ಇತ್ತೀಚಿನ ಒತ್ತಡದ ಜೀವನದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಫಾಸ್ಟ್ ಫುಡ್ ಅನ್ನುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅದರಂತೆ ಪೋಷಕರು ಮಕ್ಕಳಿಗೆ ಅವರ ಇಷ್ಟದ ಆಹಾರವನ್ನು ನೀಡುತ್ತಿದ್ದಾರೆ, ಹೇಗೆ ಇರಲಿ ಅದು ಒಟ್ಟಿನಲ್ಲಿ ಮಕ್ಕಳು ಹೊಟ್ಟೆ ತುಂಬಿದ್ದರೆ ಸಾಕು ಅನ್ನುವ ಪರಿಸ್ಥಿತಿ ಆಗಿಬಿಟ್ಟಿದೆ ಆದರೆ ಇದರಿಂದ ಮಕ್ಕಳಿಗೆ ಆರೋಗ್ಯದಲ್ಲಿ ಏರು ಪೆರು ಆಗುವ ಪರಿಣಾಮದ ಬಗ್ಗೆ ಎಚ್ಚರವಹಿಸಬೇಕು. ಈಗಿನ ಮಕ್ಕಳು ವಯಸ್ಸಿಗೂ ಮೀರಿದ ತೂಕವನ್ನು ಹೊಂದುತ್ತವೆ ಇದರಿಂದ ಅವರ ದೇಹದಲ್ಲಿ ಮಾನಸಿಕ ಮತ್ತು ಬೌಧಿಕ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳ ಆಹಾರದ ಬಗ್ಗೆ ಸ್ವಲ್ಪಆದರೂ ಗಮನವಹಿಸಬೇಕು. ಅದು ಯಾವ ರೀತಿಯ ಆಹಾರವನ್ನು ನೀಡಬೇಕು ಅಂತೀರಾ ಹಾಗಾದ್ರೆ ಇಲ್ಲಿ ಓದಿ…

೧ ರಿಂದ ೩ ವರ್ಷದ ಮಕ್ಕಳಿಗೆ ಇನ್ನು ನೀಟಾಗಿ ಹಲ್ಲು ಕೂಡ ಬಂದಿರುವುದಿಲ್ಲ. ಅಂಬೆಗಾಲಿಡುತ್ತ ತೊದಲು ಮಾತನಾಡುವ ಪ್ರಯತ್ನದಲ್ಲಿ ಇರುತ್ತವೆ ಅವು ತಾಯಿಯ ಎದೆ ಹಾಲಿಗೆ ಹೊಂದುಕೊಂಡಿರುತ್ತವೆ. ಹಂತಹ ಮಕ್ಕಳಿಗೆ ಹೆಚ್ಚಾಗಿ ಆಹಾರ ನೀಡಬಾರದು, ಅವರಿಗೆ ಮನೆಯಲ್ಲೇ ತಯಾರಿಸಿದ ರಾಗಿ, ಅಕ್ಕಿ, ಸ್ವಲ್ಪ ತೊಗರಿಬೇಳೆ, ಸ್ವಲ್ಪ ಎಲ್ಲ ದವಸ ಧಾನ್ಯಗಳನ್ನು ಸೇರಿಸಿ ಒಂದು ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಅವಗಳನ್ನು ಹುರಿದು ಪುಡಿ ಮಾಡಿಕೊಂಡಿರಬೇಕು ಅದನ್ನು ನೀರು ಅಥವಾ ಹಾಲಿನಲ್ಲಿ ಹದವಾಗಿ ಬೇಯಿಸಿ ತಿನ್ನಿಸಬೇಕು. ಈ ವಯಸ್ಸಿನ ಮಕ್ಕಳಿಗೆ ಹಸಿವು ಹೆಚ್ಚಾಗಿರುತ್ತ್ತದೆ.ಆದ್ದರಿಂದ ಮಕ್ಕಳಿಗೆ ಹೆಚ್ಚಾಗಿ ಗಟ್ಟಿ ಆಹಾರವನ್ನು ನೀಡಬಾರದು ಇದರಿಂದ ಅವರಿಗೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ.ಆದಷ್ಟು ಮಕ್ಕಳಿಗೆ ತುತ್ತು ಮಾಡಿ ತಿನಿಸಿದರೆ ತುಂಬಾ ಖುಷಿಯಿಂದ ತಿನ್ನುತ್ತವೆ

ಇನ್ನ ಈ ವಯಸ್ಸಿನ ಮಕ್ಕಳಿಗೆ ಮಾಂಸದ ಅಡಿಗೆಯನ್ನು ತಿನಿಸಬಾರದು, ಮೀನು,ಮೊಟ್ಟೆ, ಈ ತರಹದ ಆಹಾರ ಕೊಡಬಾರದು. ಎಣ್ಣೆಯಲ್ಲಿ ಕರಿದ ತಿಂಡಿ ತಿನುಸುಗಳನ್ನು ತಿನಿಸಬಾರದು ಇದರಿಂದ ಅವರಿಗೆ ಕೆಮ್ಮು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅತಿಯಾಗಿ ಬಿಸಿಯಿರುವ ಆಹಾರ ಮತ್ತು ಅತಿ ತಂಪಾಗಿರುವ ಪದಾರ್ಥ್ಗಗಳನ್ನೂ ನೀಡಬಾರದು ಇದರಿಂದ ಅವರ ಮೆದುಳಿನ ಮೇಲೆ ಪರಿಣಾಮ ಬೀರುತದ್ದೇ. ಅಧಿಕ ತರಕಾರಿ ಬೇಡ ಅವರ ಬೆಳವಣಿಗೆಗೆ ಎಷ್ಟ್ಟು ಬೇಕು ಅಷ್ಟು ಕೊಟ್ಟರೆ ಸಾಕು.

ಹುಳಿ, ಉಪ್ಪು, ಖಾರ ಇರುವ ಆಹಾರವನ್ನು ತಿಂಗಳದಲ್ಲಿ ೨ ಸಾರಿ ಆದರೂ ಕೊಡಬೇಕು.ಹಾಗೆ ಸಿಹಿ ಆಹಾರವನ್ನು ನಿಯಮಿತವಾಗಿ ನೀಡಬೇಕು. ನೀರು ಕುಡಿಸುವದನ್ನು ಅಭ್ಯಾಸ ಮಾಡಿಸಬೇಕು, ಮೇಲಿನ ಹಾಲನ್ನು ಹೆಚ್ಚು ಕುಡಿಸೋವುದು ಉತ್ತಮ, ಯಾವಾಗಲಾದ್ರೂ ಒಮ್ಮೆ ಬಿಸ್ಕತ್ ಕೊಡಬೇಕು. ಪ್ರತಿದಿನ ಯಾವುದಾದರೂ ಒಂದು ಹಣ್ಣಿನ ರಸ ಕೊಡುವುದರಿಂದ ದೇಹಕ್ಕೆ ಒಳ್ಳೆ ಶಕ್ತಿ ಬರುತ್ತದೆ.

೪ ರಿಂದ ೧೦ ವರ್ಷದ ಮಕ್ಕಳಿಗೆ ಏನು ನೋಡಿದರು ತಿನ್ನಬೇಕು ಎನ್ನುವ ಹಂಬಲ ಇದರಿಂದ ಅವರ ಆರೋಗ್ಯದಲ್ಲಿ ಏರು ಪೆರು ಆಗುವದಂತು ಸತ್ಯ. ಈ ರೀತಿ ಸಿಕ್ಕಿದೆಲ್ಲ ತಿನೋದ್ರಿಂದ ಅವರಿಗೆ ಬೊಜ್ಜು ಬರುವುದು ಗ್ಯಾರಂಟಿ ಅದಕ್ಕಾಗಿಯೇ ಈ ವಯಸ್ಸಿನಲ್ಲೇ ಮಕ್ಕಳಿಗೆ ಯಾವದು ಒಳ್ಳೆಯ ಆಹಾರ ಯಾವ ರೀತಿಯ ಆಹಾರನ ತೆಗೆದುಕೊಳ್ಳಬೇಕು ಅನ್ನೋವುದನ್ನು ತಿಳಿಸಿಕೊಡಬೇಕು. ಆದಷ್ಟು ಮಕ್ಕಳಿಗೆ ಕಾರ್ಬೋಹೈಡ್ರೇಟ್ ವಿಟಮಿನ್ಸ್ ಇರುವ ಪದಾರ್ಥಗಳನ್ನೂ ನೀಡಿದರೆ ಮಕ್ಕಳು ಆರೋಗ್ಯಯುತವಾಗಿ ಬೆಳಿಯುತ್ತವೆ. ಇನ್ನ ಈ ವಯಸಿನ್ನ ಮಕ್ಕಳಿಗೆ ಹೆಚ್ಚಾಗಿ ಜಂಕ್ ಫುಡ್ ಸೇವನೆ ಬೇಡ ( ಪಿಜ್ಜಾ, ಬರ್ಗರ್ ) ಬೇಕರಿಯ ತಿನಿಸುಗಳು ಬೇಡ , ಹೊತ್ತಲದ ಹೊತ್ತಿನಲ್ಲಿ ಊಟವನ್ನು ಮಾಡಿಸಬಾರದು, ಎಣ್ಣೆಯಲ್ಲಿ ಕರೆದ ತಿನಿಸುಗಳು ಬೇಡ.ರಸ್ತೆ ಬದಿಯ ಅಂಗಡಿಗಳ ಕುರುಕುಲು ತಿಂಡಿಗಳು ಬೇಡ.

ಈ ವಯಸಿನಲ್ಲಿ ಮಕ್ಕಳಿಗೆ ಸ್ವಲ್ಪ ತಿಳುವಳಿಕೆ ಇರುತ್ತದೆ ಆದ ಕಾರಣ ಅವರಿಗೆ ಅವರ ಆಹಾರ ಕ್ರಮವನ್ನು ಅಭ್ಯಾಸ ಮಾಡಿಸಬೇಕು. ಎಲ್ಲ ರೀತಿಯ ಹಣ್ಣುಗಳು ಮತ್ತು ತರಕಾರಿ ನೀಡಬೇಕು.ವಾರಕೊಮ್ಮೆ ಆದರೂ ಮೀನು,ಮೊಟ್ಟೆ , ಮಾಂಸ ತಿನಿಸಬೇಕು.ಸಸ್ಯಾಹಾರಿಗಳು ಆಗಿದ್ದರೆ ಹಾಲು, ಗೋಡಂಬಿ, ದ್ರಾಕ್ಷಿ , ಪಿಸ್ತಾ, ಬಾದಾಮ್ ಹೆಚ್ಚಾಗಿ ತಿನ್ನಲು ಕೊಡಬೇಕು ಇದರಿಂದ ಅವರ ಬೆಳೆವಣಿಗೆ ಚೆನ್ನಾಗಿ ಆಗುತ್ತದೆ. ಹೆಚ್ಚಾಗಿ ನೀರು ಕುಡಿಸುವ ಅಭ್ಯಾಸ ಮಾಡಿಸಬೇಕು.

LEAVE A REPLY

Please enter your comment!
Please enter your name here