ಒಣಗಿದ ತೆಂಗಿನಕಾಯಿ ತಿನ್ನುವುದರಿಂದ ಅನೇಕ ರೋಗಗಳಿಗೆ ಮನೆ ಮದ್ದು, ಹಸಿ ತೆಂಗಿನಕಾಯಿಯಿಂದ ಎಷ್ಟು ಪ್ರಯೋಜನ ಪಡೆಯಬಹುದೋ ಅಷ್ಟೇ ಉಪಯೋಗಗಳನ್ನು ಒಣಗಿದ ತೆಂಗಿನಕಾಯಿಯಿಂದ ಪಡೆದುಕೊಳ್ಳ ಬಹುದು. ತೆಂಗಿನ ಎಣ್ಣೆಯಿಂದ ತುಟಿಗಳ ಆರೈಕೆ ಪ್ರಪಂಚದಾದ್ಯಂತ ಉಪಯೋಗಿಸುವ ಈ ತೆಂಗಿನಕಾಯಿಯಲ್ಲಿ ಆರೋಗ್ಯಕರ ಅಂಶ ಹಲವಾರಿವೆ. ಒಣಗಿದ ತೆಂಗಿನಕಾಯಿಯು ಆಹಾರದ ನಾರು, ತಾಮ್ರ, ಮ್ಯಾಂಗನೀಸ್, ಮತ್ತು ಸೆಲೆನಿಯಮ್ ನಂತರ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದರ ಬಳಕೆಯಿಂದ ಉಂಟಾಗುವ ಪ್ರಯೋಜನಗಳು ಇಲ್ಲಿವೆ ನೋಡಿ… । ಇದನ್ನೂ ಓದಿ : ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆ ಇನ್ನುಮುಂದೆ ಹೇಳಿ ಗುಡ್ ಬಾಯ್

* ರಕ್ತ ಹೀನತೆಯ ನಿಯಂತ್ರಣ


ಒಂದು ನಿರ್ದಿಷ್ಟ ವಯಸ್ಸಿನ ನಂತರ ದೇಹದಲ್ಲಿ ರಕ್ತಹೀನತೆಯ ಸಮಸ್ಯೆ ಕಾಣಿಸುಕೊಳ್ಳುವುದು ಸಹಜ. ಕಬ್ಬಿಣಂಶದ ಕೊರತೆಯಿಂದ ರಕ್ತ ಹೀನತೆ ಉಂಟಾಗಿ ತೀವ್ರತರದ ಅರೋಗ್ಯ ಸಮಸ್ಯೆ ಉಂಟಾಗಬಹುದು. ಒಣ ತೆಂಗಿನಕಾಯಿ ಹೆಚ್ಚು ಕಬ್ಬಿಣಂಶ ನೀಡಿ ಆರೋಗ್ಯವನ್ನು ಕಾಪಾಡುತ್ತದೆ. । ಇದನ್ನೂ ಓದಿ : ರಾತ್ರಿ ಮಲಗುವ 5 ನಿಮಿಷಕ್ಕೂ ಮುನ್ನ ಹೀಗೆ ಮಾಡಿ ನೋಡಿ… ಆರೋಗ್ಯಕ್ಕೆ ಎಷ್ಟೆಲ್ಲ ಲಾಭ ಆಗುತ್ತೆ ಗೊತ್ತಾ…!

* ಕ್ಯಾನ್ಸರ್ ತಡೆಯುವುದು


ಒಣ ತೆಂಗಿನಕಾಯಿಯಲ್ಲಿರುವ ಅನೇಕ ಪೋಷಕಾಂಶಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ಒಣತೆಂಗಿನ್ಕಾಯಿ ಸೇವನೆಯಿಂದ ಕೊಲೆನ್ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಸೇರಿದಂತೆ ಅನೇಕ ಬಗೆಯ ಕ್ಯಾನ್ಸರ್ಗಳನ್ನು ತಡೆಯಬಹುದು.

* ಪುರುಷರಲ್ಲಿ ಬಂಜೆತನದ ನಿಯಂತ್ರಣ


ಒಣತೆಂಗಿನಕಾಯಿಯ ಸೇವನೆಯಿಂದ ಸಮೃದ್ಧವಾದ ಸೆಲೆನಿಯಮ್ ಅನ್ನು ಪಡೆಯಬಹುದು. ಇದು ಪುರುಷರಲ್ಲಿ ಉಂಟಾಗುವ ಬಂಜೆತನವನ್ನು ನಿಯಂತ್ರಿಸುತ್ತದೆ.

* ರೋಗನಿರೋಧಕ ಶಕ್ತಿ ಹೆಚ್ಚಳ


ಒಣ ತೆಂಗಿನಕಾಯಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ ಸಹಾಯಮಾಡುತ್ತದೆ. ಇದು ಸೆಲೆನಿಯಂ ಸೆಳೇನೋ ಪ್ರೊಟೀನ್ ಗಳನ್ನೂ ಉತ್ಪಾದಿಸಿ ಅನೇಕ ರೋಗಗಳನ್ನು ತಡೆಗಟ್ಟುತ್ತದೆ.

 

* ಸಂದಿವಾತ ತಡೆಯುವುದು.
ಪತಿದಿನ ತೆಂಗಿನಕಾಯಿಯ ಸೇವನೆಯಿಂದ ಸಂದಿವಾತ ಹಾಗು ಆಸ್ಟಿಯೊಪೊರೋಸಿಸ್ ನಂತಹ ತೊಂದರೆಯನ್ನು ತಡೆಯುವುದು. ಜೊತೆಗೆ ಸಂಯೋಜಕ ಅಂಗಾಂಶಗಳನ್ನು ಬಲಪಡಿಸಲು ಇದು ಸಹಾಯಮಾಡುತ್ತದೆ. । ಇದನ್ನೂ ಓದಿ : ಸರ್ವ ರೋಗಕ್ಕೂ ರಾಮಬಾಣ ಅಮೃತ ಬಳ್ಳಿ

LEAVE A REPLY

Please enter your comment!
Please enter your name here