ನಮ್ಮ ದೇಹದ ಅರೋಗ್ಯ ಚನ್ನಗಿರ ಬೇಕು ಎಂದರೆ ಉತ್ತಮ ಆಹಾರದ ಸೇವನೆ ಮಾಡಬೇಕು. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡಬೇಕು. ಜೀರ್ಣ ಶಕ್ತಿ ಸರಿಯಾಗಿದ್ದರೆ ನಮ್ಮ ಅರೋಗ್ಯ ಸರಿಯಾಗಿದ್ದಂತೆ, ಜೀರ್ಣ ವ್ಯವಸ್ಥೆಯಲ್ಲಿ ಸ್ವಲ್ಪ್ ವ್ಯತಯಸ ಕಂಡರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಆರೋಗ್ಯದೆಡೆಗೆ ಗಮನ ಹರಿಸಿ ದೇಹಕ್ಕೆ ಹಿತವಾಗುವಷ್ಟು ಮಾತ್ರ ಆಹಾರ ಸೇವನೆಯನ್ನು ನಿಯಮಿತ ಸಮಯದಲ್ಲಿ ಸೇವಿಸುವುದರಿಂದ ಆಪಾಯ ತಪ್ಪಿಸಬಹುದಾಗಿದೆ.

* ಅಜೀರ್ಣತೆ ಉಂಟಾದ ತಕ್ಷಣ ಸ್ವಲ್ಪ ಬೆಚ್ಚಗಿನ ನೀರನ್ನ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.

* ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಅಜೀರ್ಣದ ಸಮಸ್ಯೆ ಕಡಿಮೆಯಾಗುತ್ತದೆ.

* ನೇರಳೆ ಹಣ್ಣಿನ ರಸದ ಸೇವನೆಯಿಂದ ಹೊಟ್ಟೆ ಉರಿ, ಅಜೀರ್ಣ ಕಡಿಮೆಯಾಗುವುದಲ್ಲದೇ ದೇಹದ ಉಷ್ಣತೆಯೂ ಕಡಿಮೆಯಾಗುತ್ತದೆ.

* ಅಜೀರ್ಣ ಸಮಸ್ಯೆಯಿಂದ ಹೆಚ್ಚಾಗಿ ಬಳಲುತ್ತಿರುವವರು ಪ್ರತಿನಿತ್ಯ ನಿಂಬೆರಸ, ಜೇನು, ಶುಂಠಿ ರಸವನ್ನು ಒಂದೊಂದು ಚಮಚ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಪ್ರತಿನಿತ್ಯ ಕುಡಿದರೆ ಅಜೀರ್ಣ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಗುತ್ತದೆ.

* ಪ್ರತಿದಿನವೂ ಎಳನೀರು ಸೇವಿಸುವುದರಿಂದ ಅಜೀರ್ಣವನ್ನು ನಿವಾರಿಸುವುದರ ಜತೆಗೆ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದಾಗಿದೆ.

* ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಅಜೀರ್ಣದ ಸಮಸ್ಯೆ ಕಡಿಮೆಯಾಗುತ್ತದೆ.

* ನೇರಳೆ ಹಣ್ಣಿನ ರಸದ ಸೇವನೆಯಿಂದ ಹೊಟ್ಟೆ ಉರಿ, ಅಜೀರ್ಣ ಕಡಿಮೆಯಾಗುವುದಲ್ಲದೇ ದೇಹದ ಉಷ್ಣತೆಯೂ ಕಡಿಮೆಯಾಗುತ್ತದೆ.

* ತೆಳ್ಳನೆಯ ( ನೀರು ಹೆಚ್ಚಾಗಿ ಹಾಕಿರುವ ) ಮಜ್ಜಿಗೆಗೆ ಒಂದು ಚಮಚ ಕೊತ್ತಂಬರಿ ರಸವನ್ನು ಬೆರೆಸಿ ಕುಡಿಯುವುದರಿಂದಲೂ ಅಜೀರ್ಣವನ್ನು ಕಡಿಮೆ ಮಾಡಬಹುದು.

* ಅತಿಯಾದ ಚಹಾ, ಕಾಫಿ ಸೇವನೆ ಮಾಡುವುದು, ಸಿಗರೇಟು ಸೇವನೆ ಹೀಗೆ ಇಂತಹ ಕೆಟ್ಟ ಚಟಗಳನ್ನ ದೂರ ಮಾಡಿ ನಿಯಮಿತವಾದ ಆಹಾರ ಸೇವನೆ ಮಾಡಿದಲ್ಲಿ ಈ ಅಜೀರ್ಣತೆಯಿಂದ ಶಾಶ್ವತವಾಗಿ ಪಾರಾಗಬಹುದು.

LEAVE A REPLY

Please enter your comment!
Please enter your name here