ಅಂಜೂರ… ಈ ಹಣ್ಣಿನ ಬಗ್ಗೆ ನವ್ವೆಲ್ಲರು ಕೇಳಿರುತ್ತೇವೆ. ಇದನ್ನು ಹತ್ತಿಹಣ್ಣು ಎಂದು ಸಹ ಕರೆಯುತ್ತಾರೆ. ಇದನ್ನ ನೋಡಿ ತಿನ್ನಬಾರದು ಎಂದು ಹಲವಾರು ಹೇಳಿತ್ತಾರೆ. ಚೆನ್ನಾಗಿ ಮಾಗಿದ ಈ ಹಣ್ಣನ್ನು ಒಣಗಿಸಿ ಡ್ರೈ ಫ್ರೂಟ್ಸ್ ರೂಪದಲ್ಲಿ ಸಹ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಅಂಜೂರ ಹಣ್ಣಿನಲ್ಲಿ ಫೈಬರ್ ಬೇಕಾದಷ್ಟು ಇರುತ್ತದೆ. ಇದು ನಾವು ತಿಂದ ಆಹಾರವನ್ನು ಸುಲಭವಾಗಿ ಜೀರ್ಣ ಮಾಡಲು ಉಪಯೋಗಕ್ಕೆ ಬರುತ್ತದೆ. ಜೀರ್ಣ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ. ಗ್ಯಾಸ್, ಅಸಿಡಿಟಿ, ಮಲಬದ್ಧತೆಯಂತಹ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಇದರಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಇದನ್ನ ಯಾವಾಗ ತಿಂದರು ಆರೋಗ್ಯಕ್ಕೆ ಉತ್ತಮ ಆದರೆ ಇದನ್ನ ಊಟಕ್ಕೆ ಮುನ್ನ ತಿಂದರೆ ಸಾಕಷ್ಟು ಲಾಭಗಳಾಗುತ್ತವೆ. ಯಾವೆಲ್ಲ ಲಾಭಗಳನ್ನ ಇದರಿಂದ ಪಡೆಯ ಬಹುದು ಎಂಬುದು ಇಲ್ಲಿದೆ ನೋಡಿ.  । ಇದನ್ನೂ ಓದಿ :  ಕುಂಬಳ ಕಾಯಿ ಕೇವಲ ದೃಷ್ಟಿ ತೆಗೆಯಲು ಅಲ್ಲ! ನಿಮ್ಮ ಆರೋಗ್ಯಕ್ಕೂ ಅತ್ಯುತ್ತಮವಾದದ್ದು! ಲೇಖನ ಓದಿ..

* ರಕ್ತಹೀನತೆ ಸಮಸ್ಯೆ ಇಂದು ಬಹಳಷ್ಟು ಮಂದಿಯನ್ನು ಕಾಡುತ್ತಿದೆ. ಆದರೆ ಅಂತಹವರು ನಿತ್ಯ ಎರಡು ಅಂಜೂರವನ್ನು ಊಟಕ್ಕೂ ಮುನ್ನ ತಿಂದರೆ ಅವರಲ್ಲಿ ರಕ್ತ ಹೆಚ್ಚುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಮಲೇರಿಯಾ, ಟೈಫಾಯಿಡ್, ಡೆಂಗ್ಯೂನಂತಹ ವಿಷಮ ಜ್ವರದಿಂದ ಬಳಲುತ್ತಿರುವವರಲ್ಲಿ ಪ್ಲೇಟ್‌ಲೆಟ್‌ಗಳು ಕಡಿಮೆಯಾದವರಿಗೆ ತಿನ್ನಿಸಿದರೆ ಕೂಡಲೆ ಪ್ಲೇಟ್‌ಲೆಟ್‍ಗಳು ಹೆಚ್ಚುತ್ತವೆ.

* ನಿತ್ಯ ಅಂಜೂರ ಹಣ್ಣನ್ನು ತಿನ್ನುತ್ತಿದ್ದರೆ ಹೃದಯ ಸಂಬಂಧಿ ಸಮಸ್ಯೆಗಳು ಸಹ ದೂರವಾಗುತ್ತವೆ. ಅಂಜೂರ ಹಣ್ಣಿನಲ್ಲಿ ಇರುವ ಪೆಕ್ಟಿನ್ ಎಂಬ ಪದಾರ್ಥ ದೇಹದಲ್ಲಿನ ವ್ಯರ್ಥ ಪದಾರ್ಥಗಳನ್ನು ತೊಲಗಿಸುತ್ತದೆ. ರಕ್ತವನ್ನು ಸ್ವಚ್ಛಗೊಳಿಸುತ್ತದೆ.

* ಅಂಜೂರದಲ್ಲಿ ಪೊಟ್ಯಾಷಿಯಂ, ಸೋಡಿಯಂ ಹೇರಳವಾಗಿದೆ. ಇದು ರಕ್ತದ ಒತ್ತಡ (ಬಿಪಿ) ಸಮಸ್ಯೆಯಿಂದ ಉಪಶಮನ ನೀಡುತ್ತದೆ. ಬಿಪಿಯನ್ನು ಕಂಟ್ರೋಲ್‌ನಲ್ಲಿ ಇಡುತ್ತದೆ. । ಇದನ್ನೂ ಓದಿ : ಕಾಡು ಕಣಿಗಿಲೆ ಇದು ಅಲಂಕಾರಕ್ಕೆ ಮತ್ತು ಆರೋಗ್ಯಕ್ಕೆ ತುಂಬಾ ಉತ್ತಮ ಎಂದರೆ ನೀವು ನಂಬಲೇಬೇಕು..!

 * ಅಧಿಕ ತೂಕದ ಸಮಸ್ಯೆ ಸಹ ಈಗ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಜೂರ ಹಣ್ಣನ್ನು ಎರಡು ಹೊತ್ತು ಊಟಕ್ಕೂ ಮುನ್ನ ತಿಂದರೆ ಅದರಿಂದ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಇದರಿಂದ ಹೆಚ್ಚಾಗಿ ತಿನ್ನುವುದು ತಪ್ಪುತ್ತದೆ. ಪ್ರತಿಫಲವಾಗಿ ತೂಕ ಕಡಿಮೆಯಾಗುತ್ತಾರೆ. ಅಷ್ಟೇ ಅಲ್ಲ ಅಂಜೂರದಲ್ಲಿ ಇರುವ ಪೋಷಕಗಳು ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲನ್ನು ಸಹ ಕಡಿಮೆ ಮಾಡುತ್ತವೆ.

* ಅಂಜೂರ ಹಣ್ಣಿನಲ್ಲಿ ಕ್ಯಾಲ್ಸಿಯಂ ಸಹ ಹೇರಳವಾಗಿ ಇರುತ್ತದೆ. ಇವನ್ನು ತಿನ್ನುವುದರಿಂದ ಮೂಳೆಗಳು ದೃಢವಾಗುತ್ತವೆ. ಮೂಳೆ ಮುರಿದುಕೊಂಡವರಿಗೆ ಇಟ್ಟರೆ ಮೂಳೆಗಳು ಶೀಘ್ರವಾಗಿ ಕೂಡಿಕೊಳ್ಳುತ್ತವೆ.

* ದೇಹದ ರೋಗ ನಿರೋಧಕ ವ್ಯವಸ್ಥೆ ಚೆನ್ನಾಗಿ ಆಗುತ್ತದೆ. ಕ್ಯಾನ್ಸರ್‌ಗೆ ಕಾರಣವಾಗುವ ಪದಾರ್ಥಗಳು ನಾಶವಾಗುತ್ತವೆ.

* ಅಂಜೂರ ಹಣ್ಣು ಮಧುಮೇಹ ಇರುವವರಿಗೆ ಅದೆಷ್ಟೋ ಒಳಿತು ಮಾಡುತ್ತದೆ. ಊಟಕ್ಕೆ ಮುನ್ನ ಇವನ್ನು ತಿಂದರೆ ಆ ಬಳಿಕ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಷ್ಟಾಗಿ ಹೆಚ್ಚಾಗಲ್ಲ.

LEAVE A REPLY

Please enter your comment!
Please enter your name here