ಹಲವಾರು ಜನ ಹಲವು ಚರ್ಮ ರೋಗಗಳಿಂದ ಬೇಸತ್ತಿರುತ್ತಾರೆ, ಆ ರೋಗಗಳು ಅನುವಂಶೀಯವಾಗಿ ಬಂದಿರಬಹುದು ಅಥವಾ ಅವರ ವಾತಾವರಣದಿಂದ ಬಂದಿರಬಹುದು. ಈ ಕೆಳಗಿನ ಟಿಪ್ಸ್ ಗಳನ್ನೂ ದಿನನಿತ್ಯ ಅನುಸರಿಸಿ, ನಿಮ್ಮ ಚರ್ಮ ರೋಗಗಳಿಗೆ ತಕ್ಕ ಮಟ್ಟಿನ ಪರಿಹಾರ ಸಿಗಬಹುದು.

ಪ್ರತೀ ನೀರಿನಲ್ಲಿ 2 ಚಮಚ ಜೇನು ಹಾಕಿ ಸೇವಿಸಬೇಕು

ಲೋಳೆಸರದೊಂದಿಗೆ ಅರಿಷಿಣ ಕಲೆಸಿ ಲೇಪಿಸುವುದು.

ಪಚ್ಚ ಕರ್ಪೂರಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ಲೇಪಿಸುವುದು.

ರಾತ್ರಿ ಊಟದ ಮೇಲೆ ಮಿತಿ ಹೇರಿ.

ಸ್ನಾನಕ್ಕೆ ಕಡ್ಲೆ ಹಿಟ್ಟು, ಹೆಸರು ಹಿಟ್ಟು, ಅರಿಷಿಣ ಚೂರ್ಣ ಕರ್ಪೂರ ಸೇರಿಸಿ ಉಪಯೋಗಿಸಬೇಕು.

ಬಟ್ಟೆಯನ್ನು ಹತ್ತಿಯಿಂದ ತಯಾರಿಸಿದ್ದನ್ನು ಉಪಯೋಗಿಸಬೇಕು.

ನಿತ್ಯ ಸ್ನಾನವನ್ನು ತಣ್ಣೀರಿನಿಂದ ಮಾಡಬೇಕು. ನೀರಿನಲ್ಲಿ ಗೋಮೂತ್ರ ಹಾಕಬೇಕು.

ದಿನಾಲು 4 ಚಮಚ ದೇಶಿ ಆಕಳ ಗೋಮೂತ್ರ ಸೋಸಿ ಸೇವಿಸಬೇಕು ಅಥವಾ ಗೋ ಅರ್ಕ ಸೇವಿಸುವುದು.

ಚರ್ಮಕ್ಕೆ ಶ್ರೀಗಂಧ ಮತ್ತು ಅರಿಷಿಣವನ್ನು ನಿಂಬೆರಸದಲ್ಲಿ ಗಂಧಮಾಡಿ ಲೇಪಿಸುವುದು.

ಊಟದಲ್ಲಿ ಸೈಂಧ್ರ ಲವಣ, ಮೆಣಸು, ನಿಂಬೆ ಹುಳಿ, ಬೆಲ್ಲ, ರುಚಿಗಾಗಿ ಬಳಸಬೇಕು.

ತಾಮ್ರದ ಪಾತ್ರೆ ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಉಪಯೋಗಿಸಬೇಕು.

ದಿನಾಲೂ 2 ಸಲ ತುಳಸಿ ಕಷಾಯ ಸೇವಿಸಬೇಕು.

ವಾರಕ್ಕೊಮ್ಮೆ 1 ಲೀಟರ್ ಬಿಸಿ ನೀರಿಗೆ ಸ್ವಲ್ಪ ಸೈಂಧ್ರ ಲವಣ ಹಾಕಿ ಸೇವಿಸಬೇಕು (ಬೆಳಿಗ್ಗೆ)

ದೇಶಿ ಆಕಳ ಸಗಣಿಯನ್ನು ಗೋಮೂತ್ರ ಕಲೆಸಿ ಲೇಪಿಸುವುದು.

ಕಷಾಯವನ್ನು ತಯಾರಿಸುವಾಗ ನೀರಿಗೆ ಹಾಕುವ ಮೂಲಿಕೆಗಳನ್ನು 10 ನಿಮಿಷ ಕುದಿಸಿ ಸೋಸಿ ಸೇವಿಸಬೇಕು, ಹಾಲು ಸೇರಿಸಬಾರದು.

ಜೊತೆಯಲ್ಲಿ ಇದನ್ನು ಓದಿ ಜೀರಿಗೆಯಿಂದಾಗುವ ಪ್ರಯೋಜನಗಳು.

ಜೀರಿಗೆ, ನಾವು ದಿನನಿತ್ಯಅಡಿಗೆಯಲ್ಲಿಬಳಸುವವಸ್ತು, ಇದರಿಂದದೊರಕುವಪ್ರಯೋಜನಗಳುಮಾತ್ರಬಹಳ, ಸುಲಭವಾಗಿ ಬಳಸಿಕೊಂಡು ಏನೆಲ್ಲಾ ಉಪಯೋಗಪಡೆಯ ಬಹುದು ಎಂದು ನೋಡೋಣ.

ಈ ಗ್ಯಾಸ್ಟರೈಟಿಸ್ ಅನ್ನೋದು ಈಗ ಬಹಳ ಕಾಮನ್ ಖಾರ ತಿಂದರೆ ಎದೆ ಉರಿ, ಆಲೂಗಡ್ಡೆ ತಿಂದರೆ ಹೊಟ್ಟೆ ಉಬ್ಬರಿಸಿದ ಹಾಗೆ ಆಗುತ್ತದೆ ಅನ್ನುವವರೆಲ್ಲ ಕಾಲು ಚಮಚ ಜೀರಿಗೆಯನ್ನು ಬಾಯಿಗೆ ಹಾಕಿ ನಿಧಾನವಾಗಿ ಜಗಿಯುತ್ತ ರಸವನ್ನು ನುಂಗುವುದರಿಂದ ಅರ್ಧ ಗಂಟೆಯಲ್ಲಿ ಎದೆಯುರಿ ಕಡಿಮೆಯಾಗುತ್ತದೆ.

ಬಾಯಿಯಲ್ಲಿವಾಸನೆ ಇದ್ದರೆ ಹೀಗೇ ಹಸಿ ಜೀರಿಗೆಜಗಿಯುವುದರಿಂದವಾಸನೆಯು ಕಡಿಮೆಯಾಗುತ್ತದೆ.

ಮುಟ್ಟಿನ ಹೊಟ್ಟೆನೋವಿನಿಂದ ನರಳುವ ಸ್ತ್ರೀಯರು ಎರಡು ಚಮಚಜೀರಿಗೆ, ಒಂದು ತುಂಡು ಬೆಲ್ಲವನ್ನು ಎರಡು ಲೋಟ ನೀರಿನಲ್ಲಿ ಕುದಿಸಿ ಆರಿಸಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುವುದು.

ಜೀರಿಗೆಮತ್ತುಬೆಲ್ಲವನ್ನುಜಗಿದು ತಿಂದರೆ ಅಜೀರ್ಣದ ಸಮಸ್ಯೆಗಳು ಪರಿಹಾರವಾಗುತ್ತವೆ.

ಗರ್ಭಿಣಿ ಸ್ತ್ರೀಯರು ದಿನವೂ ಜೀರಿಗೆ ಕಷಾಯವನ್ನು ಕುಡಿದರೆ ಹೆರಿಗೆಯು ಸುಸೂತ್ರವಾಗಿಆಗಲು ಸಹಕಾರಿ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here