ಹೆಣ್ಣಿಗೆ ಕುಂಕುಮ ಬಳೆ ಹೂವು ಹಾಗೆ ಅದರ ಜೊತೆಗೆ ಉದ್ದಗಿನ ಕೂದಲು ಶೋಭೆ. ಈಗಿನ ಆಹಾರದ ಪದ್ದತಿ,ಮಾಲಿನ್ಯದ ವೈಪರೀತ್ಯ ಅಥವಾ ನೀರಿನ ಕಾರಣವೂ ಕೂದಲಿನ ಉದುರಿಕಗೆ ಕಾರಣವಾಗುತ್ತಿದೆ, ಆದರೆ ಈಗಿನ ದಿನಗಳಲ್ಲಿ ಕೂದಲಿನ ಆರೈಕೆಯ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ ಆದರೆ ಪೋಷಕಾಂಶ ಮತ್ತು ವಿಟಮಿನ್ಸ್ ಗಳ ಕೊರತೆಯಿಂದನ್ನು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಕೂದಲು ಬೆಳಿಸೋಕೆ ವಿಧವಿಧವಾದ ಟ್ರೀಟ್ಮೆಂಟ್ ಅದರ ಜೊತೆಯಲ್ಲಿ ಮನೆಯಲ್ಲಿ ಸಮಯ ಸಿಗದ ಕಾರಣ ಬ್ಯೂಟಿಪಾರ್ಲೌರ ಗೆ ಹೋಗುವ ಹೆಣ್ಣುಮಕ್ಕಳೇ ಹೆಚ್ಚು. ಹೆಣ್ಣು ಮಕ್ಕಳು ಅಷ್ಟೇ ಅಲ್ಲದೆ ಗಂಡು ಮಕ್ಕಳು ಕೂಡ ಮಸಾಜ್ ಮೊರೆ ಹೋಗುತ್ತಾರೆ.ಇನ್ನ ಮಸಾಜ್ ಮಾಡಬೇಕಾದರೆ ಈ ತರಹದ ಮಸಾಜ್ ಮಾಡಿಸಿಕೊಳ್ಳಿ.

ಕೂದಲಿಗೆ ಸರಿಯಾದ ಪೋಷಕಾಂಶ ಸಿಗಲಿ ಅನ್ನುವ ಕಾರಣಕ್ಕೆ ಕೂದಲಿಗೆ ಎಣ್ಣೆಯ ಮಸಾಜ್ ಮಾಡಿಸುತ್ತಾರೆ. ಆದರೆ ಅಗತ್ಯಕಿಂತ ಎಣ್ಣೆಯನ್ನು ಹೆಚಾಗ್ಗಿ ಹಚ್ಚಿದರೆ ಕೂದಲಿನ ಹೊಳಪು ಕಡಿಮೆ ಆಗುತ್ತಾ ಬರುತ್ತದೆ ಎಷ್ಟು ಅಗತ್ಯ ಇದೆಯೂ ಅಷ್ಟನ್ನು ಮಾತ್ರ ತಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡಬೇಕು ಅಷ್ಟೇ ಅಲ್ಲದೆ ಗಟ್ಟಿ ಇರುವ ಕೂದಲು ದುರ್ಬಲ ಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ .ಆದರೆ ಮಸಾಜ್ ಮಾಡುವ ರೀತಿಯಲ್ಲಿ ಹೆಚ್ಚು ಕಡಿಮೆ ಆದರೆ ಕೂದಲು ಬೆಳೆಯುವ ಬದಲು ಉದುರಲು ಶುರುಆಗುತ್ತದೆ. ಹಾಗಾಗಿ ಮನಸ್ಸಿಗೆ ಬಂದ ಹಾಗೆ ಮಸಾಜ್ ಮಾಡುವುದು ಒಳ್ಳೆಯದಲ್ಲ.

ಮಸಾಜ್ ಮಾಡ ಬೇಕಾದರೆ ಒಳ್ಳೆಯ ಎಣ್ಣೆಯನ್ನು ಬಳಸಬೇಕು. ಮಸಾಜ್ ಮಾಡುವಾಗ ಅಂಗೈಯಿಂದ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಬಾರದು, ತುದಿ ಬೆರಳುಗಳಿಂದ ಮಸಾಜ್ ಮಾಡಬೇಕು ಮೊದಲು ಎಣ್ಣೆಯನ್ನು ಕೈಗೆ ಹಚ್ಚಿಕೊಂಡು ಕೂದಲಿನ ಬುಡಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು, ನಂತರ ಸ್ವಲ್ಪ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ತಲೆಯ ಮೇಲ್ಭಾಗದ ವರೆಗೂ ನಿಧಾನವಾಗಿ ಮಸಾಜ್ ಮಾಡಬೇಕು. ನೀವು ಮಸಾಜ್ ಮಾಡುವಾಗ ಅಂಗೈನಿಂದ ಹೆಚ್ಚಾಗಿ ಮಾಡಿದರೆ ಕೂದಲು ತುಂಬಾ ಉದುರುತ್ತದೆ ಇದರಿಂದ ಕೂದಲು ಸದೃಢವಾಗುವುದಿಲ್ಲ.

ಮೊದಲು ಕೂದಲಿನ ಬುಡವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ನಂತರ ಮೇಲೆ ಹೇಳಿದ ಹಾಗೆ ಮಸಾಜ್ ಮಾಡಬೇಕು. ತುಂಬಾ ಕೂದಲು ಉದುರುವ ಸಮಸ್ಯೆ ಇದ್ದರೆ ಮತ್ತು ತುಂಬಾ ಡ್ರೈ ಹೇರ್ಸ್ ಇದ್ದರೆ ವಾರದಲ್ಲಿ 2 ಬಾರಿ ಆಯಿಲ್ ಮಸಾಜ್ ಮಾಡುವುದು ಒಳ್ಳೆಯದು.

ಸಾಧ್ಯವಾದಷ್ಟು ಮನೆಯಲ್ಲಿ ಸಿಗುವ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದು ಒಳ್ಳೆಯದು. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ತೈಲಗಳನ್ನು ಬಳಸುವುದು ಕಡಿಮೆ ಮಾಡಿಕೊಳ್ಳಬೇಕು ಅದರಲ್ಲಿ ಇರುವ ರಾಸಾಯನಿಕ ಕಣಗಳು ಕೂದಲನ್ನು ಬಲಿಷ್ಠ ಗೊಳಸದೆ ದುರ್ಬಲ ಗೊಳಿಸಬಹುದು. ಅದರಿಂದ ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆ, ಅದರ ಜೊತೆಗೆ ಆಲಿವ್ ಆಯಿಲ್ಗಳನ್ನೂ ಸೇರಿಸಿ ಹಚ್ಚಿಕೊಳ್ಳುವುದರಿಂದ ಕೂದಲಿಗೆ ಹೊಳಪು ಬರುವುದರ ಜೊತೆಗೆ ಗಟ್ಟಿಯಾಗಿ ದಪ್ಪವಾಗಿ ಬೆಳಿಯುತ್ತವೆ. ಮೊಟ್ಟೆಯನ್ನು ಬಳಸುವುರು ಮೇಲಿರುವ ಎಣ್ಣೆಗೆ ಬೆರಿಸಿಕೊಂಡು ಮಸಾಜ್ ಮಾಡಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here