ನೀವು ನಿತ್ಯವೂ ಕೊತ್ತಂಬರಿ ಬೀಜವನ್ನು ಅಡುಗೆಯಲ್ಲಿ ಉಪಯೋಗಿಸಿದರೆ ಕೂದಲ ಬೇರುಗಳು ಧೃಡವಾಗುತ್ತದೆ ಹಾಗು ಕೂದಲು ಉದುರುವ ಪ್ರಮಾಣ ಕೂಡ ಕಡಿಮೆಯಾಗುತ್ತದೆ.

ಕೊತ್ತಂಬರಿ ಸೊಪ್ಪಿಗಿಂತ ಕೊತ್ತಂಬರಿ ಬೀಜಗಳಲ್ಲಿಯೇ ಪೋಷಕಾಂಶಗಳು ಹೆಚ್ಚಿರುತ್ತದೆ. ಇದರ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವಾರು ರೋಗಗಳಿಗೆ ರಾಮಬಾಣವಿದ್ದಂತೆ. ಆದ್ದರಿಂದ ನಮ್ಮ ಪೂರ್ವಜರು ಪ್ರತಿನಿತ್ಯ ಕೊತ್ತಂಬರಿ ಬೀಜವನ್ನು ಬಳಸುತಿದ್ದರು. ಸಾಮಾನ್ಯ ಚರ್ಮದ ತೊಂದರೆಗಳಾದ ತುರಿಕೆ, ಎಕ್ಸಿಮಾ, ಹುಳಕಡ್ಡಿ, ಕೆಂಪಾಗುವುದು, ಉರಿ ಮೊದಲಾದ ಚರ್ಮ ವ್ಯಾಧಿಗಳಿಗೆ ಕೊತ್ತಂಬರಿ ಪುಡಿಯನ್ನು ಉಗುರು ಬೆಚ್ಚನೆಯ ನೀರಿನಲ್ಲಿ ನಯವಾಗಿ ಲೇಪಿಸಿಕೊಳ್ಳುವುದರಿಂದ ಶೀಘ್ರ ಉಪಶಮನ ದೊರಕುತ್ತದೆ. ಕೊತ್ತಂಬರಿ ಪುಡಿಯಲ್ಲಿ ವಿಟಮಿನ್ ಎ, ಸಿ, ಬೀಟಾ ಕ್ಯಾರೋಟಿನ್ ಹಾಗು ಫೋಲಿಕ್ ಆಮ್ಲಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಕೊತ್ತಂಬರಿ ಬೀಜದಲ್ಲಿ ಫ್ಲೂ ಮತ್ತು ಶೀತವನ್ನು ತಡೆಗಟ್ಟುವ ಆಂಟಿ ಒಕ್ಸಿಡಾಂಟ್ ತಡೆಗಟ್ಟಲು ಸಹಕಾರಿಯಾಗುತ್ತದೆ. ಕೊತ್ತಂಬರಿ ಬೀಜಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ, ರಕ್ತದಲ್ಲಿನ ಚೋಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದಲ್ಲದೆ ಮಧುಮೇಹ ಬರುವುದನ್ನು ತಡೆಗಟ್ಟುತ್ತದೆ. ಕೊತ್ತಂಬರಿ ಪುಡಿಯಲ್ಲಿ ಪೋಷಕಾಂಶಗಳು ಅಧಿಕವಿರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಜೊತೆಯಲ್ಲಿ ಇದನ್ನು ಓದಿ ಮಧುಮೇಹಕ್ಕೆ ‘ರಾಮಬಾಣ’ ಸೀಬೆ.

ಪೇರಲೆ (ಸೀಬೆ) ಅತಿ ಹೆಚ್ಚು ಆಂಟಿ ಒಕ್ಸಿಡಾಂಟ್ ಹೊಂದಿರುವ ಹಣ್ಣು. ಇದರಲ್ಲಿ ವಿಟಮಿನ್ ‘ಸಿ ‘ ಜೀವಸತ್ವವು ಹೇರಳವಾಗಿದೆ. ಅಮೆರಿಕನ್ ಜರ್ನಲ್ ಆಫ್ ಕಾರ್ಡಿಯೋವಾಸ್ಕ್ಯುಲರ್ ಡಿಸೀಸಸ್ ರವರು ನಡೆಸಿರುವ ಸಂಶೋದನೆಯೊಂದರಲ್ಲಿ ಪ್ರತಿನಿತ್ಯ ಸೀಬೆ ಹಣ್ಣು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ವರದಿಯಂತೆ ಪ್ರತಿದಿನ ಮೂರು ಸಲ ಹಣ್ಣನ್ನು ಸೇವಿಸುವುದರಿಂದ ಶೇ.30 ರಷ್ಟು ಹೃದಯ ಸಮಸ್ಯೆಗಳಿಂದ ದೂರವಿರಬಹುದು.

ಮಧುಮೇಹ ನಿಮ್ಮನ್ನು ಬಾಧಿಸುತ್ತಿದ್ದರೆ ಅದಕ್ಕೆ ಬೇಕಾದ ನಾರಿನಾಂಶ ದೇಹಕ್ಕೆ ಬೇಕಾದರೆ ಅದು ಸೀಬೆ ಹಣ್ಣಿನಲ್ಲಿ ಸಿಕ್ಕಾಪಟ್ಟೆ ಸಿಗುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿರುವ ಸಕ್ಕರೆ ಅಂಶವನ್ನು ಇದು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ನೀವು ಟೈಪ್‌-2 ಬಗೆಯ ಡಯಾಬಿಟಿಕ್‌ ಆಗಿದ್ದಲ್ಲಿ ಅದಕ್ಕೆ ಇದಕ್ಕಿಂತ ಒಳ್ಳೆ ಔಷಧ ಇನ್ನೊಂದಿಲ್ಲ ಎನ್ನಲಾಗುತ್ತದೆ.

ದೇಹಕ್ಕೆ ಉಪಯುಕ್ತವಾಗುವಂಥ ಮ್ಯಾಂಗನೀಸ್‌ ಅಂಶದೂ ಸೀಬೆಯಲ್ಲಿ ಹೇರಳವಾಗಿದೆ. ಥೈರಾಯ್ಡ ಸಮಸ್ಯೆಗೆ ಇದು ನೇರ ಸಹಕಾರಿ ಅಲ್ಲದೇ ಹೋದರೂ ಪರೋಕ್ಷವಾಗಿ ನಿಮ್ಮ ಹಾರ್ಮೋನ್‌ ಏರುಪೇರಿಗೆ ಕಾರಣವಾಗುವ ಥೈರಾಯ್ಡ ಸಮಸ್ಯೆಗೆ ಸೀಬೆ ಪರಿಣಾಮಕಾರಿ ಔಷಧವಾಗಿದೆ.

ಬಾಳೆ ಹಣ್ಣಲ್ಲಿರುವಷ್ಟೇ ಪೊಟ್ಯಾಷಿಯಂ ಅಂಶ ಸೀಬೆಯಲ್ಲೂ ಇದೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪೊಟ್ಯಾಶಿಯಂ ಮಹತ್ವದ ಪಾತ್ರ ವಹಿಸುತ್ತದೆ. ಗರ್ಭಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಫೋಲಿಕ್‌ ಆಸಿಡ್‌ ಪ್ರಮಾಣವನ್ನು ಅಧಿಕವಾಗಿ ಒದಗಿಸುವುದು ಸೀಬೆ ಹಣ್ಣು. ಇದು ಗರ್ಭ ಧರಿಸಲು ಸಹಕಾರಿಯಾಗುತ್ತದೆ. ಹಾಗಾಗಿ ಗರ್ಭಿಣಿಯರು ಈ ಹಣ್ಣನ್ನು ತಿನ್ನುವುದು ಬಹಳ ಒಳ್ಳೆಯದು.
ಕೊಬ್ಬಿರುವ ಆಹಾರವನ್ನು, ಕೃತಕ ಸಿಹಿಕಾರಕಗಳನ್ನು, ಅಧಿಕವಾಗಿ ಆಲ್ಕೋಹಾಲ್ ಇತ್ಯಾದಿ ಸೇವಿಸಬೇಡಿ.

ಒಂದು ಚಿಕ್ಕ ಚಮಚದಷ್ಟು ಮೆಂತೆಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಈ ನೀರು ಮತ್ತು ಕಾಳುಗಳನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ, ಸೀತಾಫಲವು ಮಧುಮೇಹಿ ಪ್ರತಿರೋಧಕ ಗುಣಲಕ್ಷಣಗಳನ್ನು ಹೊ೦ದಿದೆ ಸೀತಾಫಲಗಳಲ್ಲಿ ಅನೇಕ ಮಧುಮೇಹಿ ಪ್ರತಿಬ೦ಧಕ ಗುಣಲಕ್ಷಣಗಳಿವೆ. ಸೀತಾಫಲದ ಈ ವಿಶಿಷ್ಟವಾದ ಗುಣವಿಶೇಷವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸಲು ಸಹಕರಿಸುತ್ತದೆ ಹಾಗೂ ಶರೀರದ ಮಾ೦ಸಖ೦ಡಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವ೦ತೆ ಮಾಡುವುದರ ಮೂಲಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ತನ್ಮೂಲಕ ಶರೀರದ ಸಕ್ಕರೆಯ ಪ್ರಮಾಣದ ಬಳಕೆಯನ್ನು ನಿಯಮಿತಗೊಳಿಸಿ ನಿಯ೦ತ್ರಿಸಲು ಸಹಕರಿಸುತ್ತದೆ

LEAVE A REPLY

Please enter your comment!
Please enter your name here