ಬೇಸಿಗೆಯ ಬಿಸಿಲಿನಿಂದ ಬರುವ ಸಮಸ್ಯೆಗಳು ಹಲವಾರು ಬಿಸಿಲಿನ ತಾಪದಿಂದ ಜ್ವರ, ಉಷ್ಣ, ಬೆವರು ಸಾಲೆ ತಲೆಸುತ್ತು, ತಲೆ ನೋವು ಹೀಗೆ ಅನೇಕ ರೀತಿಯ ಸಮಸ್ಯೆಗಳು ಕಾಡುತ್ತವೆ. ಇವುಗಳ ಜೊತೆ ಅರ್ಧ ತಲೆ ನೋವು ಕೂಡ ಒಂದು.  ಇದನ್ನು ನಿವಾರಿಸಲು ಕೆಲವೊಂದು ಉಪಾಯಗಳಿವೆ. ಅದನ್ನು ಅನುಸರಿಸಿ ನೋವಿನಿಂದ ದೂರವಿರಬಹುದು.

1 ಸ್ಪೂನ್ ಹಸುವಿನ ತುಪ್ಪದಲ್ಲಿ ಒಂದು ಸ್ಪೂನ್  ಬೆಲ್ಲವನ್ನು ಬೆರೆಸಿ ಒಂದು ವಾರಗಳ ಕಾಲ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅರ್ಧ ತಲೆನೋವು ದೂರವಾಗುತ್ತದೆ.

ನಿಂಬೆ ಹಣ್ಣಿನ ರಸದಲ್ಲಿ ಚಕ್ಕೆಪುಡಿಯನ್ನು[ ದಾಲ್ಚಿನ್ನಿ] ಬೆರೆಸಿ  ಹಣಿಗೆ ಹಚ್ಚುವುದರಿಂದ ಅರ್ಧ ತಲೆನೋವು ಕಡಿಮೆಯಾಗುತ್ತದೆ.

1 ಸ್ಪೂನ್ ನುಗ್ಗೆ ರಸಕ್ಕೆ  1 ಸ್ಪೂನ್ ಶುಂಠಿ ರಸವನ್ನು ಬೆರೆಸಿ ಎಡಗಡೆ ನೋವಿದ್ದರೆ ಬಲಗಡೆ, ಬಲಗಡೆ ನೋವಿದ್ದರೆ ಎಡಗಡೆ ಹಣೆಗೆ ಹಚ್ಚ ಬೇಕು, ಅಥವಾ ಕಿವಿಗಳಿಗೆ ಎರಡು ಹನಿ ಹಾಕಬೇಕು ಇದರಿಂದ ಬೇಗನೆ ನೋವಿನಿಂದ ಮುಕ್ತಿ ಹೊಂದಬಹುದು.

ಸೇಬು ಹಣ್ಣಿಗೆ ಉಪ್ಪು ಬೆರೆಸಿ ತಿಂದರೆ ಅರ್ಧ ತಲೆನೋವು ಕಡಿಮೆಯಾಗುತ್ತದೆ.

ತಂಗಳು ಅನ್ನಕ್ಕೆ ಮೊಸರು ಬೆರೆಸಿ ಐದು ದಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅರ್ಧ ತಲೆನೋವು ನಿವಾರಣೆಯಾಗುತ್ತದೆ.

ಒಣಗಿದ ಎಕ್ಕದ ಬೇರನ್ನು ಪುಡಿ ಮಾಡಿ ಅದರ ಹೊಗೆಯನ್ನು ಮೂಗಿನ ಮೂಲಕ ಎಳೆದುಕೊಳ್ಳುವುದರಿಂದಲೂ ಅರ್ಧ ತಲೆ ನೋವಿನಿಂದ ಮುಕ್ತಿ ಹೊಂದಬಹುದು.

LEAVE A REPLY

Please enter your comment!
Please enter your name here