ಕೆಂಪು ಅಥವಾ ಕೇಸರಿ ಬಣ್ಣದ ಕ್ಯಾರಟ್ ನ ನೋಡಿದೀವಿ ಯಾವ್ದು ಇದು ಬಿಳಿ ಕ್ಯಾರಟ್ ಅಂತೀರಾ. ನಿಮಗೆಲ್ಲ ಗೊತ್ತಿರೋ ಮೂಲಂಗಿ ಅದನ್ನ ಬಿಳಿ ಕ್ಯಾರಟ್ ಅಂತಾನೂ ಕರೀತಾರೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಲಂಗಿ ಸಸ್ಯ ಹಾರಿಗಳ ಇಷ್ಟದ ತರಕಾರಿಯಾಗಿದೆ. ಇದರಲ್ಲಿರುವ ವಿಟಮಿನ್ ಮತ್ತು ಪೌಷ್ಟಿಕಾಂಶಗಳು ಹಲವಾರು ರೋಗಗಳನ್ನೂ ನಿರ್ಮೂಲಗೊಳೆಸುತ್ತದೆ.

ಊಟದ ಜೊತೆ ಹಸಿ ಮೂಲಂಗಿಯನ್ನು ತಿನ್ನುವುದರಿಂದ ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

ಹಸಿ ಮೂಲಂಗಿ ಚೂರುಗಳಿಗೆ ನಿಂಬೆರಸ ಉಪ್ಪು ಮೆಣಸಿನ ಪುಡಿ ಹಾಕಿ ತಿನ್ನುವುದರಿಂದ ಕಾಮಾಲೆ, ಮಲಬದ್ಧತೆ, ಅಜಿರ್ಣ, ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ..

ಚೇಳು ಕಚ್ಚಿದ ಭಾಗಕ್ಕೆ ಮೂಲಂಗಿ ರಸ ಮತ್ತು ಉಪ್ಪು ಬೆರೆಸಿ ಹಚ್ಚಿದರೆ ವಿಷವು ಏರುವುದಿಲ್ಲ ಮತ್ತು ಉರಿಯು ನಿಲ್ಲುತ್ತದೆ.

ಕಜ್ಜಿ, ಹುಳಕಡ್ಡಿ, ಬೀಳಿಸಿಬ್ಬು ಗಳಾಗಿದ್ದಾರೆ ಆ ಜಾಗಕ್ಕೆ ಮೂಲಂಗಿ ಮತ್ತು ನಿಂಬೆ ರಸ ಬೆರೆಸಿ ಹಚ್ಚುವುದರಿಂದ ಬೇಗನೆ ಗುಣವಾಗುತ್ತದ್ದೆ.

ಮೂಲಂಗಿಯನ್ನು ಕ್ಯಾರಟ್ ನ ಹಾಗೆ ಕಚ್ಚಿ ತಿನ್ನುವುದರಿಂದ ಕಿವಿ ಮೂಗು ಗಂಟಲಿನ ತೊಂದರೆಗಳು ನಿವಾರಣೆ ಯಾಗುತ್ತವೆ.

ಮೂಲಂಗಿ ಸೇವನೆ ಇಂದ ರಕ್ತದೊತ್ತಡ, ಅಸ್ತಮಾ ಉಸಿರಾಟದ ಸಮಸ್ಯೆ ಗಳು ನಿಯಂತ್ರಣದಲಿರುತ್ತವೆ.

ಮೂಲಂಗಿ ಸೇವನೆ ಇಂದ ಹಸಿವನ್ನು ನಿಯಂತ್ರಿಸಬಹುದು, ಸ್ತೂಲಕಾಯಿಗಳು ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರು ನಿರಂತರವಾಗಿ ಹಸಿ ಮೂಲಂಗಿ   ಸೇವಿಸಿದರೆ ಬೇಗನೆ ಪರಿಣಾಮ ಕಾಣಬಹುದು.

ಮಹಿಳೆಯರಲ್ಲಿ ಕಾಡುವ ಋತು ಚಕ್ರದ ಸಮಸ್ಯೆಗೆ ಮೂಲಂಗಿ ಸೊಪ್ಪಿನ ಬಳಕೆ ಮಾಡುವುದರಿಂದ ಅ ನಿಯಮಿತ ಋತುಚಕ್ರ ಮತ್ತು ಅಧಿಕ ರಕ್ತಸ್ರಾವ ಈ ರೀತಿಯ ಸಮಸ್ಯೆಗಳಿಗೆ  ಪರಿಣಾಮಕಾರಿಯಾಗಿದೆ.

LEAVE A REPLY

Please enter your comment!
Please enter your name here