ಮನಸ್ಸಿನಲ್ಲಿ ಮೂಡಿಬರುವ ಆಲೋಚನೆಗಳನ್ನು ಹಿಡಿದಿಟ್ಟು,ಮನಸ್ಸಿನ ಏಕಾಗ್ರತೆಯನ್ನು ಉಸಿರಿನ ಏರಿಳಿತದ ಕಡೆಗೆ ದೃಢೀಕರಿಸುವುದೇ ಧ್ಯಾನ.ಧ್ಯಾನ ಎಲ್ಲರಿಗೂ ಅತ್ಯಾವಶ್ಯಕ. ಪ್ರತಿಯೊಬ್ಬರಂತೆ ನಾವು ಕೂಡ ನಮ್ಮದೇ ಆದ ಕೆಲವು ರೀತಿಯಲ್ಲಿ ಧ್ಯಾನವನ್ನು ಕಂಡುಕೊಳ್ಳುವುದು ಅತ್ಯಾವಶ್ಯಕ .ಬೆಳಗ್ಗಿನಿಂದ ರಾತ್ರಿಯವರೆಗೂ ನಮ್ಮೆಲ್ಲರ ಮನಸ್ಸು ಎತೆಚ್ಚವಾಗಿ ಯೋಚಿಸುತಿರುತ್ತದೆ, ಕೆಲವುಸಲ ಕನಸ್ಸು ಗಳನ್ನು ಕಾಣುವ ಮೂಲಕ ನಿದ್ರೆಯಲ್ಲಿಯೂ ನಮ್ಮ ಮನಸ್ಸು ಆಲೋಚನೆಗೊಳಗಾಗಿರುತ್ತದೆ,ಹಾಗಾಗಿ ಈ ನಮ್ಮೆಲ್ಲರ ಮುಗ್ಧ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ, ಒಂದು ಆಹ್ಲಾದಕರವಾದ ಮುಗುಳ್ನಗೆ, ಜೊತೆಗೆ ಸ್ವಲ್ಪ ಖುಷಿ ಅಂದ್ರೆ ಮನಸ್ಸಿನ ಸಂತೋಷ ,ಇವೆಲ್ಲವನ್ನೂ ಸಾಧಿಸಲು ಮನುಷ್ಯನ ಮನಸ್ಸಿಗೆ ಧ್ಯಾನ ತುಂಬಾ ಮುಖ್ಯವಾದದ್ದು.

ಚಿಕ್ಕಂದಿನಲ್ಲಿ ಶಾಲೆಯಲ್ಲಿ ಏಕಾಗ್ರತೆ ಇಂದ ಕಣ್ಣು ಮುಚ್ಚಿ ಉಸಿರಾಟವನ್ನು ಗಮನಿಸುತ್ತಾ ಧ್ಯಾನ ಮಾಡುವುದು ಒಂದು ರೀತಿಯಾದರೆ, ಯಾವುದೇ ಕೆಲಸದಲ್ಲಿ ಧನ್ಯತೆಯಿಂದ ಇದ್ದು ನಾವು ಮಾಡುವ ಪ್ರತಿ ಕೆಲಸದಲ್ಲೂ ಸಂಪೂರ್ಣವಾಗಿ ತಲ್ಲೀನರಾಗುವುದು ಒಂದು ರೀತಿಯ ಧ್ಯಾನ. ಮನಸ್ಸು ಮತ್ತು ದೇಹಕ್ಕೆ ಪರಿಶುಧ್ಹವಾದ ವಾತಾವರಣವನ್ನು ಕಲ್ಪಿಸಿ, ಸಂತೋಷಗೊಳಿಸುವುದು ಕೂಡ ಒಂದು ರೀತಿಯ ಧ್ಯಾನ. ಮನೊನಿಗ್ರಹ ಎನ್ನುವುದು ಮನಸ್ಸಿನ ಪರಿಶುಧತೆಯನ್ನು ಅವಲಂಬಿಸಿದೆ. ನಮ್ಮ ಮನಸ್ಸು ಹಲವು ಬಾರಿ ಮಲಿನವಾಗಿರುವುದರಿಂದಲೇ ನಾವು ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಮನಸ್ಸಿನ ಮಾಲಿನ್ಯಗಳೆಂದರೆ ಅಸೂಯೆ, ದ್ವೇಷ, ಕ್ರೋಧ, ಭಯ,ಈರ್ಷೆ, ಕಾಮ, ಲೋಭ, ಕಪಟ್ಯ, ಮುಂತಾದವುಗಳು, ಇವೆಲ್ಲವನ್ನೂ ಸತತ ಧ್ಯಾನಾಭ್ಯಾಸದಿಂದ ನಮ್ಮ ಮನಸ್ಸನ್ನು ಮಾಲಿನ್ಯಮುಕ್ತವಾಗಿಸಬಹುದು. ಮನೊನಿಗ್ರಹಕ್ಕೆ ನಾವು ಅತ್ಯಂತ ಧೃಡವಾದ ಸಂಕಲ್ಪಾಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಮನೊನಿಗ್ರಹವನ್ನು ಸಾಧಿಸಲು ಅಗತ್ಯವಾದ ಅಭ್ಯಾಸಗಳನ್ನು ಕೈಗೊಳ್ಳುವ ಮೊದಲು ನಮ್ಮ ಮನಸ್ಸಿನ ವಾತಾವರ್ಣವು ಆ ಕಾರ್ಯಕ್ಕೆ ಅನುಕೂಲವಾಗಿರುವಂತೆ ನೋಡಿಕೊಳ್ಳಬೇಕು, ಅಂದರೆ ಬದುಕಿನ ಕೆಲವು ವೈಲಕ್ಷಣ್ಯಗಳನ್ನು ಅನಿವಾರ್ಯವೆಂದು ಒಪ್ಪಿಕೊಳ್ಳುವ ಸಾಮರ್ಥ್ಯವಿರಬೇಕು.

ಮನೊನಿಗ್ರಹಕ್ಕೆ ಎರಡು ಬಗೆಯ ಆಂತರಿಕ ಶಿಸ್ತುಗಳು ಅಗತ್ಯವಾಗಿವೆ:

ಒಂದು: ಮನಸ್ಸನ್ನು ಸರಿಯಾದ ದಾರಿಯಲ್ಲಿ ನಿರ್ದೇಶಿಸುವುದು,

ಎರಡು : ಎಂತಹ ತುರ್ತುಸ್ತಿತಿಗಳಲ್ಲಿಯೂ ನಮ್ಮನ್ನು ನಾವು ಕಾಯ್ದುಕೊಳ್ಳುವುದು.

ನಿರಂತರವಾದ ಧ್ಯಾನದಿಂದ ಮನೊನಿಗ್ರಹಕ್ಕೆ ಮತ್ತು ಮನೊನಿಗ್ರಹದಿಂದ ಧ್ಯಾನಕ್ಕೆ ಸಹಾಯವೊದಗುತ್ತದೆ.

ಪವಿತ್ರವಾದ ವಿಚಾರಗಳನ್ನು ಮನಸ್ಸಿನೊಳಗೆ ತುಂಬುತ್ತಾ, ಧ್ಯಾನ ಸೇರಿದಂತೆ ಯೋಗ , ಪ್ರಾಣಾಯಾಮ ಮೊದಲಾದ ಅಭ್ಯಾಸಗಳನ್ನು ಅನುಸರಿಸುತ್ತಾ, ನಮ್ಮ ಸುಪ್ತ ಪ್ರಜ್ಞೆಯನ್ನು ನಿಯಂತ್ರಿಸಬಹುದು. ನಾವು ಹಾನಿಕಾರಕವಾದ ಕಲ್ಪನೆಗಳನ್ನು ಮನಸ್ಸಿನಲ್ಲಿ ಕಟ್ಟಬಾರದು, ಬದುಕಿನ ಒಂದೊಂದು ಕ್ಷಣದಲ್ಲಿಯೂ ನೈತಿಕವಾಗಿ ಬದುಕುತ್ತಾ, ಮುಂದಿನ ಪ್ರತಿ ಕ್ಷಣಗಳಲ್ಲಿಯೂ,ಎಲ್ಲ ಬಗೆಯ ಅಪಾಯಗಳ ಸಾಧ್ಯತೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಒಟ್ಟಾರೆ “ಮನಸ್ಸು ಮತ್ತು ಅದರ ನಿಗ್ರಹಕ್ಕೆ ಧ್ಯಾನ ಅತ್ಯಾವಶ್ಯಕ”.

LEAVE A REPLY

Please enter your comment!
Please enter your name here