ಹೌದು ಮಾನವನ ಆರೋಗ್ಯಕ್ಕೆ ಹಾಗಲಕಾಯಿ ಅನ್ನೋದು ತುಂಬಾ ಮುಖ್ಯವಾಗಿದೆ. ಹೇಗೆ ಅನ್ನೋದು ಇಲ್ಲಿದೆ ನೋಡಿ.
1. ಹಾಗಲಕಾಯಿ ಕಹಿಯಾದರುಚಿಯನ್ನು ಹೊಂದಿದ್ದು ಪಚನ(ಜೀರ್ಣ)ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

2. ಅಜೀರ್ಣ ಹಾಗೂ ಮಲಬದ್ಧತೆ ನಿವಾರಣೆಯಲ್ಲಿ ಸಹಕಾರಿಯಾಗಿದೆ.

3. ಹಾಗಲಕಾಯಿ ರಸವನ್ನು ಕರುಳಿನ ಲಾಡಿ ಹುಳು ನಿರೋಧಕವಾಗಿ ಬಳಸಲಾಗುತ್ತದೆ.

4. ಹಾಗಲಕಾಯಿಯ ಕಹಿಯು ಕ್ವಿನೈನ್ ಎಂಬ ಸಂಯುಕ್ತದಿಂದ ಬರುತ್ತದೆ ಹಾಗೂ ಇದು ಮಲೇರಿಯಾರೋಗಕ್ಕೆ ರಾಮಬಾಣವಾಗಿದೆ.

5. ಪನಾಮ ಹಾಗೂ ಕೊಲಂಬಿಯಾ ದೇಶದಲ್ಲಿ ಮಲೇರಿಯಾ ನಿರೋಧಕ ಅಂಶಗಳ ಕಾರಣದಿಂದಲೇ ಇದರ ಎಲೆಯಿಂದ ತಯಾರಿ ಸಲಾಗುವ ಟೀಯನ್ನು ಹೆಚ್ಚಾಗಿ ಬಳಸುತ್ತಾರೆ.

6.ಸಿಡುಬು, ದಡಾರದಂತಹ ರೋಗಗಳ ವಿರುದ್ಧ ಈ ಸಸ್ಯವನ್ನು ರೋಗನಿರೋಧಕವಾಗಿ ಬಳಸುತ್ತಾರೆ.

7. ಹಾಗಲಕಾಯಿಯು ಮಧುಮೇಹ ಪೀಡಿತರಿಗೆ ಒಂದು ಅತ್ಯುತ್ತಮ ಆಹಾರವಾಗಿದ್ದು, ರೋಗ ಲಕ್ಷಣಗಳನ್ನು ತಡೆಗಟ್ಟಲು ಹಾಗೂ ನಿಷ್ಫಲಗೊಳಿಸಲು ಸಹಕಾರಿಯಾಗಿದೆ.

8. ಹಾಗಲಕಾಯಿಯ ವಿಶೇಷತೆ ಎಂದರೆ ಮನುಷ್ಯನಲ್ಲಿನ ಇನ್ಸುಲಿನ್‍ನ ಸೂಕ್ಷ್ಮ ಸಂವೇದನೆಗಳನ್ನು ಹೆಚ್ಚಿಸುತ್ತದೆ ಎಂದು ಖಚಿತವಾಗಿದೆ.

ಪ್ರಕೃತಿ ನೀಡಿರುವ ಸಂಪನ್ಮೂಲಗಳನ್ನು ಅಗತ್ಯಕ್ಕನುಗುಣವಾಗಿ ಬಳಸಿ ಜೀವನಶೈಲಿಯಲ್ಲಿ ಸುಸ್ಥಿರತೆಯನ್ನ ಕಂಡುಕೊಂಡು ಉತ್ತಮ ಜೀವನದತ್ತ ಸಾಗುವಂತಾಗಲಿ.

LEAVE A REPLY

Please enter your comment!
Please enter your name here