ಪಪ್ಪಾಯ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದು ಎಂಬುದಾಗಿ ಕೆಲ ತಜ್ಞರು ತಿಳಿಸಿದ್ದಾರೆ. ಪಪ್ಪಾಯದಿಂದ ಸಿಗುವಂತ ಆರೋಗ್ಯಕಾರಿ ಲಾಭಗಳನ್ನು ನೀವು ತಿಳಿದಿರುತ್ತೀರ. ಅದು ಮಿತಿ ಮೀರಿದರೆ ಹಾಗುವಂತ ಪರಿಣಾಮಗಳನ್ನು ಕೂಡ ತಿಳಿದುಕೊಳ್ಳುವುದು ಉತ್ತಮ.

ಪಪ್ಪಾಯವನ್ನು ಗರ್ಭಿಣಿ ಮಹಿಳೆಯರು ಸೇವಿಸುವುದು ಅಪಾಯ. ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಪಪ್ಪಾಯ ತಿನ್ನುವುದರಿಂದ ಗರ್ಭಪಾತವಾಗುವ ಅಪಾಯವಿದೆ. ಇದು ಗರ್ಭಕೋಶದ ಮೇಲೆ ಪರಿಣಾಮ ಬೀರುವುದರಿಂದ ಪಪ್ಪಾಯ ಹಣ್ಣಿನ ಬೀಜ, ಬೇರು ಗರ್ಭಪಾತಕ್ಕೆ ಕಾರಣವಾಗಬಹುದು.

ಪ್ರತಿನಿತ್ಯ ಒಂದು ಕಪ್ ಗಿಂತ ಹೆಚ್ಚು ಪಪ್ಪಾಯ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಯಾಕೆಂದರೆ ಮನುಷ್ಯನ ಆಹಾರ ನಳಿಕೆಯನ್ನು ಹಾನಿಗೊಳಿಸಬಹುದು ಎನ್ನುವ ಕಾರಣಕ್ಕೆ. ನಿಮೆಗೆ ಗೊತ್ತಿರುವ ವಿಷಯ ಅತಿಯಾದರೆ ಅಮೃತವು ವಿಷ ಆಗುತ್ತೆ ಎಂಬುದು.

LEAVE A REPLY

Please enter your comment!
Please enter your name here