ಈಗಿನ ಆತುರದ ಜೀವನ ಶೈಲಿಯಲ್ಲಿನ ಆಹಾರದ ವ್ಯತ್ಯಾಸದಿಂದಾಗಿ ಹೆಚ್ಚಾಗಿ ಎಲ್ಲರಲ್ಲೂ ಕಾಡುವ ಸಮಸ್ಯೆ ಎಂದರೆ ಅಜೀರ್ಣತೆ. ಇದು ಮನುಷ್ಯನನ್ನ ಕೂಗಿಸುತ್ತದೆ, ಅಜೀರ್ಣವಾದಕೂಡಲೇ ನಾವು ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತೇವೆ ಆದರೆ ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗಿ ಸಮಯ ಹಾಗೂ ಹಣ ಎರಡನ್ನು ಹಾಲು ಮಾಡುವ ಬದಲು ಮನೆಯಲ್ಲಿಗೆ ಸುಲಭವಾಗಿ ಪರಿಹರಿಸಿಕೊಳ್ಳ ಬಹುದು. ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಕೆಲವು ಮನೆ ಮದ್ದುಗಳು ಇಲ್ಲಿವೆ ನೋಡಿ.

* ಬೆಳ್ಳುಳ್ಳಿ


ಬೆಳ್ಳುಳ್ಳಿಯ ಎರಡು ಎಸಳುಗಳನ್ನ ತುರಿದುಕೊಂಡು ಅದಕ್ಕೆ ಸ್ವಲ್ಪ ಪ್ರಮಾಣದ ಉಪ್ಪು ಮತ್ತು ಅಡುಗೆ ಸೋಡಾ ಬೆರೆಸಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.

* ಈರುಳ್ಳಿ ಜ್ಯೂಸ್


ಎರಡು ಚಮಚ ಈರುಳ್ಳಿ ರಸ ತೆಗೆದುಕೊಂಡು ಅದಕ್ಕೆ ಎರಡು ಚಮಚ ಜೇನು ತುಪ್ಪ ಮತ್ತು ಅಷ್ಟೇ ಪ್ರಮಾಣದ ಕಾಳುಮೆಣಸು ಸೇರಿಸಿಕೊಂಡು ಸೇವಿಸಿದರೆ ಅಜೀರ್ಣತೆ ಕಡಿಮೆಯಾಗಿ ಜೀರ್ಣ ಶಕ್ತಿ ಹೆಚ್ಚುತ್ತದೆ.

* ಅನಾನಾಸು


ಪೈನಾಪಲ್ ಜ್ಯೂಸ್ ಗೆ ಸ್ವಲ್ಪ ಶುಂಠಿ, ಕಾಳುಮೆಣಸು, ಸಾವಯವ ಸಕ್ಕರೆ ಹಾಕಿಕೊಂಡು ಕುಡಿಯಿರಿ. ಹೀಗೇ ಮೂರು ದಿನ ಮಾಡುತ್ತಿದ್ದರೆ ಅಜೀರ್ಣ ಮಂಗಮಾಯ.

* ನಿಂಬೆ ಶರಬತ್ತು


ಇದು ಸಾಮಾನ್ಯವಾಗಿ ಎಲ್ಲರೂ ಮಾಡುವ ಸರಳ ವಿಧಾನವಾಗಿದೆ ನಿಂಬೆ ರಸ, ಸ್ವಲ್ಪ ಉಪ್ಪು ಸೇರಿಸಿ ತಿಂದರೆ ಜೀರ್ಣ ಶಕ್ತಿ ಹೆಚ್ಚುತ್ತದೆ ಹಾಗೂ ಪಿತ್ತದಿಂದಾಗಿ ವಾಂತಿಯಾಗುತ್ತಿದ್ದರೂ ಶಮನವಾಗುತ್ತದೆ.

LEAVE A REPLY

Please enter your comment!
Please enter your name here