ದಾಳಿಂಬೆಹಣ್ಣು ಆರೋಗ್ಯಕ್ಕೆ ಉಟ್ಟ, ಈ ಹಣ್ಣನ್ನು ತಿನ್ನುವುದರಿಂದ ನಮ್ಮ ನೆನೆಪಿನ ಶಕ್ತಿಯು ಹೆಚ್ಚುವುದು ಇದರಲ್ಲಿ ವಿಟಮಿನ್ ಸಿ ಇದೆ. ಮತ್ತು ಬೇರೆ ಎಲ್ಲ ಹಣ್ಣಿಗಿಂದ ಹೆಚ್ಚು ಉಪಯುಕ್ತವಾದುದೆಂದು ಇತ್ತೀಚಿನ ಸಂಶೋಧನೆಯ ವರದಿಯಿಂದ ತಿಳಿದುಬಂದಿದೆ. ಅದಕ್ಕಾಗಿ ದಾಳಿಂಬೆಹಣ್ಣು ತಿಂದು ಸದಾ ಆರೋಗ್ಯವಂತರಾಗಿರಿ. । ಇದನ್ನೂ ಓದಿ : ಮೆಂತೆ ಕಾಳನ್ನು ತಿನ್ನುವುದರಿಂದ ಎಷ್ಟೆಲ್ಲ ಆರೋಗ್ಯಕಾರಿ ಉಪಯೋಗಗಳಿವೆ ಎಂಬುದನ್ನ ತಿಳಿಯಲು ಈ ಲೇಖನ ಓದಿ……!

ಬೇಗನೆ ವಯಸ್ಸಾದಂತೆ ಕಾಣುವುದನ್ನು ತಪ್ಪಿಸಲು, ತಾರುಣ್ಯರಂತೆ ಕಾಣಲು ದಾಳಿಂಬೆಯನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಒಳ್ಳೆಯದು ಎಂದು ಸಂಶೋಧಕರು ಹೇಳಿದ್ದಾರೆ. ದಾಳಿಂಬೆಯನ್ನು ಹಿಂದಿನ ಕಾಲದವರು ದೇವರ ಆಹಾರ ಎಂದು ಕರೆಯುತಿದ್ದರು. ಅದರಲ್ಲಿರುವ ನಿಖರ ರಾಸಾಯನಿಕ ಮನುಷ್ಯನನ್ನು ತಾರುಣ್ಯಭರಿತವಾಗಿ ಕಾಣುವಂತೆ ಮಾಡುತ್ತದಂತೆ. ಮನುಷ್ಯನ ದೇಹದಲ್ಲಿರುವ ಯುರೊಲೀಥಿನ್ ಎ ಎಂಬ ಏಕ ಅಣು ಸ್ವಯಂಭಕ್ಷಣ ಪ್ರಕ್ರಿಯೆಯನ್ನು ಹೊಂದಿದ್ದು, ಹಾನಿಗೀಡಾದ ಕೋಶಗಳನ್ನು ಹೋಗಲಾಡಿಸಿ ಹೊಸ ಕೋಶಗಳು ಉತ್ಪತ್ತಿಯಾಗಲು ಸಹಕರಿಸುತ್ತವೆ. ಆದರೆ ಮನುಷ್ಯರ ಕರುಳಿನಲ್ಲಿ ಸರಿಯಾದ ರೀತಿಯ ಬ್ಯಾಕ್ಟೀರಿಯಾ ಇದ್ದರೆ ಮಾತ್ರ ದಾಳಿಂಬೆಯಲ್ಲಿರುವ ರಾಸಾಯನಿಕದಿಂದ ಪ್ರಯೋಜನವಾಗುತ್ತದೆ. ಸೂಕ್ಷ್ಮಜೀವಿಗಳು ಹಣ್ಣಿನಲ್ಲಿರುವ ಕಚ್ಚಾ ಪದಾರ್ತಗಳನ್ನು ಯುರೊಲೀಥಿನ್ ಎ ಆಗಿ ಬದಲಾಯಿಸುತ್ತದೆ. ತಾಯಿಯಾಗುವ ಹಂತದಲ್ಲಿ ಕೂಡ ಮಹಿಳೆಯರಿಗೆ ದಾಳಿಂಬೆ ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ದಾಳಿಂಬೆ ಹಣ್ಣು ಎಂತೆಂಥ ರೋಗಗಳ ನಿಯಂತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದಾಳಿಂಬೆ ಹಣ್ಣುಗಳು ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಿ ಆರೋಗ್ಯಕರ ಕೋಶಗಳನ್ನು ಮಾತ್ರ ಉಳಿಸುತ್ತದೆ. ಸ್ತನ ಕ್ಯಾನ್ಸರ್ ಆಗುವುದನ್ನು ಕೂಡ ದಾಳಿಂಬೆ ತಪ್ಪಿಸುತ್ತದೆ. । ಇದನ್ನೂ ಓದಿ : ಪ್ರತಿನಿತ್ಯ ಇದನ್ನು ತಿಂದರೆ ಏನೇನು ಬದಲಾವಣೆ ಆಗುವುದು ನಿಮಗೆ ಗೊತ್ತೆ…?

ದಾಳಿಂಬೆ ತಿಂದರೆ ಆಗುವ ಪ್ರಯೋಜನಗಳು

* ಕೊಲೆಸ್ಟ್ರಾಲ್ ಕಡಿಮೆಯಾಗುವುದು.

* ರಕ್ತದೊತ್ತಡ ಕಡಿಮೆ ಆಗುವುದು.

* ದಾಳಿಂಬೆ ಎಲೆ ತಿನ್ನುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

* ಮಹಿಳೆಯರು ದಾಳಿಂಬೆಹಣ್ಣಿನ ರಸ ಕುಡಿಯುವಿದರಿಂದ ಮುತ್ತಿನ ತೊಂದರೆ ನಿವಾರಣೆಯಾಗುವುದು.

* ನಿಶ್ಯಕ್ತಿಯನ್ನು ಕಡಿಮೆ ಮಾಡುವುದು.

* ದಾಳಿಂಬೆ ರಸ ಸೇವಿಸುವುದರಿಂದ ಮುಖದ ಚರ್ಮವು ಕಾಂತಿಯುತವಾಗುವುದು.

* ಕ್ಯಾನ್ಸರ್ ರೋಗವನ್ನು ನಿವಾರಿಸುವುದು.

* ದಾಳಿಂಬೆ ಬೀಜವನ್ನು ತಿನ್ನುವುದರಿಂದ ಹಲ್ಲುಗಳು ಹೊಳಪು ಹೆಚ್ಚುವುದು. । ಇದನ್ನೂ ಓದಿ : ಕರ್ಪೂರದಲ್ಲಿದೆ ಹಲವಾರು ರೋಗಗಳನ್ನು ನಿವಾರಿಸುವ ಶಕ್ತಿ ..!

LEAVE A REPLY

Please enter your comment!
Please enter your name here