ಹುಣಸೆಹಣ್ಣಿನ ಉಪಯೋಗಗಳು: ಹುಳುಕಡ್ಡಿ ಸಮಸ್ಯೆ ಇದ್ರೆ ಹುಣಸೆ ಸೊಪ್ಪಿನ ರಸವನ್ನು ಲೇಪಿಸುವುದರಿಂದ ಹುಳುಕಡ್ಡಿ ಸಮಸ್ಯೆ ನಿವಾರಣೆಯಾಗುವುದು, ಅಷ್ಟೇ ಅಲ್ಲದೆ ಕಣ್ಣುಉರಿ ಸಮಸ್ಯೆ ಇದ್ರೆ ಹುಣಸೆ ಮರದ ಹೂವನ್ನು ರಸ ಮಾಡಿಕೊಂಡು ಸೇವಿಸಿದರೆ ಕಣ್ಣು ಉರಿ ಕಡಿಮೆಯಾಗುವುದು.

ಪಾರ್ಶ್ವವಾಯು ಸಮಸ್ಯೆ ನಿವಾರಣೆಗೆ ಹುಣಸೆ ಮರದ ತೊಗಟೆಯರಸವನ್ನು ಸೇವಿಸಬೇಕು, ಹೀಗೆ ಮಿತವಾಗಿ ಸೇವಿಸುವುದರಿಂದ ಪಾರ್ಶ್ವವಾಯು ಸಮಸ್ಯೆ ನಿಯಂತ್ರಣಗೊಳ್ಳುವುದು. ಅಷ್ಟೇ ಅಲ್ಲದೆ ಹುಣಸೆಹಣ್ಣು ಸೇವಿಸುವುದರಿಂದ ಮೂಳೆಮುರಿತ ಸಮಸ್ಯೆಗೆ ತುಂಬಾನೇ ಒಳ್ಳೆಯದು ಇದರ ಸೇವನೆಯಿಂದ ಮುರಿದ ಮೂಳೆ ಬೇಗನೆ ಕೂಡಿಕೊಳ್ಳುತ್ತದೆ.

ಉಗುರಿನಿಂದ ಆಗುವಂತ ಗಾಯಗಳಿಗೆ ಹುಣಸೆ ಹಣ್ಣನ್ನು ಕಿವುಚಿ ಶೋಧಿಸಿದ ನೀರಿನಲ್ಲಿ ಹಸಿ ಕೊಬ್ಬರಿಯನ್ನು ಅರೆದು ಹಚ್ಚಿದರೆ ಗಾಯ ಬಹುಬೇಗನೆ ವಾಸಿಯಾಗುವುದು. ಉಷ್ಣದಿಂದ ಕಣ್ಣುಗಳು ಊದಿಕೊಂಡರೆ ಕಣ್ಣು ಕೆಂಪಾಗಿ ಕಣ್ಣಿನಲ್ಲಿ ನೀರು ಸುರಿಯುತ್ತಿರುತ್ತದೆ ಈ ಸಮಸ್ಯೆ ಇದ್ರೆ ಹುಣಸೆಹಣ್ಣು ಕಿವುಚಿ ಇದರ ಜೊತೆಗೆ ಕಲ್ಲುಸಕ್ಕರೆ ಹಾಕಿಕೊಂಡು ೫-೬ ದಿನಗಳ ಕಾಲ ಸೇವಿಸಿದರೆ ನಿವಾರಣೆಯಾಗುವುದು.

ಗಂಟಲುನೋವು ಇದ್ರೆ ಹುಣಸೆಹಣ್ಣಿನ ರಸಕ್ಕೆ ಸ್ವಲ್ಪ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಬೇಗನೆ ನಿವಾರಣೆಯಾಗುವುದು. ಅಷ್ಟೇ ಅಲ್ಲದೆ ಮೂಲವ್ಯಾದಿ ಸಮಸ್ಯೆಗೆ ಹಾಗಾಗ ಹುಣಸೆಹಣ್ಣಿನ ರಸ ಸೇವಿಸುವುದು ಉತ್ತಮ.

LEAVE A REPLY

Please enter your comment!
Please enter your name here