ನಮ್ಮ ದೇಹದ ಅಂಗಾಂಗಳಲ್ಲಿ ಕಣ್ಣು ಕೂಡ ಒಂದು, ಕಣ್ಣಿನ ಉತ್ತಮ ಆರೋಗ್ಯ ಮತ್ತು ಕಾರ್ಯನಿರ್ವಹಣೆಗೆ ಹಲವು ಪರಿಸರ ಮತ್ತು ವೈಯಕ್ತಿಕ ಕಾರಣಗಳು ಪ್ರಮುಖ ಪಾತ್ರ ವಹಿಸುತ್ತಡೇ, ನಿಮ್ಮ ಜೀವನಶೈಲಿಯಲ್ಲಿ ಕೆಲವು ಸಣ್ಣ ಮಾರ್ಪಾಡುಗಳನ್ನು ಮಾಡಿಕೊಂಡರೆ ಕಣ್ಣಿನ ಆರೋಗ್ಯ ಮತ್ತು ಉತ್ತಮ ಜೀವನಶೈಲಿಯನ್ನು ನಡೆಸಲು ಸಾಧ್ಯ, ನಿಮ್ಮ ಕಣ್ಣ ರೆಪ್ಪೆಗೆ ಬಿಸಿ ನೀರನ್ನು ಮೃದುವಾಗಿ ಹಚ್ಚಿಕೊಳ್ಳಿ.

ಕಣ್ಣು ರೆಪ್ಪೆಯನ್ನು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ, ಇದರಿಂದ ಕಣ್ಣ ರೆಪ್ಪೆಯಲ್ಲಿನ ಸಣ್ಣ ಗ್ರಂಥಿಗಳು ಆರೋಗ್ಯವಾಗಿ ಉಳಿಯುತ್ತದೆ, ಕೆಟ್ಟ ಅಭ್ಯಾಸಗಳಿಂದ ದೂರವಿರಿ ಧೂಮಪಾನ, ಮದ್ಯಪಾನಗಳು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಆರೋಗ್ಯಯುತ ಕಣ್ಣುಗಳಿಗೆ ಆರೋಗ್ಯಯುತ ಆಹಾರ ಪದ್ಧತಿ ರೂಢಿಸಿಕೊಳ್ಳಿ ಕ್ಯಾರೆಟ್, ಹಸಿರು ತರಕಾರಿಗಳು, ಒಣ ಹಣ್ಣುಗಳು, ಮೀನು ಮೊದಲಾದ ಆಹಾರ ಪದಾರ್ಥಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ಕಣ್ಣಿನ ಸುತ್ತ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸುವಾಗ ಎಚ್ಚರಿಕೆಯಿಂದಿರಿ. ಕಾಡಿಗೆ, ಐ ಲೈನರ್, ಮಸ್ಕರಾಗಳನ್ನು ಸರಿಯಾದ ವಿಧಾನದಲ್ಲಿ ಹಚ್ಚಿಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ಕಣ್ಣಿನ ಮೇಕಪ್ ಗಳನ್ನು ತೊಳೆದು ಮಲಗಬೇಕು, ಹಾಗೆಯೇ ಬಿಡಬಾರದು ಕಣ್ಣು ಕೆಂಪಾಗುವುದು, ನೋವಾಗುವುದು, ನೀರು ಬರುವುದು, ಕಣ್ಣು ಆಯಾಸವಾಗುವುದು ಇತ್ಯಾದಿ ಸಮಸ್ಯೆಗಳು ಉಂಟಾಗುತ್ತಿದ್ದರೆ ತಕ್ಷಣವೇ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.

ಜೊತೆಯಲ್ಲಿ ಇದನ್ನು ಓದಿ ಔಷಧೀಯ ಗುಣಗಳು ಹೊಂದಿರುವ ಕುಪ್ಪಿಗಿಡದ ಒಂದಿಷ್ಟು ಮಾಹಿತಿ ತಿಳಿದುಕೊಂಡು ಉಪಯೋಗಿಸಿ.

ಕುಪ್ಪಿಗಿಡಕ್ಕೆ ಔಷಧೀಯ ಮಹತ್ವ್ತ್ತವಿದೆ. ಇದರ ಎಲೆ, ಎಳೆಯ ಕುಡಿಗಳು, ಬೇರು ಮತ್ತು ಹೂವುಗಳನ್ನು ಕಷಾಯ, ಪುಡಿ, ಹೊಸರಸ ಇವುಗಳ ರೂಪದಲ್ಲಿ ಜಂತುಹುಳುನಾಶಕವಾಗಿ, ಅಸ್ತಮ ಕೆಮ್ಮು ಮುಂತಾದ ಶ್ವಾಸಕೋಶಸಂಬಂಧಿ ರೋಗಗಳ ನಿವಾರಕವಾಗಿ, ವಿರೇಚಕವಾಗಿ, ಮನಶ್ಯಾಂತಿಕಾರಕವಾಗಿ, ವಾಂತಿಕಾರಕವಾಗಿ, ಸುಪ್ತ್ಯಾವಾಹಕವಾಗಿ ಬಳಸುತ್ತಾರೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.

ದೇಹ ಕಾಂತಿಗೆ : ಶುದ್ಧವಾದ ಎಳ್ಳೆಣ್ಣೆಯಲ್ಲಿ ಒಂದು ಹಿಡಿ ಕುಪ್ಪಿ ಎಲೆಗಳನ್ನು ಹಾಕಿ ಕಾಯಿಸಿ ಶೋಧಿಸಿಟ್ಟುಕೊಳ್ಳುವುದು. ತಣ್ಣಗಾದ ಮೇಲೆ ತೈಲವನ್ನು ಹಚ್ಚಿ ಸ್ನಾನ ಮಾಡುವುದು.

ವಾತನೋವು ಸೆಳೆತಕ್ಕೆ : ಹಸೀ ಕುಪ್ಪಿ ಎಲೆಗಳನ್ನು ಜಜ್ಜಿ, ಎಳ್ಳೆಣ್ಣೆಯಲ್ಲಿ ಬೆರೆಸಿ, ತೈಲ ಉಳಿಯುವಂತೆ ಕಾಯಿಸಿ, ಶೋಧಿಸಿಟ್ಟುಕೊಳ್ಳುವುದು ಬೇಕಾದರೆ ಸುಗಂಧ ವಸ್ತುಗಳ ಚೂರ್ಣವನ್ನು ಸೇರಿಸಿಕೊಳ್ಳಬಹುದು, ನೋವಿರುವ ಕಡೆಗೆ ಹಚ್ಚುವುದು.

ಮಲಬದ್ಧತೆಗೆ : ಮಕ್ಕಳು ಮಲಬದ್ಧತೆಯಾಗಿ ಅಳುತ್ತಿದ್ದರೆ ಹಸೀ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಸ್ವಲ್ಪ ಭಾಗವನ್ನು ಮಲದ್ವಾರದಲ್ಲಿ ಸೇರಿಸುವುದು.

ಮಕ್ಕಳ ಶೀತ ವ್ಯಾಧಿಗೆ : ಹಸೀ ಎಲೆಗಳ ರಸವನ್ನು ಸ್ವಲ್ಪ ಜೇನು ಸೇರಿಸಿ ನೆಕ್ಕುವುದು, ಮೊದಲು ಸ್ವಲ್ಪ ವಾಂತಿಯಾಗಿ, ನಂತರ ವಾಸಿಯಾಗುವುದು ಈ ರಸ ಸೇವಿಸುವುದರಿಂದ ದೊಡ್ಡವರಲ್ಲಿ ಕೆಮ್ಮು, ಕಫ, ದಮ್ಮು ಗುಣವಾಗುವುದು.

ಮಕ್ಕಳ ಹೊಟ್ಟೆನೋವಿಗೆ : ಬೆಳ್ಳುಳ್ಳಿ ಮೆಣಸು ಇವುಗಳ ಸಮತೂಕದ ಎರಡು ಭಾಗ ಕುಪ್ಪಿ ಸೊಪ್ಪನ್ನು ಸೇರಿಸಿ, ನುಣ್ಣಗೆ ಅರೆದು, ಸ್ವಲ್ಪ ಭಾಗವನ್ನು ಹಾಲಿನಲ್ಲಿ ಕದಡಿ ಕುಡಿಸುವುದು.

ಪೀನಾಸಿ ರೋಗಕ್ಕೆ, ಮೂಗಿಗೆ ವಾಸನೆ ತಿಳಿಯದಿರುವುದು : ಒಂದು ಬೆಳ್ಳುಳ್ಳಿ ಹಿಲಕು, ಒಂದು ಮೆಣಸಿನಕಾಳು ಮತ್ತು ನಾಲ್ಕೈದು ಕುಪ್ಪಿ ಎಲೆಗಳನ್ನು ಸೇರಿಸಿ, ನುಣ್ಣಗೆ ಅರೆದು ಬಟ್ಟೆಯಲ್ಲಿ ಶೋಧಿಸಿ ಮೂಗಿನ ಎರಡೂ ಹೊಳ್ಳೆಗಳಿಗೆ ನಾಲ್ಕೈದು ತೊಟ್ಟು ಬಿಡುವುದು.

ತುರಿಕೆ, ಕಜ್ಜಿಗೆ : ಹಸೀ ಎಲೆಗಳನ್ನು ತಂದು, ಸ್ವಲ್ಪ ಅಡಿಗೆ ಉಪ್ಪು ಸೇರಿಸಿ ನುಣ್ಣಗೆ ಕಲ್ಪತ್ತಿನಲ್ಲಿ ಅರೆದು ಪಟ್ಟು ಹಾಕುವುದು, ಸಿಪಲಿಸ್ ಎನ್ನುವ ಮರ್ಮಾಂಗ ಹುಣ್ಣಿಗೆ ಸಹ ಇದೇ ರೀತಿ ಚಿಕಿತ್ಸೆ ಮಾಡುವುದು.

ಮೂರ್ಛೆಗೆ : ಹಸೀ ಕುಪ್ಪಿ ಎಲೆಎಗಳ ರಸವನ್ನು ಮೂಗಿನ ಎರಡೂ ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು, ಬಹು ಬೇಗ ಪ್ರಜ್ಞೆ ಬಂದು ಎಚ್ಚರವಾಗುವುದು, ಒಂದೆರಡು ಬಾರಿ ತಣ್ಣೀರನ್ನು ಮುಖಕ್ಕೆ ತುಂತುರು ರೂಪದಂತೆ ಚಿಮುಕಿಸುವುದು, ಕಿವಿ ನೋವಿನಲ್ಲಿ ಎಲೆಗಳ ರಸವನ್ನು ನೋವಿರುವ ಕವಿಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು, ಸ್ವಲ್ಪ ಬಿಸಿ ಮಾಡಿ ಹಾಕುವುದು.

LEAVE A REPLY

Please enter your comment!
Please enter your name here