ಈಗಿನ ಗಡಿಬಿಡಿಯ ಸಮಯದಲ್ಲಿ ಕೈಯಿಂದ ಬಟ್ಟೆ ವಾಶ್ ಮಾಡೂವುದು ತುಂಬಾನೇ ಕಷ್ಟದ ಕೆಲಸ, ಮನೆಯಲ್ಲಿ ಕೆಲಸದವರು ಇದ್ದವರು ಬಟ್ಟೆಗಳನ್ನು ಅವರೇ ತೊಳೆದು ಹಾಕುತ್ತಾರೆ. ಆದರೆ ಸರ್ವೇ ಸಾಮನ್ಯವಾಗಿ ಎಲ್ಲರ ಮನೆಯಲ್ಲೂ ವಾಷಿಂಗ್ ಮಷೀನ್ ಇದ್ದೆ ಇರುತ್ತದೆ. ಬಟ್ಟೆಗಳನ್ನು ಶುಚಿಗೊಳಿಸಲು ಇದು ಸುಲಭ ವಿಧಾನ.  ಒಳ್ಳೆಯ ವಾಷಿಂಗ್ ಪೌಡರ್ ಅನ್ನು ಹಾಕಿದರೆ ಮಷೀನ್ ಬಹಳ ದಿನಗಳವರೆಗೂ ಮಷೀನ್ ತಾಳಿಕೆ ಬರುತ್ತದೆ. ಆದರೆ ಕೆಲವು ವೇಳೆ ಬಟ್ಟೆ ಒಗೆದ ನಂತರ ಮಷಿನ್ನಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ, ಇದಕ್ಕೆ ಕಾರಣ ಬಟ್ಟೆ ಒಗೆದ ಮೇಲೆ ಅದರಲ್ಲಿ ಉಳಿಯುವ ಕೊಳೆ ಅಥವಾ ಡಿಟರ್ಜೆಂಟ್ ಇರಬಹುದು. ಹಿಂತಾ ದೂರವಾಸನೆ ಹೋಗಲಾಡಿಸಬೇಕು ಅಂದರೆ ಸಿಂಪಲ್ ಆಗಿರುವ ಮನೆ ಮದ್ದನ್ನು ಬಳಸಿ.

1/4 ನಷ್ಟು ಬೇಕಿಂಗ್ ಸೋಡಾ ಮತ್ತು 1/4 ನೀರಿನೊಂದಿಗೆ ಸೇರಿಸಬೇಕು, ತಯಾರಿಸಿದ ಮಿಶ್ರಣವನ್ನು ನಿಮ್ಮ ಮಷಿನ್ ಡಿಟರ್ಜೆಂಟ್ ಗೆ ಸೇರಿಸಿ ಇಡಬೇಕು. ಬಟ್ಟೆ ಒಗೆದ ಬಂದ ನಂತರ ಇದನ್ನು ಮಷಿನ್ ಗೆ ಹಾಕಿ ಒಂದು ಸುತ್ತು ಖಾಲಿ ತಿರಗಿಸಬೇಕು, ಇದರಿಂದ ಕೆಟ್ಟ ವಾಸನೆ ಬರುವುದು ಕಡಿಮೆಯಾಗುತ್ತದೆ. ಅದಕ್ಕೆ ಸ್ವಲ್ಪ ವಿನೇಗರ ಸೇರಿಸಿ, ಡ್ರಮ್ ಒಳಗೆ 2 ಕಪ್ ನಷ್ಟು ವಿನೇಗರನ್ ಹಾಕಬೇಕು ಈ ಮಿಶ್ರಣವನ್ನು ಹಾಕಿದ ಮೇಲೆ ಹೈ ಹಿಟನಲ್ಲಿ ನಾರಮಲ್ ಲೊಡ್ನಲ್ಲಿ ಮಷೀನ್ ಓಡಿಸಬೇಕು.

ಮಷಿನಿನ ಕೊಳೆ ತೆಗೆದ ಮೇಲೆ ವಿನೆಗರ್ ಮತ್ತು ಒಂದು ಭಾಗ ನಿರೀನ್ನಲಿ ಹಾಕಿ ಒಂದು ರಟ್ಟು ಅಥವಾ ಸ್ಪಂಜು ಅಥವಾ ಬಟ್ಟೆಯಿಂದ ಉಳಿದ ಧೂಳು ಮತ್ತು ಕಲೆಯಿರುವ ಭಾಗಗಳನ್ನು ಚೆನ್ನಾಗಿ ಉಜ್ಜಬೇಕು, ಇದರ ಜೊತೆಗೆ ರಬ್ಬರ್ ಸೀಲ್ ಅನ್ನು ಸ್ವಚ್ಛ ಗೊಳಿಸಬೇಕು. ಪ್ರತಿ ಸಾರಿ ಬಟ್ಟೆ ಒಗೆದ ನಂತರ ಹೀಗೆ ಮಾಡುವುದು ಉತ್ತಮ.

ಹಲವಾರು ವರ್ಷ ಮಷೀನ್ ತಾಳಿಕೆ ಬರಬೇಕು ಅಂದರೆ ಒಳ್ಳೆಯ ವಾಷಿಂಗ್ ಪೌಡರ್ ಮಷೀನ್ ಗೆ ಹಾಕಲೆಂದೇ ತಯಾರಿಸಿರುವ ಪೌಡರ್ ಅನ್ನು ಹಾಕಬೇಕು. ಬಟ್ಟೆ ತೊಳೆದು ಬಂದ ನಂತರ ನೀಟಾಗಿ ಮಷೀನ್ ಒಳಗಡೆ ವರಿಸಬೇಕು, ಡಿಟರ್ಜೆಂಟ್ ಮತ್ತು ಲಿಂಟ್ ಫಿಲ್ಟರ್ ಅನ್ನು ದಿನಾಲೂ ಸ್ವಚ್ಛ ಗೊಳಿಸಬೇಕು.

ವಿ.ಸೂ:- ಸಾಧ್ಯವಾದಷ್ಟು ಮಟ್ಟಿಗೆ ಮಷೀನ್ ಗೆ ಬಿಸಿ ನೀರನ್ನು ಹಾಕಬೇಕು ಹಾಗೆ ಅದರ ಜೊತೆಗೆ ತಿಂಗಳಿಗೆ ಒಂದು ಸಲ ಬಟ್ಟೆ ಹಾಕದೆ ಮಷೀನ್ ತಿರುಗಿಸಬೇಕು. ಹೀಗೆ ಮಾಡಿದರೆ ಮಷೀನ್ ಬೇಗ ಹಾಳಾಗುವುದಿಲ್ಲ ಹೆಚ್ಚು ದಿನ ಬಾಳಿಕೆ ಬರುತ್ತದೆ.

LEAVE A REPLY

Please enter your comment!
Please enter your name here