ಅಡುಗೆಯ ರುಚಿಯನ್ನು ಹೆಚಿಸುವಂತ ಕರಿಬೇವು,ಮನುಷ್ಯನ ಆರೋಗ್ಯವನ್ನು ವೃದ್ಧಿಸುತ್ತದೆ. ಬಹಳಷ್ಟು ಜನ ಊಟದಲ್ಲಿರುವ ಕರಿಬೇವನ್ನು ಸೇವಿಸುವುದಿಲ್ಲ ಪಕ್ಕಕ್ಕೆ ಇಡುತ್ತಾರೆ ಆದರೆ ಇದರ ಮಹತ್ವನ್ನು ತಿಳಿದ ಮೇಲೆ ಯಾವುದೇ ಕಾರಣಕ್ಕೂ ಮತ್ತೆ ಅಂತ ತಪ್ಪು ಮಾಡಬೇಡಿ. ಈ ಕರಿಬೇವಿನಿಂದ ಯಾವ ರೀತಿಯಾಗಿ ಕಾನ್ಸರ್ ಹೋಗಲಾಡಿಸಬಹುದು ಅನ್ನೋದು ಇಲ್ಲಿದೆ ನೋಡಿ.

ಕರಿಬೇವು ತಿಂದ್ರೆ ಕ್ಯಾನ್ಸರ್ ನಿವಾರಣೆಯಾಗುವುದು, ನಮ್ಮ ದೇಶದಲ್ಲಿ ಪುರುಷರಲ್ಲಿ ಹೆಚ್ಚಾಗಿ ಕಾಡುವಂತ ”ಪ್ರಾಸ್ಪೇಟ್ ಕ್ಯಾನ್ಸರ್” ಅನ್ನು ಕರಿಬೇವು ನಿವಾರಿಸುತ್ತದೆ ಎಂಬುದಾಗಿ ಕೆಲವು ಸಂಶೋಧನೆಗಳಿಂದ ತಿಳಿಯಲಾಗಿದೆ. ಕರಿಬೇವಿನಲ್ಲಿ ಸಾಕಷ್ಟು ಕಬ್ಬಿನಾಂಶ ಇದೆ ಹಾಗು ದೇಹಕ್ಕೆ ಬೇಕಾಗುವ ಪೋಷಕಾಂಶಗಳಿವೆ ಇದನ್ನು ತಿಳಿದರು ಊಟದಲ್ಲಿ ಸೇವಿಸಲು ಹಿಂದೆ ಮುಂದೆ ನೋಡುತ್ತೇವೆ.

ಕರಿಬೇವು ಕ್ಯಾನ್ಸರ್ ಹೇಗೆ ನಿವಾರಿಸಬಲ್ಲದು: ಕೊಲ್ಕತ್ತದಲಿರುವ ಭಾರತಿ ವಿಶ್ವವಿದ್ಯಾಲದ ಸಂಶೋಧನೆ ತಂಡವೊಂದು ಇತ್ತೀಚಿಗೆ ಕರಿಬೇವಿನಲ್ಲಿ ಕ್ಯಾನ್ಸರ್ ನಿವಾರಣೆಯಾಗುವುದನ್ನು ಕಂಡುಹಿಡಿದಿದೆ. ಇದರ ಎಲೆಗಳಲ್ಲಿ ”ಮಹಾನೈನ್” ಎಂಬ ಪದಾರ್ಥ ಇದ್ದು, ಇದು ಕ್ಯಾನ್ಸರ್ ನಿಯಂತ್ರಣ ಮಾಡಬಲ್ಲದು ಅನ್ನೋದನ್ನ ಅಧ್ಯಾಯನ ತಂಡ ತಿಳಿಸಿದೆ. ಆಗಾಗಿ ಪುರುಷರು ಕರಿಬೇವನ್ನು ಹೆಚ್ಚಾಗಿ ಬಳಸುವುದು ಒಳ್ಳೆಯದು.

ಇದರಿಂದ ದೇಹಕ್ಕೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಪ್ರತ್ಯೇಕವಾಗಿ ಇದು ಕ್ಯಾನ್ಸರ್ ಕಣಗಳನ್ನು ಮಾತ್ರ ನಿಯಂತ್ರಿಸುತ್ತದೆ ಎಂಬುದನ್ನು ತಿಳಿಯಲಾಗಿದೆ, ಮತ್ತೊಂದು ಉಪಯೋಗವೇನೆಂದರೆ ಕರಿಬೇವಿನಲ್ಲಿರುವ ‘ಮಹಾನೈನ್’ ಅಂಶ ಲ್ಯುಕೇಮಿಚಿಯ ಎಂಬ ಚರ್ಮ ರೋಗವನ್ನು ಕೂಡ ನಿಯಂತ್ರಿಸುತ್ತದೆ ಅನ್ನೋದನ್ನ ಸಂಶೋಧನೆಯ ತಂಡ ತಿಳಿಸಿದೆ. ಅಡುಗೆಯಲ್ಲಿ ಬಲಿತ ಕರಿಬೇವಿನ ಎಲೆಗಳನ್ನು ಒಣಗಿಸಿ ಬಳಸುವುದರಿಂದ ಕೂಡ ಪ್ರಯೋಜನವಿದೆ.

LEAVE A REPLY

Please enter your comment!
Please enter your name here