ವಾಯುಪ್ರಕೋಪ ಹೆಚ್ಚಿಸುವ ಆಹಾರ ವರ್ಜಿಸಿ : ವಾಯುಪ್ರಕೋಪ ಹೆಚ್ಚಿಸುವ ಆಹಾರಗಳಾದ ಆಲೂಗಡ್ಡೆ, ಬ್ರೊಕೋಲಿ, ಬದನೆ, ಎಲೆಕೋಸು, ಮದ್ಯ, ಜೋಳ, ಕಡ್ಲೆಬೇಳೆ, ಶೇಂಗಾ ಇತ್ಯಾದಿಗಳನ್ನು ವರ್ಜಿಸಿ. ವಾಯುಪ್ರಕೋಪದಿಂದ ಶೇಂಗಾ ಇತ್ಯಾದಿಗಳನ್ನು ವರ್ಜಿಸಿ, ವಾಯುಪ್ರಕೋಪದಿಂದ ಹೊಟ್ಟೆಯುಬ್ಬುತ್ತದೆ ಹಾಗೂ ದೇಹದ ಆಕಾರವನ್ನು ಕೆಡಿಸುತ್ತದೆ.

ಸಮಯಪಾಲನೆ : ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಯಾವ ಯಾವ ಆಹಾರವನ್ನು ತಿನ್ನಬಾರದೆಂದು ಒಂದು ಪಟ್ಟಿ ಮಾಡಿಟ್ಟುಕೊಳ್ಳಿ, ಸೂಕ್ತ ಸಮಯಕ್ಕೆ ಆರೋಗ್ಯಕರ ಆಹಾರವನ್ನು ಮಿತಪ್ರಮಾಣದಲ್ಲಿ ಸೇವಿಸಿ ಹಾಗೂ ಪ್ರತಿದಿನವೂ ಒಂದೇ ಸಮಯಕ್ಕೆ ಆಹಾರ ಸೇವಿಸಿ, ಕೆಲವೇ ದಿನಗಳಲ್ಲಿ ನಮ್ಮ ದೇಹ ಈ ಸಮಯಕ್ಕೆ ಹೊಂದಿಕೊಂಡು ಅಗತ್ಯವಿರುವ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ, ಇದು ಜೀರ್ಣಕ್ರಿಯೆಗೆ ಹೆಚ್ಚಿನ ಸಹಕಾರಿ ನೀಡುತ್ತದೆ, ಸಮಯಪಾಲನೆ ಮಾಡದಿದ್ದರೆ ಜೀರ್ಣಕ್ರಿಯೆಯು ಏರುಪೇರಾಗುತ್ತದೆ ಹಾಗೂ ಹೆಚ್ಚು ಹೆಚ್ಚು ಆಹಾರ ತಿನ್ನಲು ಪ್ರೇರೇಪಿಸುತ್ತದೆ, ಇವುಗಳ ಜೊತೆಗೆ ಸಾಕಷ್ಟು ನಡಿಗೆ, ನಿಧಾನಗತಿಯ ಓಟ, ಮನೆಕೆಲಸ, ಮೆಟ್ಟಿಲುಗಳನ್ನು ಹತ್ತುವುದು ಮೊದಲಾದ ಲಘು ವ್ಯಾಯಾಮಗಳಿಂದ ತೂಕ ಇಳಿಸುವ ಪ್ರಕ್ರಿಯೆ ಹೆಚ್ಚಿನ ಬಲ ಸಿಗುತ್ತದೆ ಹಾಗೂ ಹೆಚ್ಚಿನ ಶ್ರಮವಿಲ್ಲದೆ ತೂಕ ಇಳಿಯುತ್ತದೆ.

ಶುಂಠಿ : ತೂಕ ಕಳೆದುಕೊಳ್ಳಲು ಇದು ಅತ್ಯುತ್ತಮ ಗಿಡಮೂಲಿಕೆಗಳಲ್ಲಿ ಒಂದು, ಇದು ನೀವು ಸೇವಿಸುವ ಆಹಾರದಲ್ಲಿರುವ ಉಷ್ಣದ ಪ್ರಭಾವವನ್ನು ನಿಯಂತ್ರಿಸಿ, ಪೂರ್ಣ ತೃಪ್ತಿ ಉಂಟು ಮಾಡಿ ಹೆಚ್ಚು ಕ್ಯಾಲರಿ ಇರುವ ಆಹಾರವನ್ನು ಸೇವಿಸದಂತೆ ನೋಡಿಕೊಳ್ಳುತ್ತದೆ.

ಗ್ರೀನ್ ಟೀ : ತೂಕ ಕಳೆದುಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ಇದು ಸಾಮಾನ್ಯವಾದ ಪಾನೀಯವಾಗಿದೆ, ಇದು ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲರಿ ದಹಿಸಲು ನೆರವಾಗುತ್ತದೆ, ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳಿದ್ದು ಇದು ಕೊಬ್ಬು ದಹಿಸುವ ಪ್ರಕ್ರಿಯೆಗೆ ನೆರವಾಗುತ್ತದೆ, ಕೊಬ್ಬು ಕರಗಿಸಲು ಇದು ಫರಫೆಕ್ಟ್.

ನೀವು ದಾಸವಾಳದ ಹೂವಿನ ರುಚಿಯನ್ನು ಪ್ರೀತಿಸಿದರೆ ಆಗ ನೀವು ಹೆಚ್ಚು ಸಮಯ ತೆಗೆದುಕೊಳ್ಳದೆ ದೇಹದ ತೂಕ ಇಳಿಸಿಕೊಳ್ಳುವುದು ಖಂಡಿತ ಇದರಲ್ಲಿ ನ್ಯೂಟ್ರೀನ್, ಪ್ಲಾವನಾಯಿಡ್ ಮತ್ತು ಹಲವಾರು ರಿತುಯಾ ಖನಿಜಾಂಶಗಳಿವೆ, ಇವೆಲ್ಲವೂ ನಿಮ್ಮ ದೇಹವು ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಸ್ ಗಳನ್ನೂ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತವೆ ಇದನ್ನು ಯಾವುದೇ ರೀತಿಯಲ್ಲೂ ಸೇವಿಸಬಹುದು.

LEAVE A REPLY

Please enter your comment!
Please enter your name here