ಹೊಟ್ಟೆ ಉಬ್ಬರ, ಹೊಟ್ಟೆ ನೋವು, ತೇಗು, ಇವೆಲ್ಲವೂ ನಮ್ಮ ಸುತ್ತ ಮುತ್ತಲಿನ ಜನರಿಗೆ ಹೆಚ್ಚು ಕಿರಿ ಕಿರಿಯನ್ನುಂಟು ಮಾಡುತ್ತವೆ. ಜೊತೆಗೆ ನಮಗೂ ಸಹ ಕಿರಿ ಕಿರಿ ಉಂಟು ಮಾಡುತ್ತದೆ. ಹೊಟ್ಟೆಯಲ್ಲಿ ತಳಮಳ ಉಂಟಾದರೆ ಒಂದು ಕಡೆ ಕುಳಿತುಕೊಳ್ಳಲಾಗದ ಪರಿಸ್ಥಿತಿ ಉಂಟಾಗುತ್ತದೆ. ಹೆಚ್ಚು ಕೋಪ ಬರುವುದು, ಕಿರಿ ಕಿರಿ ಉಂಟಾಗುವುದು ಇವೆಲ್ಲವೂ ಗ್ಯಾಸ್ ಟ್ರಬಲ್ ನ ಲಕ್ಷಣಗಳು.  ಇಂತಹ ಗೇಸ್ಟ್ರಿಕ್ ಸಮಸ್ಯೆಯ ನಿವಾರಣೆಗಾಗಿ ಆಯುರ್ವೇದದಲ್ಲಿ ಒಳ್ಳೆಯ ಪರಿಹಾರವನ್ನ ಸೂಚಿಸ ಲಾಗಿದೆ. ಅದರೊಂದಿಗೆ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ, ಗ್ಯಾಸ್ ಟ್ರಬಲ್ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ನಿಯಮಗಳು ಇಂತಿವೆ. । ಇದನ್ನೂ ಓದಿ : ಮಹಿಳೆಯರು ಕಿಡ್ನಿ ಸಮಸ್ಯೆಯಿಂದ ದೂರವಿರಲು ಈ ತರಕಾರಿಯನ್ನ ತಿನ್ನಬೇಕು….!

* ಶುಂಠಿ ಚೂರ್ಣ ಹಾಗು ಬೆಲ್ಲ ಸಮಪಾಲುಗಳಲ್ಲಿ ತೆಗೆದುಕೊಂಡು, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ನಂತರ ಬಿಸಿ ನೀರು ಸೇವಿಸಿದರೆ ಗ್ಯಾಸ್ ಟ್ರಬಲ್ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.

* ದನಿಯ, ಶುಂಠಿ ಸಮಭಾಗಗಳಲ್ಲಿ ಚೂರ್ಣ ಮಾಡಿಟ್ಟುಕೊಂಡು, ಪ್ರತಿ ದಿನ ಬೆಳಗ್ಗೆ ಹಾಗೂ ರಾತ್ರಿ ಊಟ ನಂತರ ಬಿಸಿನೀರಿನೊಂದಿಗೆ ಸೇವಿಸಿದರೆ ಹೊಟ್ಟೆಯಲ್ಲಿರುವ ಗ್ಯಾಸ್ ಮಾಯವಾಗಿ ಮಲ ವಿಸರ್ಜನ್ನೇ ಸುಲಭವಾಗುತ್ತದೆ.

* ಹಸಿ ಶುಂಠಿ ರಸಕ್ಕೆ ಬೆಲ್ಲ ಸೇರಿಸಿ ಕುದಿಸಿ ಒಂದು ಚಮಚ ಸೇವಿಸಿದರೆ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

* ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಧ್ಯಾನ, ಯೋಗ, ಇವುಗಳನ್ನ ನಿತ್ಯವೂ ತಪ್ಪದೆ ಮಾಡಬೇಕು.

* ಪ್ರತಿ ದಿನ ಕನಿಷ್ಠ ಅರ್ಧಗಂಟೆ ಸಮಯ ವ್ಯಾಯಾಮ ಮಾಡಬೇಕು. । ಇದನ್ನೂ ಓದಿ : ಹೆಚ್ಚು ಕಾಲ ಆರೋಗ್ಯಕರವಾಗಿರಲು ಇಂತಹ ಆಹಾರಗಳನ್ನ ಸೇವಿಸಿ…..!

* ನಾರಿನಂಶ ಅಧಿಕವಿರುವ ತಾಜಾ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.

* ಮಸಾಲೆ ಪದಾರ್ಥಗಳು, ಕರಿದ ತಿಂಡಿಗಳು, ಮದ್ಯಪಾನ, ಧೂಮಪಾನ ತ್ಯಜಿಸಬೇಕು.

* ಸರಿಯಾದ ಸಮಯಕ್ಕೆ ನೀರು ಸೇವಿಸ ಬೇಕು. ಸಾಕಷ್ಟು ನೀರನ್ನ ಸೇವಿಸಬೇಕು. । ಇದನ್ನೂ ಓದಿ : ಉತ್ತತ್ತಿ ತಿಂದರೆ ಆರೋಗ್ಯಕ್ಕೆ ಅಧಿಕ ಲಾಭ. ಹೇಗೆ ಗೊತ್ತಾ…? ತಿಳಿಯಲು ಈ ಲೇಖನ ಓದಿ…

LEAVE A REPLY

Please enter your comment!
Please enter your name here