ಅರಿಶಿನದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ನಮಗೆ ಈಗಾಗಲೇ ತಿಳಿದಿರುವ ವಿಷಯ, ನಿಂಬೆಹಣ್ಣು ನಮ್ಮ ದೇಹಕ್ಕೆ ಬಹಳ ಉಪಯುಕ್ತಕಾರಿ. ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ ಅರಿಶಿನ ಬೆರೆಸಿ ಕುಡಿಯುವುದರಿಂದ ದುಪ್ಪಟ್ಟು ಲಾಭವಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದ್ದರೆ ಅರಿಶಿನದಲ್ಲಿ ಕರ್ಕ್ಯುಮಿನ್ ಅಂಶವಿರುತ್ತದೆ. ಈವೆರಡೂ ನಮ್ಮ ದೇಹ ಸೇರುವುದರಿಂದ ಸಾಕಷ್ಟು ಲಾಭವಾಗುತ್ತದೆ.

* ನರಗಳ ದೌರ್ಬಲ್ಯ ಕಡಿಮೆ ಮಾಡಿ ದೇಹಕ್ಕೆ ಶಕ್ತಿ ಹೆಚ್ಚಿಸುತ್ತದೆ.

* ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿದ್ರೆ ಸಂಧಿವಾತದ ನೋವು ಕಡಿಮೆಯಾಗುತ್ತದೆ.

* ಶೀತ, ಕೆಮ್ಮಿಗೆ ಇದು ಅತ್ಯುತ್ತಮ ಮನೆ ಮದ್ದು.

* ದೇಹದ ಬೇಡವಾದ ಕೊಬ್ಬನ್ನು ಕಡಿಮೆ ಮಾಡಲು ಇದು ಸಹಕಾರಿ.

* ಬಾಯಿಯಿಂದ ಬರುವ ದುರ್ವಾಸನೆ ಮತ್ತು ಗುಪ್ತ ರೋಗವನ್ನು ಇದು ಕಡಿಮೆ ಮಾಡುತ್ತದೆ.

* ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ.

* ಹೃದಯ ಸಂಬಂಧಿ ಖಾಯಿಲೆಗೆ ಇದು ಹೇಳಿ ಮಾಡಿಸಿದ ಔಷಧಿ. ಹೃದಯವನ್ನು ಇದು ಆರೋಗ್ಯವಾಗಿರಿಸುತ್ತದೆ.

* ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಿ ಮಲಬದ್ಧತೆಯನ್ನು ತಡೆಯುತ್ತದೆ.

* ಮೂತ್ರದ ಸೋಂಕನ್ನು ಕಡಿಮೆ ಮಾಡುತ್ತದೆ. ಮೂತ್ರ ಸಮಸ್ಯೆಯನ್ನು ಇದು ತಡೆಯುತ್ತದೆ.

LEAVE A REPLY

Please enter your comment!
Please enter your name here