ಬಾದಾಮಿ ಹಾಲು ಇತ್ತೀಚಿಗೆ ಹೆಚ್ಝು ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಪೇಯ ಎಂದರೆ ಖಂಡಿತ ತಪ್ಪಾಗಲಾರದು. ಈ ಹಿಂದೆಯೂ ಬಾದಾಮಿ ಹಾಲು ಎಂದು ಒಂದು ಪೊಟ್ಟಣ ಸಿಗುತ್ತಿತ್ತು, ಅದನ್ನು ಬಿಸಿ ಹಾಲಿಗೆ ಬೆರೆಸಿ ಕುಡಿಯುತ್ತಿದ್ದೇವೆ. ಆದರೆ ಇದು ಕೇವಲ ಬಾದಾಮಿಯ ರುಚಿ ಹೊಂದಿದ್ದ ಅಗ್ಗದ ಪೇಯವಾಗಿತ್ತು. ಬಾದಾಮಿ ಹಾಲು ಸೇವನೆಯಿಂದ ತೂಕದಲ್ಲಿ ಇಳಿಕೆ, ಉತ್ತಮಗೊಂಡಿರುವ ದೃಷ್ಟಿ, ಗಟ್ಟಿಗೊಂಡಿರುವ ಮೂಳೆಗಳು ಮತ್ತು ಆರೋಗ್ಯವಂತ ಹೃದಯ ಪ್ರಮುಖವಾಗಿವೆ. ಅಲ್ಲದೆ ಸ್ನಾಯುಗಳು ಬಲಗೊಳ್ಳಲು, ರಕ್ತ ಒತ್ತಡ ಸಮತೋಲನದಲ್ಲಿರಿಸಲು, ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಲು ಸಹ ನೆರವಾಗುತ್ತದೆ. । ಇದನ್ನೂ ಓದಿ : ಪ್ರತಿ ದಿನ ಒಂದು ಖರ್ಜುರ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಾಗುತ್ತೆ ಗೊತ್ತಾ…..!

ಬಾದಾಮಿ ಹಾಲಿನಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಯಿನ ಹೇರಳವಾಗಲಿವೆ, ಅಲ್ಲದೇ ಇತರ ವಿಟಮಿನ್ ಗಳು ಖನಿಜಗಳು ಹಾಗು ವಿಶೇಷವಾಗಿ ವಿಟಮಿನ್ ಇ ಸಹ ಉತ್ತಮ ಪ್ರಮಾಣದಲ್ಲಿವೆ. ಇದರಲ್ಲಿ ಪೂರ್ಣ ಆದ್ರವಾದ ಅಥವಾ ಸಿಚುರೇಟೆಡ್ ಕೊಬ್ಬು ಇಲ್ಲವೇ ಇಲ್ಲ. ಅಲ್ಲದೇ ಇದರಲ್ಲಿ ಸೋಡಿಯಂ ಲವಣ ಅತಿ ಕಡಿಮೆ ಪ್ರಮಾಣದಲ್ಲಿದ್ದು ಒಮೇಗಾ ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿವೆ. ಇವು ರಕ್ತದ ಒತ್ತಡವನ್ನು ಕಡಿಮೆಗೊಳಿಸಿ ಹೃದಯ ಕ್ಷಮತೆಯನ್ನು ಹೆಚ್ಚಿಸುತ್ತವೆ. ಮಧುಮೇಹಿಗಳಿಗೂ ಉತ್ತಮ ಬಾದಾಮಿ ಹಾಲು ನಿದಾನವಾಗಿ ಜೀರ್ಣಗೊಳ್ಳುವ ಅಂದರೆ ಗೈಸಮಿಕ್ ಇಂಡೆಕ್ಸ್ ಎಂಬ ಕೋಷ್ಟಕದಲ್ಲಿ ಹೆಚ್ಚಿನ ಮಾಪನ ಹೊಂದಿರುವ ಆಹಾರವಾಗಿದೆ. ಇದರಲ್ಲಿರುವ ಎಲ್ಲಾ ಪೋಷಕಾಂಶಗಳು ಜೀರ್ಣಿಸಲ್ಪಟ್ಟು ಬಳಕೆಯಾಗುತ್ತವೆಯೇ ವಿನಃ ಹಸುವಿನಂತೆ ಕೊಬ್ಬು ದೇಹದಲ್ಲಿ ಸಂಗ್ರಹವಾಗುವುದಿಲ್ಲ. ಇದೇ ಕಾರಣಕ್ಕೆ ಇ ಹಾಲು ಮಧುಮೇಹಿಗಳಿಗೆ ಹೆಚ್ಚು ಸೂಕ್ತವಾಗಿದೆ.

ಸ್ನಾಯುಗಳ ಬಲ ಹೆಚ್ಚಿಸುವಲ್ಲಿ ಕೂಡ ಬಾದಾಮಿ ಹಾಲು ಮಹತ್ವ ಪಾತ್ರ ವಹಿಸುತ್ತದೆ. ಕಬ್ಬಿಣ, ರೈಬೋಪ್ಲಿವಿನ್ ನಂತಹ ಬಿ ವಿಟಮಿನ್ ಗುಂಪಿಂಗೆ ಸೇರಿದ ಪೋಷಕಾಂಶಗಳು ಸ್ನಾಯುಗಳನ್ನು ಬಲಪಡಿಸಲು, ವೃದ್ಧಿಸಲು ಹಾಗು ಘಾಸಿಗೊಂಡ ಸ್ನಾಯುಗಳನ್ನು ಗುಣಪಡಿಸಲು ನೆರವಾಗುತ್ತವೆ. ವಿಟಮಿನ್ ಡಿ ಕೊರತೆಯಿಂದ ಮೂಳೆಗಳು ಶಿಥಿಲಗೊಳ್ಳುತ್ತವೆ. ಅಲ್ಲದೇ ಸುಸ್ತು ಹಾಗು ಸ್ನಾಯುಗಳಲ್ಲಿ ಬಲವಿಲ್ಲದಿರುವಿಕೆಯು ಆವರಿಸುತ್ತದೆ. ಬಾದಾಮಿ ಹಾಲಿನ ಸೇವನೆಯಿಂದ ಈ ಕೊರತೆಗಳು ಕಡಿಮೆಯಾಗುತ್ತವೆ. ಬಾದಾಮಿ ಹಾಲಿನ ಸೇವನೆಯ ಅತ್ಯುತ್ತಮ ಪ್ರಯೋಜನೆಗಳಲ್ಲಿ ಇದು ಪ್ರಮುಖವಾಗಿದೆ. ಈ ಹಾಲಿನಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದರೂ ಇತರ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿದ್ದು ದಿನದ ಚಟುವಟಿಕೆಯ ಅಗಾಯ್ತವನ್ನು ಪೂರೈಸುತ್ತದೆ. । ಇದನ್ನೂ ಓದಿ : ಸ್ತ್ರೀಯರಲ್ಲಿ ಹಾರ್ಮೋನ್ ಏರುಪೇರು ಮಾಡಬಲ್ಲ ಆಹಾರಗಳು ಯಾವು ಗೊತ್ತಾ ?

LEAVE A REPLY

Please enter your comment!
Please enter your name here