ಊಟ ಆದಮೇಲೆ ಈ ತಪ್ಪುಗನ್ನು ಅಪ್ಪಿ ತಪ್ಪಿನೂ ಮಾಡಬೇಡಿ..! ಯಾವವು ಈ ಲೇಖನ ಓದಿ..  । ಇದನ್ನೂ ಓದಿ : ನಿಮ್ಮ ಕಣ್ಣಿನ ಆರೋಗ್ಯಕ್ಕೆ ಈ ಆಹಾರಗಳು ತುಂಬಾನೆ ಸೂಕ್ತ ..! ಅವು ಯಾವುವು ಅಂತೀರಾ? ಇಲ್ಲಿದೆ ನೋಡಿ.

1. ನಿದ್ರೆ

ರಾತ್ರಿ ಊಟದ ಬಳಿಕ ನೀವು ನಿದ್ರೆ ಮಾಡುವುದರಿಂದ, ನಿಮಗೆ ಅಸಿಡಿಟಿ ಉಂಟಾಗಿ ರಾತ್ರಿಯಿಡಿ ನಿಮ್ಮ ಎಡೆ ಬಾಗ ಉರಿಯಲು ಶುರು ಮಾಡುತ್ತದೆ, ಇದರಿಂದ ತಪ್ಪಿಸಿಕೊಳ್ಳಲು ನೀವು ಊಟ ಆದ ನಂತರ ಚೆನ್ನಾಗಿ ನೀರು ಕುಡಿದು, ಸ್ವಲ್ಪ ವಾಕ್ ಮಾಡಿ ಮಲಗಿಕೊಳ್ಳಿ.

2. ಧೂಮಪಾನ ಮಾಡುವುದು.

ಬಹಳಷ್ಟು ಜನರು ಊಟ ಆದ ನಂತರ ಧುಉಮಪಾನ ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ, ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮ ಮಾಡುತ್ತದೆ. ಒಂದು ವರದಿಯ ಪ್ರಕಾರ ಊಟ ಮಾಡಿದ ತಕ್ಷಣ ಧೂಮಪಾನ ಮಾಡಿದ್ದೆ ಆದರೆ ಎಂದಿಗಿಂತಲೂ ನಿಮ್ಮ ಶ್ವಾಸಕೋಶಕ್ಕೆ  ಶೇ ೧೦ ಜಾಸ್ತಿ ತೊಂದರೆ ಕೊಡಲಿದೆಯಂತೆ, ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಸಂಭವಿಸಬಹುದು ಎನ್ನುತ್ತಾರೆ ತಜ್ಞರು. । ಇದನ್ನೂ ಓದಿ : ಶುಂಠಿಯಲ್ಲಿದೆ ಬಹುಪಯೋಗಿ ಆರೋಗ್ಯಕರ ಗುಣಗಳು..!

3. ಸ್ನಾನ

ಊಟದ ಬಳಿಕ ಸ್ನಾನ ಮಾಡುವುದರಿಂದ ನಿಮ್ಮ ರಕ್ತ ಸಂಚಾರ ಕೇವಲ ನಿಮ್ಮ ಕೈ ಕಾಲಿಗೆ ಮಾತ್ರ ಸೀಮಿತವಾಗಲಿದೆ ಇದರಿಂದ ಜೀರ್ಣಾಂಗ ವ್ಯವಸ್ಥೆ ಆಗಬಹುದಾದ ರಕ್ತ ಸಂಚಲನೆಗೆ ತಡೆಯೊಡ್ಡಿದಂತಾಗುತ್ತದೆ ಇದು ಕ್ರಮೇಣ ನಿಮ್ಮ ಜೀರ್ಣಾಗ ವ್ಯವಸ್ಥೆಯ ನಿಶ್ಯಕ್ತಿಗೆ ಕಾರಣವಾಗಬಹುದು.

4. ಹಣ್ಣುಗಳನ್ನು ತಿನ್ನಬೇಡಿ

ಊಟ ಆದಮೇಲೆ ಹಣ್ಣನ್ನು ತಿಂದರೆ ಒಳ್ಳೆಯದು ಎಂದು ಹಲವಾರು ನಂಬಿರುತ್ತಾರೆ.! ಆದರೆ ಅದು ಸುಳ್ಳು, ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ನಿಮ್ಮ ದೇಹಕ್ಕೆ ಒಳ್ಳೆಯದು, ನೀವು ಒಂದು ವೇಳೆ ಊಟ ಆದಮೇಲೆ ಹಣ್ಣನ್ನು ಸೇವಿಸಿದ್ದೆ ಆದರೆ ಅದು ಜೀರ್ಣವಾಗದೇ ಉಳಿಯುವ ಸಾಧ್ಯತೆ ಹೆಚ್ಚು, ಕಾರಣ ಹಣ್ಣಿನಲ್ಲಿ ಗ್ಲುಕೋಸ್ ಅಂಶ ಹೆಚ್ಚಾಗಿರುವುದರಿಂದ ಅದನ್ನು ಕರಗಿಸಲು Enzyme ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ, ಊಟದ ಬಳಿಕ ನೀವು ಹಣ್ಣನ್ನು ಸೇವಿಸಿದ್ದೆ ಆದರೆ enzyme ನ ಕೊರತೆಯಿಂದಾಗಿ ಹಣ್ಣು ಜೀರ್ಣವಾಗದೇ ಉಳಿಯಬಹುದು ಇದು ಮುಂದೆ ಹೊಟ್ಟೆ ಪ್ರದೇಶದ ಕೊಬ್ಬು ಜಾಸ್ತಿಯಾಗಲು ಕಾರಣವಾಗುತ್ತದೆ. । ಇದನ್ನೂ ಓದಿ : ತ್ವಚೆಗೆ ಗ್ರೀನ್ ಟೀ ಎಷ್ಟು ಸಹಕಾರಿಯಾಗಿದೆ ಗೋತ್ತಾ? ಇಲ್ಲಿದೆ ನೋಡಿ.

5. ಟೀ ಕುಡಿಯುವುದನ್ನು ನಿರ್ಬಂಧಿಸಿ

ಊಟ ಆದ ಬಳಿಕ ಟೀ ಕುಡಿದದ್ದೇ ಆದರೆ, ಟೀ ನಲ್ಲಿರುವ ಟಾನಿಕ್ ಆಸಿಡ್ ನಿಮ್ಮ ಆಹಾರದಲ್ಲಿರುವ ಕಬ್ಬಿಣ ಅಂಶವನ್ನು ಹೀರಿಕೊಳ್ಳುತ್ತದೆ ಇದರಿಂದ ನಿಮ್ಮ ದೇಹಕ್ಕೆ ಸಿಗಬಹುದಾದ ಕಬ್ಬಿಣ ಅಂಶ ಸಿಗದೇ ಇರಬಹುದು ಇದು ಮುಂದೆ ನಿಮ್ಮ ರಕ್ತದ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.

LEAVE A REPLY

Please enter your comment!
Please enter your name here