ಮನೆಯ ಅಂದ ಚಂದ ಕಾಪಾಡಿ ಕೊಳ್ಳುವುದು ತುಂಬಾನೇ ಮುಖ್ಯವಾದ ಕೆಲಸ, ಆದರೆ ಕೆಲವಂದು ಸಾರಿ ಮನೆಯನ್ನ ಎಷ್ಟೇ ನೀಟಾಗಿ ಇಟ್ಟರು ಮನೆಯಲ್ಲಿ ಮಕ್ಕಳಿಗೆ ಮಾತ್ರ ಖಾಯಿಲೆಗಳು ಹೋಗೋದೇ ಇಲ್ಲ ಕೆಮ್ಮು, ಶೀತ, ಜ್ವರ, ಹೊಟ್ಟೆನೋವು ಯಾವುದು ಕಡಿಮೇನೆ ಆಗತಾನೆ ಇಲ್ಲ ಅನ್ನು ಮಾತು ನೀವು ನಿತ್ಯದಲ್ಲೂ ಕೇಳುತಿರಿ,  ಆದರೆ ಇದ್ದಕೆ ಕಾರಣ ಏನು ಇರಬಹುದು ಅಂತ ಮಾತ್ರ ತಿಳಿದಿರುವುದಿಲ್ಲ ಅಡುಗೆ ಮನೆ ಎಷ್ಟೇ ಸ್ವಚ್ಛ ಮಾಡಿದರು ನಮ್ಮ ಕಣ್ಣಿಗೆ ಬೀಳುವುದೇ ಜಿರಳೆಗಳು. ಅಡುಗೆ ಮನೆಯಲ್ಲಿ ರಾತ್ರಿ ಸಮಯದಲ್ಲಿ ಡಬ್ಬದ ಮೇಲೆ, ಗ್ಯಾಸ್ಸ್ಟವ್ ಮೇಲೆ, ಪಾತ್ರೆಮೇಲೆ ಸಾಮಾನ್ಯವಾಗಿ ಜಿರಳೆಗಳು ಓಡಾಡುವುದನ್ನ ನೋಡಿರ್ತೀರ ಆದರೆ ಎಷ್ಟೇ ಮೆಡಿಸಿನ್ ಹಾಕಿದರೂ ಈ ಜಿರಳೆಗಳು ಮಾತ್ರ ಹೋಗೋದೇ ಇಲ್ಲ ಅನ್ನು ಜನ ಜಾಸ್ತಿ. ಜಿರಳೆಗಳು ಕೆಲವಂದು ಸಾರಿ ಇಟ್ಟಿರುವ ಆಹಾರ ಪದಾರ್ಥಗಳ ಮೇಲೆ ಓಡಾಡುತ್ತಿರುವುದನ್ನು ನೀವು ನೋಡಿರ್ತೀರ ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಷ್ಟೇ ಅಲ್ಲದೆ ಇವು ಸಾಂಕ್ರಾಮಿಕ ರೋಗವನ್ನು ಹರುಡುತ್ತವೆ.  ಜಿರಳೆಯಿಂದ ಮುಕ್ತಿ ಹೊಂದಬೇಕು ಅಂತ ಬಯಸುವುರು ಮನೆಯಲ್ಲಿರುವ ಕೆಲವು ಅಡುಗೆ ವಸ್ತುಗಳನ್ನು ಬಳಸಿ ಜಿರಳೆಯಿಂದ ಮುಕ್ತಿ ಹೊಂದಿರಿ.

ಸೌತೆಕಾಯಿಯ ಸಿಪ್ಪೆಯ ಸಮೇತ ರೌಂಡ್ ಆಗಿ ಕತ್ತರಿಸಿಕೊಂಡು ಅಡುಗೆ ಮನೆಯ ಮೂಲೆಗಳಲ್ಲಿ ಇಡಬೇಕು, ಬೆಳಿಗ್ಗೆ ಎದ್ದು ಅದನ್ನೆಲ್ಲಾ ತೆಗೆದು ಮತ್ತೆ ಹಾಗೆ ಸೌತೆಕಾಯಿಯನ್ನು ರೌಂಡ್ ಆಗಿ ಕಟ್ ಮಾಡಿ ಇಡಬೇಕು ದಿನಾಲೂ ಚೇಂಜ್ ಮಾಡಲು ಆಗದೆ ಹೋದಲ್ಲಿ ವಾರಕ್ಕೆ ಒಂದು ಸಲ ಹೀಗೆ ಮಾಡುತ್ತ ಹೋದರೆ ಜಿರಳೆಗಳು ಬರುವುದು ಕಡಿಮೆ ಆಗುತ್ತಾ ಹೋಗುತ್ತದೆ.

ಸಕ್ಕರೆ, ಮೈದಾ, ಮತ್ತು ಬೋರಿಕ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಬೇಕು, ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಜಿರಳೆ ಓಡಾಡುವ ಜಾಗದಲ್ಲಿ ಇಡಬೇಕು ಹೆಚ್ಚಾಗಿ ಅಡುಗೆ ಮನೆಯ ಮೂಲೆಗಳಲ್ಲಿ ಇದನ್ನು ಇಡಬೇಕು ಚಿಕ್ಕ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಬೇಕು. ಇದನ್ನು ವಾರಕ್ಕೆ ಒಮ್ಮೆ ಬದಲಾಯಿಸುತ್ತ ಇರಬೇಕು .

ಬಿರಿಯಾನಿ ಎಲೆಗಳನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಅದನ್ನು ಒಂದು ತಟ್ಟೆ ಅಥವಾ ಪೇಪರ್ ನಲ್ಲಿ ಹಾಕಿಕೊಂಡು ಜಿರಳೆ ಹೆಚಾಗ್ಗಿ ಓಡಾಡುವ ಜಾಗದಲ್ಲಿ ಪುಡಿಯನ್ನು ಹಾಕಬೇಕು ಇದರ ವಾಸನೆಯಿಂದ ಜಿರಳೆಗಳು ಬರುವುದು ಕಡಿಮೆ ಆಗುತ್ತಾ ಬರುತ್ತದೆ.

ಕಾಫಿ ಪುಡಿಯನ್ನು ಸ್ವಲ್ಪನೀರು ಹಾಕಿ ಅಥವಾ ನೀರು ಹಾಕದೇನೆ ಅಡುಗೆ ಮನೆಯ ಸಂಧಿಗಳಲ್ಲಿ ಸಿಂಪಡಿಸಿ ಬೆಳಿಗಿನವರೆಗೂ ಬಿಡಬೇಕು, ಬೆಳಿಗ್ಗೆ ಸಿಂಪಡಿಸಿದ ಜಾಗವನ್ನು ಶುಚಿಗೊಳಿಸಬೇಕು, ಹೀಗೆ 3 ರಿಂದ 4 ದಿನ ಇಲ್ಲವಾದಲ್ಲಿ 5 ರಿಂದ 6 ದಿನದವರೆಗೂ ಮಾಡಿದರೆ ಜಿರಳೆಗಳು ಬರುವುದು ಕಡಿಮೆ ಆಗುತ್ತದೆ.

ಬೆಳ್ಳುಳ್ಳಿ ಈರುಳ್ಳಿ ಮೆಣಸನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು, ರುಬ್ಬಿರುವ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಅಡುಗೆ ಮನೆಯ ಸಂದಿಗಳಲ್ಲಿ ಇಡಬೇಕು ಇದರಿಂದ ಜಿರಳೆಗಳು ಹೊರಗೆ ಹೋಗುತ್ತವೆ. ಹೀಗೆ 3 ರಿಂದ 4 ದಿನ ಮಾಡಿದರೆ ಜಿರಳೆಗಳು ಕಡಿಮೆ ಆಗುತ್ತಾ ಬರುತ್ತವೆ.

2 ಚಮಚ ಪುದಿನ ಎಣ್ಣೆಯನ್ನು ಅಥವಾ ನಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ಇದನ್ನು ಒಂದು ಬಾಟಲಿ ಗೆ ಹಾಕಿ ಅಡುಗೆ ಮನೆಯ ಮೂಲಿಗಳಿಗೆ ಸ್ಪ್ರೇ ಮಾಡಬೇಕು ಇದರಿಂದ ಜಿರಳೆಗಳು ಬರುವುದು ಕಡಿಮೆ ಆಗುತ್ತದೆ.

ಬೆಳ್ಳುಳ್ಳಿ ಈರುಳ್ಳಿ ರಸವನ್ನು ಒಂದು ಲೋಟ ನೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಒಂದು ಬಾಟಲಿ ಗೆ ಹಾಕಿ ಅಡುಗೆ ಮನೆಯ ಸಂಧಿಗಳಲ್ಲಿ ಸ್ಪ್ರೇ ಮಾಡಬೇಕು ಇದರಿಂದ ಜಿರಳೆಗಳು ಬರುವುದು ಕಡಿಮೆ ಆಗುತ್ತಾ ಬರುತ್ತದೆ.

LEAVE A REPLY

Please enter your comment!
Please enter your name here