ಸೀತಾಫಲ ಇದರಲ್ಲಿ ವಿಟಮಿನ್ ಎ, ಮೆಗ್ನಿಶಿಯಂ, ಪೊಟ್ಯಾಶಿಯಂ, ಫೈಬರ್, ವಿಟಮಿನ್ ಬಿ೬, ಕ್ಯಾಲ್ಸಿಯಂ, ವಿಟಮಿನ್ ಸಿ, ಇಂತಹ ಅನೇಕ ಪೋಷಕಾಂಶಗಳು ಇದನ್ನು ನಿಯ್ತಾ ಆಹಾರದಲ್ಲಿ ಒಂದು ಭಾಗವಾಗಿ ಮಾಡಿಕೊಳ್ಳುವುದರಿಂದ ಎಷ್ಟೋ ಕಾಯಿಲೆಗಳಿಂದ ಮುಕ್ತಿ ಪಡೆಯ ಬಹುದು. ಹಣ್ಣು ಮಾತ್ರವಲ್ಲದೆ ಇದರ ಎಕೆಗಳು, ಬೇರು, ಕಾಂಡದಿಂದಲೂಅನೇಕ ಉಪಯೋಗಗಳಿವೆ. ಅವುಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋನ್ನ.

* ರಕ್ತ ಹೀನತೆಯ ಸಮಸ್ಯೆ ಇರುವವರು ದಿನ ತಿಂದರೆ ದೇಹದಲ್ಲಿ ರಕ್ತಕಣಗಳ ಸಂಖ್ಯೆ ಹೆಚ್ಚಾಗುವುದು.

* ಸೀತ ಫಲದ ಎಲೆಗಳಿಂದ ತೆಗೆದ ರಸವನ್ನು ನಿಯ್ತಾ ಬೆಳಗ್ಗೆ ಒಂದು ಟೀ ಚಮಚ ಅಳತೆಯಲ್ಲಿ ಸೇವಿಸಿದರೆ ಮದುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ತೂಕವನ್ನು ಸಹ ಕಡಿಮೆ ಮಾಡುತ್ತದೆ.

* ಸೀತಾಫಲ ಎಲೆಗಳನ್ನು ನೀರಿನಲ್ಲಿ ಹಾಕಿ ಕಷಾಯದಂತೆ ಕಾಯಿಸಿಕೊಂಡು ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.

* ಸೀತಾಫಲವನ್ನು ಬೆಳಗ್ಗೆ ಉಪಹಾರವಾಗಿ ಸೇವಿಸುವುದರಿಂದ ನರಗಳ ಬಲಹೀನತೆ ನಿವಾರಣೆಯಾಗುತ್ತದೆ. ಶರೀದಕ್ಕೆ ಬೇಕಾದ ಶಕ್ತಿ ದೊರೆಯುತ್ತದೆ.

* ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೃಷ್ಟಿ ಸಮಸ್ಯೆಗಳು ದೂರವಾಗುತ್ತವೆ.

* ಸೀತಾಫಲ ಹಣ್ಣಿನಲ್ಲಿರುವ ಮೆಗ್ನಿಶಿಯಂ ಹೃದಯ ಸಂಬಂದಿ ಕಾಯಿಲೆಗಳು ಬರದಂತೆ ತಡೆಯುತ್ತದೆ.

* ಸೀತಾಫಲದಲ್ಲಿರುವ ಪೋಷಕಾಂಶಗಳು ಶರೀರದಲ್ಲಿರುವ ಕೊಬ್ಬನ್ನು ಕರಗಿಸುತ್ತವೆ.

* ಸೀತಾಫಲ ಹಣ್ಣನ್ನು ಪ್ರತಿ ದಿನ ತಿನ್ನುವುದರಿಂದ ಅಲ್ಸರ್ ವಾಸಿಯಾಗುತ್ತದೆ. ಗ್ಯಾಸ್, ಅಸಿಡಿಟಿ ಅಜೀರ್ಣ, ಮಲಬದ್ಧತೆ, ಇಂತಹ ಜೀರ್ಣಕ್ರಿಯೆಗೆ ಸಂಬಂದಿಸಿದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

* ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಿರುವವರು ಸೀತಾಫಲ ಹಣ್ಣನ್ನವು ತಿನ್ನುವುದು ಒಳ್ಳೆಯದು. ಇದರಿಂದ ರಕ್ತ ಉತ್ಪತ್ತಿಯಾಗುತ್ತದೆ.

LEAVE A REPLY

Please enter your comment!
Please enter your name here