ದಿನ ನಿತ್ಯದಲ್ಲೂ ಟಿಫಿನ್ ತಯಾರಿಸುವುದು ಅಡುಗೆ ಮಾಡುವುದು ತುಂಬಾನೇ ಕಷ್ಟದ ಕೆಲಸ, ಅದರಲ್ಲೂ ಮಕ್ಕಳಿಗೆ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಮಾಡಿ ಕೊಡುವುದು ತಾಯಂದಿರಿಗೆ ತುಂಬಾನೇ ಇಷ್ಟದ ಜೊತೆಗೆ ಕಷ್ಟದ ಕೆಲಸ. ಮಾಮೂಲಿಯಾಗಿ ಮನೆಯಲ್ಲಿ ದೋಸೆ, ಅವಲಕ್ಕಿ, ಉಪ್ಪಿಟ್ಟು, ಇಡ್ಲಿ , ಪೊಂಗೋಲ್, ಇದು ನಿತ್ಯದಲ್ಲೂ ಮಾಡುವ ತಿನುಸುಗಳು. ನೀವು ಯಾವಾಗಲು ಒಂದೇ ತರಹದ ಬಿಸಿಬೇಳೆ ಬಾತ್ ತಿಂದಿರ್ತೀರಾ ಈ ಸಲ ಆರ್ಕ ಹಾಕಿ ಬಿಸಿಬೇಳೆ ಬಾತ್ ಮಾಡಿ ನೋಡಿ. ಹೇಗೆ ಮಾಡೋದು ಅಂತೀರಾ? ಈ ಕೆಳಗೆ ಓದಿ.

ಕಡಲೆಬೇಳೆ – 1/ 2 ಚಮಚ

ಲವಂಗ -5

ಜಾಜಿಕಾಯಿ ( ಜಾಯಕಾಯಿ ) – ಸ್ವಲ್ಪ

ತುಪ್ಪ –  6  ಚಮಚ

ಚಕ್ಕೆ – ಸ್ವಲ್ಪ

ಎಣ್ಣೆ – 5 ಚಮಚ

ಒಣ ಮೆಣಸಿಕಾಯಿ- 9

ದನಿಯಾ ಕಾಳುಗಳು –  1/2  ಚಮಚ

 ಆರ್ಕ ಬಿಸಿಬೇಳೆ ಬಾತ್ ಮಾಡಲು ಬೇಕಾಗಿರುವ ಸಾಮಗ್ರಿಗಳು

ತೊಗರಿ ಬೇಳೆ- 1

ದಪ್ಪ ಮೆಣಸಿನಕಾಯಿ – 1

ಆಲೂಗಡ್ಡೆ – 2

ಟೊಮ್ಯಾಟೋ -1

ಹೆಚ್ಚಿದ ಈರುಳ್ಳಿ – ಅರ್ಧ ಕಪ್

ಬಟಾಣಿ – 3 ಚಮಚ

ಕೊತ್ತಂಬರಿ ಸೊಪ್ಪು – 1 ಕಪ್

ಹುಣಸೆ ರಸ –  5 ಚಮಚ

ಬೆಲ್ಲ – ಸ್ವಲ್ಪ

ಕರಿಬೇವು – 5-6 ಎಲೆಗಳು

ಕೊಬ್ಬರಿ ತುರಿ ಅಥವಾ ಕೊಬ್ಬರಿ ಚೂರುಗಳು

ಅರಿಶಿನ – ಒಂದು ಚಿಟಿಕಿ

ಇಂಗು -ಚಿಟಿಕಿ

ಮಾಡುವ ವಿಧಾನ

ಮೊದಲು ಒಂದು ದಪ್ಪ ತಳದ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 2 ಚಮಚ ತುಪ್ಪದಲ್ಲಿ ಕಡಲೆಬೇಳೆ ಹುರಿದು ಕೊಳ್ಳಬೇಕು, ನಂತರ ಅದಕ್ಕೆ ಚಕ್ಕೆ, ಲವಂಗ, ಜಾಯಿಕಾಯಿಗಳನ್ನು ಒಳ್ಳೆಯ ವಾಸನೆ ಬರುವ ಹಾಗೆ ಹುರಿದು ಕೊಳ್ಳಬೇಕು, ಧನಿಯಾ ಮತ್ತು ಒಣ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿದು ಕೊಳ್ಳಬೇಕು, ಅದು ತಣ್ಣಗಾದ ಆದ ನಂತರ ಅದನ್ನು ಪುಡಿ ಮಾಡಿಕೊಳ್ಳಬೇಕು. ಒಂದು ಕುಕ್ಕರ್ ನಲ್ಲಿ  ಶುಚಿಗೊಳಿಸಿದ ಆರ್ಕ ಮತ್ತು ತೊಗರಿ ಬೇಳೆ ಅರಿಶಿನ , ತರಕಾರಿಗಳನ್ನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಬೇಯಿಸಕೊಳ್ಳಬೇಕು, ಬೇಯಿಸಿದ ಬೇಳೆಯನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಹುರಿದು ಪುಡಿ ಮಾಡಿಕೊಂಡಿರುವ ಬಿಸಿಬೇಳೆಬಾತ್ ಮಸಾಲೆ ಮತ್ತು ಹುಣಸೆ ರಸ, ಬೆಲ್ಲ, ಕೊಬ್ಬರಿ ಚೂರುಗಳು , ಉಪ್ಪು ಹಾಕಬೇಕು. ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ , ಕಡಲೆಕಾಯಿ ಬೀಜ, ಕರಿಬೇವು, ಸ್ವಲ್ಪ ಇಂಗು ಹಾಕಿ ಕೈಯಾಡಿಸಿ 5 ನಿಮಿಷ ಕುದಿಸಬೇಕು ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪು ಅದರ ಮೇಲೆ ಹಾಕಿದರೆ ರುಚಿಕರವಾದ ಆರ್ಕ ಬಿಸಿಬೇಳೇ ಬಾತ್ ತಿನ್ನಲು ಸಿದ್ಧ.

LEAVE A REPLY

Please enter your comment!
Please enter your name here