* ನೆನೆಸಿದ ಮೆಂತೆಯನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ. ತೂಕ ಕಳೆದುಕೊಳ್ಳಲು ಸಹಕಾರಿ.

* ಒಂದು ಚಮಚ ಮೆಂತೆ ಅಥವಾ ಮೆಂತೆ ಸೊಪ್ಪು ಹಾಗೂ ತೆಂಗಿನ ಹಾಲು ಎಲ್ಲವನ್ನು ರುಬ್ಬಿ ತಲೆಗೆ ಹಚ್ಚಿ ಅರ್ಧ ಗಂಟೆ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ. । ಇದನ್ನೂ ಓದಿ : ಬೆಳ್ಳುಳ್ಳಿ ಜಜ್ಜಿ ಹಾಲಿನಲ್ಲಿ ಸೇರಿಸಿ ಕುಡಿದರೆ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ…? ನೀವು ಖಂಡಿತ ಇದರ ಬಗ್ಗೆ ತಿಳಿಯಲೇ ಬೇಕು..!

* ನೆಲ್ಲಿ ಚಟ್ಟು, ಮೆಂತೆ ಕಾಳು, ಧನಿಯಾ ಎಲ್ಲವನ್ನು ಸಮ ಪ್ರಮಾಣದಲ್ಲಿ ರಾತ್ರಿ ನೆನೆಸಿ, ಬೆಳಗ್ಗೆ ಕುಟ್ಟಿ ಚರ್ಮಕ್ಕೆ ಲೇಪಿಸಿ ಸ್ನಾನ ಮಾಡಿದರೆ ಎಲ್ಲ ಚರ್ಮ ರೋಗಗಳು ಗುಣವಾಗುತ್ತದೆ.

* ಸ್ತ್ರೀಯರಲ್ಲಿ ಎದೆ ಹಾಲು ಕಡಿಮೆ ಇದ್ದರೆ, ಮೆಂತೆ ಬೀಜದ ಗಂಜಿ ಸೇವಿಸಿದರೆ, ಎದೆ ಹಾಲು ಹೆಚ್ಚುತ್ತದೆ.

* ದೇಹದಲ್ಲಿ ಎಲ್ಲಾದರೂ ಊಟ, ಬಾವು ಇದ್ದರೆ, ಅದಕ್ಕೆ ಮೆಂತೆ ಬೀಜವನ್ನು ನೀರಿನಲ್ಲಿ ರುಬ್ಬಿ ಲೇಪಿಸಿದರೆ ಊಟ ಕಡಿಮೆಯಾಗುತ್ತದೆ.

* ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಲುಗಳನ್ನು ಹಾಕಿ ಇಡೀ ರಾತ್ರಿ ನೆನೆಸಿಡಬೇಕು. ಬೆಳಗ್ಗೆ ಇದನ್ನು ಸೋಸಿಕೊಂಡು ನೀರನ್ನು ಕಾಳಿ ಹೊಟ್ಟೆಯಲ್ಲಿ ಕುಡಿಯಬೇಕು. ಇದು ಜೀರ್ಣಕ್ರಿಯೆ ಸರಾಗವಾಗಲು ನೆರವಾಗುವುದು.

* ಮೆಂತೆಯಲ್ಲಿ ಗ್ಲಾಕ್ಟೊಮನ್ನನ್ ಮತ್ತು ಪೊಟ್ಯಾಶಿಯಂ ಇದೆ. ಇವೆರಡು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

* ಮೆಂತೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಲ್ ಅನ್ನು ತೆಗೆದು ಹಾಕುತ್ತದೆ.

* ಆಂಟಿಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ. । ಇದನ್ನೂ ಓದಿ : ತುಟಿಯ ಬಣ್ಣವನ್ನು ನೈಸರ್ಗಿಕವಾಗಿ ಹೆಚ್ಚಿಸಬೇಕೆ ? ಹಾಗಿದ್ದರೆ ಇದನ್ನು ಮರೆಯದೆ ಪಾಲಿಸಿ..

* ದೇಹದ ಅದರಲ್ಲೂ ಕರುಳಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರಿಂದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

LEAVE A REPLY

Please enter your comment!
Please enter your name here