೊಳ್ಳಿ. ಇಷ್ಟೇ ಅಲ್ಲದೆ ಆಚೆ ಕಡೆ ಹೋಗುವಾಗ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು, ತುಂಬು ತೋಳುಇರುವ ಬಟ್ಟೆಯನ್ನು ಹಾಕಿಕೊಳ್ಳಿ.

LEAVE A REPLY

Please enter your comment!
Please enter your name here