ತುಂಬಾ ಆಯಾಸ ಸುಸ್ತು ಆಗುತಿದ್ದೆಯೇ ಹಾಗಾದರೆ ಜೇನು ತುಪ್ಪವನ್ನು ಬಳಸಿ. ದೇಹದ ಆಯಾಸವನ್ನು ನೀಗಿಸುವ ಗುಣ ನಿಸರ್ಗದತ್ತವಾಗಿ ಸಿಗುವಂತಹ ಜೇನು ತುಪ್ಪದಲ್ಲಿದೆ. ಜೇನಿನಲ್ಲಿ ರೋಗನಿರೋಧಕಶಕ್ತಿ ಇದ್ದು ನಮ್ಮ ಆರೋಗ್ಯದ ಕಾಳಜಿವಹಿಸುತ್ತದೆ. ಈ ಜೇನು ತುಪ್ಪವನ್ನು ಈ ಕೆಳಗೆ ನಾವು ತಿಳಿಸಿರುವ ಬಗೆಯಲ್ಲಿ ಬಳಸಿ ಜೇನಿನ ಇನ್ನು ಹೆಚ್ಚಿನ ಉಪಯೋಗವನ್ನ ಪಡೆದುಕೊಳ್ಳಿ. । ಇದನ್ನೂ ಓದಿ : ಕೇಸರಿಯಲ್ಲಿರುವ ಪ್ರಮುಖ ಆರೋಗ್ಯಕರ ರಹಸ್ಯಗಳು ಏನು ಅಂತ ಗೊತ್ತಾ….!

* ಜೇನುತುಪ್ಪಕ್ಕೆ ಚಿಟಿಕೆ ಉಪ್ಪು.


ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನು ತುಪ್ಪಕ್ಕೆ ಚಿಟಿಕೆ ಉಪ್ಪನ್ನು ಸೇರಿಸಿ ಸೇವಿಸಿ. ಈ ವಿಧಾನದಿಂದ ಅತಿಯಾದ ಆಯಾಸ ನಿವಾರಣೆಯಾಗಿ, ಉತ್ತಮ ನಿದ್ರೆ ಬರುತ್ತದೆ.

* ಕುದಿಸಿದ ನೀರು.


ಕುದಿಯುತ್ತಿರುವ ನೀರಿಗೆ ಒಂದು ಚಮಚ ಗ್ರೀನ್ ಟೀ ಪೌಡರ್ ಸೇರಿಸಿ. ಪೌಡರ್ ಚನ್ನಾಗಿ ಕುಡಿಯಲು ೫ ನಿಮಿಷ ಬಿಡಿ. ನಂತರ ಒಂದು ಗ್ಲಾಸ್ ಗೆ ನೀರನ್ನು ಸೋಸಿ, ಇದಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ ಕುಡಿಯಿರಿ. ಈ ರೀತಿಯ ಚಹಾವನ್ನು ದಿನಕ್ಕೆ 1 -2 ಬಾರಿ ಸೇವಿಸಿ. । ಇದನ್ನೂ ಓದಿ : ಮಧುಮೇಹಿಗಳಿಗೆ ಇಲ್ಲಿದೆ ಸಿಹಿ ಸುದ್ದಿ….! ಏನು ಅಂತ ಯೋಚಿಸ್ತಾ ಇದ್ದೀರಾ…? ಈ ಲೇಖನ ಓದಿ…..!

* ಬಿಸಿ ಹಾಲು.


ಒಂದು ಗ್ಲಾಸ್ ಬಿಸಿ ಹಾಲನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ, ಚನ್ನಾಗಿ ಕಲಸಿ, ಇದನ್ನು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸಿ.

* ಬಿಸಿ ನೀರು.


ಒಂದು ಗ್ಲಾಸ್ ಬಿಸಿ ನೀರನ್ನು ತಗೆದುಕೊಳ್ಳಿ. ಇದಕ್ಕೆ ಅರ್ಧ ಚಮಚ ಜೇನು ತುಪ್ಪ, ೨ ಚಮಚ ನಿಂಬೆ ರಸ, ೨ ಚಮಚ ಶುಂಠಿ ರಸವನ್ನು ಸೇರಿಸಿ. ಇವುಗಳನ್ನ ಚನ್ನಾಗಿ ಬೆರೆಸಿ, ದಿನಕ್ಕೆ 1-2 ಬಾರಿ ಕುಡಿಯಿರಿ.

* ದಾಲ್ಚಿನ್ನಿ ಪುಡಿ.


ಒಂದು ಗ್ಲಾಸ್ ಬೆಚ್ಚಗಿನ ಹಾಲನ್ನು ತೆಗೆದುಕೊಳ್ಳಿ ಒಂದು ಚಮಚ ಜೇನುತುಪ್ಪ ಮತ್ತು ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಇದನ್ನು ಚನ್ನಾಗಿ ಕಲುಕಿ. ನಿತ್ಯವೂ ಮಲಗುವ ಮುನ್ನ ಒಮ್ಮೆ ಸೇವಿಸಿ. । ಇದನ್ನೂ ಓದಿ : ಮುಜುಗರ ಉಂಟುಮಾಡುವ ಮೂಲವ್ಯಾಧಿಗೆ ಮೂಲಂಗಿ ಪರಿಹಾರ….!

LEAVE A REPLY

Please enter your comment!
Please enter your name here