ಹಣ್ಣುಗಳಲ್ಲಿಯೇ ಸ್ವಲ್ಪ ವಿಶೇಷವಾದ ಹಣ್ಣು ಈ ದಾಳಿಂಬೆ ಎಂದರೆ ಖಂಡಿತ ತಪ್ಪಾಗಲಾರದು, ಏಕೆಂದರೆ ಇದರಲ್ಲಿನ ಕಾಲುಗಳು ನೋಡಲು ಅಷ್ಟು ಸುಂದರವಾಗಿರುತ್ತವೆ, ಕಣ್ಣುಗಳಿಗೆ ಮೆಚ್ಚುಗೆಯಾಗುವಂತಹ ಬಣ್ಣವನ್ನ ಹೊಂದಿರುತ್ತವೆ. ಈ ದಾಳಿಂಬೆ ಹಣ್ಣು ತಿನ್ನಲು ಬಾಯಿಗೆ ಮಾತ್ರ ರುಚಿ ಅಷ್ಟೇ ಅಲ್ಲದೆ ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ದಾಳಿಂಬೆ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಬೇಕೆಂದು ವೈದ್ಯರೂ ಕೂಡ ಸಲಹೆ ನೀಡುತ್ತಾರೆ. ಈ ಹಣ್ಣನು ತಿನ್ನಲು ಕಷ್ಟವಾದರೆ ಜ್ಯೂಸ್ ಕೂಡ ಸೇವಿಸ ಬಹುದು. ಈ ದಾಳಿಂಬೆ ಹಣ್ಣಿನಿಂದಾಗುವ ಆರೋಗ್ಯಕರ ಲಾಭಗಳು ಇಲ್ಲಿವೆ ನೋಡಿ….  । ಇದನ್ನೂ ಓದಿ :  ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಎಷ್ಟೆಲ್ಲ ಲಾಭಗಳು ಇವೆ ಗೋತ್ತಾ? ಈ ಲೇಖನ ನೋಡಿ.

* ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತ ಸಂಚಾರ ಸುಲಭವಾಗುತ್ತದೆ. ರಕ್ತವು ವೃದ್ಧಿಯಾಗುತ್ತದೆ.

* ದಾಳಿಂಬೆ ಹಣ್ಣು ತಿನ್ನುವುದರಿಂದ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಕಾಡುವುದಿಲ್ಲ, ದಂತ ವೈದ್ಯರು ಸಹ ದಾಳಿಂಬೆಯನ್ನ ತಿನ್ನಲು ಹೇಳುತ್ತಾರೆ.

* ಹಿರಿಯ ವಯಸ್ಕರನ್ನು ಕಾಡುವ ಆಲ್‌ಝೈಮರ್‌‌ ಕಾಯಿಲೆ ಗುಣವಾಗುತ್ತದೆ.

* ಗರ್ಭಿಣಿಯರು ದಾಳಿಂಬೆ ಜ್ಯೂಸ್ ಸೇವನೆ ಮಾಡುವುದು ಬಹಳ ಒಳ್ಳೆಯದು.    । ಇದನ್ನೂ ಓದಿ : ಸೀತಾಫಲ ಹಣ್ಣಿನಲ್ಲಿವೆ ಹಲವು ಔಷದಿಯ ಗುಣಗಳು ಉಪಯೋಗಿಸಿ ನೋಡಿ…!

* ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ದೂರ ಮಾಡಿ ಎನಿಮಿಯಾದಿಂದ ನಮ್ಮನ್ನು ರಕ್ಷಿಸುತ್ತದೆ.

* ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಎ ಹಾಗೂ ಫೋಲಿಕ್ ಆಮ್ಲವಿರುತ್ತದೆ ಇವುಗಳು ಆರೋಗ್ಯಕ್ಕೆ ಬಹಳ ಉಪಯುಕ್ತ.

* ದಾಳಿಂಬೆ ದೇಹದಲ್ಲಿರುವ ರಕ್ತವನ್ನು ಶುದ್ಧಗೊಳಿಸುವ ಕೆಲಸವನ್ನು ಮಾಡುತ್ತದೆ.

* ಅಜೀರ್ಣ ಸಮಸ್ಯೆ ಇದ್ದವರು ದಾಳಿಂಬೆ ಹಣ್ಣನ್ನ ತಿಂದರೆ ಅಜೀರ್ಣತೆ ಕಡಿಮೆಯಾಗುತ್ತದೆ. । ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ಲೇಖನ ಓದಿ..

LEAVE A REPLY

Please enter your comment!
Please enter your name here