ನಾವು ಸುಮ್ ಸುಮ್ನೆ ತಲೆ ಬಿಸಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇದ್ದಕಿದ್ದ ಹಾಗೆ ಮೂಗಿನಲ್ಲಿ ರಕ್ತ ನೋಡಿ ಗಾಬರಿ ಆದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಕೆಲವು ಕಾರಣಗಳಿಂದ ಸಾಮಾನ್ಯವಾಗಿ ಮೂಗಿನಲ್ಲಿ ರಕ್ತ ಸೋರುವಿಕೆ ಉಂಟಾಗುತ್ತದೆ. ಅಂತಹ ಕೆಲವು ಕಾರಣಗಳು ಇಲ್ಲಿವೆ ಓದಿ ತಿಳಿದುಕೊಳ್ಳಿ.

* ಪದೇ ಪದೇ ಮೂಗಿಗೆ ಬೆರಳು ಹಾಕುವ ಅಭ್ಯಾಸವಿದ್ದರೆ ಉಗುರು ತಾಗಿ ರಕ್ತ ಬರಬಹುದು.

* ಶೀತ ಅಥವಾ ಅಲರ್ಜಿ ಆದಾಗ ಆಗಾಗ ಸೀನುವುದು ಸಹಜ, ಹೀಗೆ ಸೀನುವಾಗ ಮೂಗು ಹಿಂಡುವುದರಿಂದ ರಕ್ತ ಸೋರಬಹುದು.

* ಶೈತ್ಯಗಾಲದಲ್ಲಿ ಉಂಟಾಗುವ ತೇವಾಂಶ ರಹಿತ ವಾತಾವರಣದಿಂದ ಮೂಗಿನ ತೆಳುವಾದ ಪದರ ಒಡೆದು ರಕ್ತ ಸೋರಬಹುದು.

* ಮೂಗಿಗೆ ಯಾವುದೋ ಕಾರಣಕ್ಕೆ ಹಾಕುವ ಔಷಧಗಳ ಅಲರ್ಜಿಯಿಂದ ಹೀಗಾಗಬಹುದು.

* ಮೂಗಿಗೆ ಆದ ಗಾಯ ಅಥವಾ ಸೋಂಕಿನಿಂದ ರಕ್ತ ಸೋರುವಿಕೆ ಆಗಬಹುದು.

* ಈ ಕಾರಣಗಳಲ್ಲದೇ ಇನ್ನೇನೋ ಕಾರಣಗಳಿಂದ ರಕ್ತ ಸೋರುವಿಕೆ ಉಂಟಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

LEAVE A REPLY

Please enter your comment!
Please enter your name here