ನೀವು ಒಬ್ಬರೇ ಇರುವಾಗ ಹೀಗೆ ಮಾಡುವುದರಿಂದ ಅಪಾಯದಿಂದ ಪರಾಗಬಹುದು. ಎದೆಯ ಎಡಭಾಗದಲ್ಲಿ ಎದೆ ಬರವಾದಂತಹ. ಬಿಗಿ ಹಿಡಿದಂತಹ ನೋವು ಕಾಣಿಸಿಕೊಂಡು ಬೆವರಲು ಪ್ರಾರಂಭಿಸುತ್ತೀರಿ. ಕಣ್ಣುಗಳು ಮಂಜಾಗುತ್ತವೆ. ಎಲ್ಲೋ ಪಾತಾಳಕ್ಕೆ ಕುಸಿದಂತಹ ಅನುಭವ. ಆಸ್ಪತ್ರೆ ದೂರವಿರುತ್ತದೆ. ೧೦೮ ಕ್ಕೆ ಕರೆಕೊಟ್ಟರು ಅವರು ಬರುವುದು ಕೆಲ ನಿಮಿಷಗಳಾಗಬಹುದು. ನಿಮ್ಮ ಜ್ಞಾನ ಹೋಗಲು ಇನ್ನೇನು ಕೆಲ ಸೆಕೆಂಡುಗಳಿವೆ. ಶೇಕಡಾ 60 ಜನ ಹೃದಯಾಘಾತವಾದಾಗ ಮರಣ ಹೊಂದುವ ಸಂಭವವೇ ಹೆಚ್ಚು. ಅಂತಹ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡಬೇಕು…? । ಇದನ್ನೂ ಓದಿ : ನಿಮ್ಮ ಅಡುಗೆ ಮನೆಯಲ್ಲಿರುವ ಸಾಮಗ್ರಿಗಳಿಂದ ಹಲ್ಲು ನೋವನ್ನು ಶಮನ ಮಾಡಿ !

* ಪದೇ ಪದೇ ಜೋರಾಗಿ ಕೆಮ್ಮಬೇಕು.

* ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಇಲ್ಲವೇ ಅಂಗಾತ ಮಲಗಿಕೊಳ್ಳಬೇಕು.

* ದೀರ್ಘವಾಗಿ ಉಸಿರು ಎಳೆದುಕೊಳ್ಳುವುದು ಮತ್ತು ಜೋರಾಗಿ ಕೆಮ್ಮುವುದನ್ನು ಮಾಡಬೇಕು. ಪ್ರತಿ ಎರಡು ಸೆಕೆಂಡಿಗೊಮ್ಮೆ ಸತತವಾಗಿ ಕೆಮ್ಮುತ್ತಿರಬೇಕು.

* ಸಹಾಯಕ್ಕಾಗಿ ಯಾರಾದರೂ ಬರಿವವರೆಗೆ ಸಾಮಾನ್ಯ ಸ್ಥಿತಿಗೆ ಬರುವವರೆಗೂ ಇದನ್ನು ಮುಂದುವರೆಸುತ್ತಿರಬೇಕು. ಇದರಿಂದ ನಾವು ಹೃದಯಾಘಾತದಿಂದ ಸಹದೇ ಬದುಕುಳಿಯುವ ಸಂಭವ ಹೆಚ್ಚು…

* ದೀರ್ಘವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದನ್ನೇ ಆಸ್ಪತ್ರೆಯಲ್ಲಿ ಐ.ಸಿ.ಯು. ನಲ್ಲಿ ಮಾಡುವುದು..

* ಜೋರಾಗಿ ಕೆಮ್ಮುವುದರಿಂದ ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಸರಾಗವಾಗಿ ಹರಿಯುತ್ತದೆ. ಜೊತೆಗೆ ಹೃದಯ ಬಡಿತವು ಸುಸ್ಥತಿಗೆ ಬರುತ್ತದೆ. । ಇದನ್ನೂ ಓದಿ : ಒಂದು ಬೆಳ್ಳುಳಿ ಎಸಳಿನಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ….?

* ಕಾರಣ ಅಂತಹ ಸಮಯದಲ್ಲಿ ಹೃದಯ ಸ್ತಭನವಾಗುವ ಸಂಭವ ಹೆಚ್ಚಿರುತ್ತದೆ. ಸಹಾಯಕ್ಕೆ ಬರುವವರೆಗೂ ಇದನ್ನು ನಾವು ಮುಂದುವರಿಸಿದ್ದೆ ಆದಲ್ಲಿ ತಕ್ಷಣವೇ ಸಹಾಯವಾಗುತ್ತದೆ.

 

LEAVE A REPLY

Please enter your comment!
Please enter your name here