ದೇಹದಲ್ಲಿ ಉಷ್ಣತೆಯು ಹೆಚ್ಚಾದರೆ ಅದರಿಂದ ಅನೇಕ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮೂಗಿನಲ್ಲಿ ಗುಳ್ಳೆಗಳು, ಉಷ್ಣದಿಂದ ಆಗುವ ನೆಗಡಿ ಮೂಗಿನಿಂದ ರಕ್ತ ಸೋರುವುದು ಈ ರೀತಿಯ ಸಮಸ್ಯೆಗಳು ದೇಹದಲ್ಲಿ ಹೆಚ್ಚಾಗುವ ಉಷ್ಣದಿಂದ ಉಂಟಾಗುತ್ತವೆ. ಮೂಗಿನಲ್ಲಿ ರಕ್ತ ಸೋರದಿರಲು ನೀವು ನಿಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಬೇಕು.

ಹೆಚ್ಚು ಹೊತ್ತು ಬಿಸಿಲಿನಲ್ಲಿ ಇರಬೇಕಾದಂತ ಸಮಯದಲ್ಲಿ ತಲೆಯ ಮೇಲೆ ಒದ್ದೆ ಬಟ್ಟೆಯನ್ನು ಹಾಕಿಕೊಳ್ಳುವುದು ಒಳ್ಳೆಯದು.

ಇಲ್ಲವೇ ನೆತ್ತಿಗೆ ಸ್ವಲ್ಪ ಸ್ವಲ್ಪ ತಣ್ಣೀರನ್ನು ಹಾಕಿಕೊಂಡು ತಟ್ಟುತ್ತಾ ಇರಬೇಕು.

ತುಪ್ಪದ ಹೀರೇಕಾಯಿ ಪಲ್ಯವನ್ನು ತಿನ್ನುವುದರಿಂದ ಮೂಗಿನಲ್ಲಿ ರಕ್ತ ಸೋರುವುದು ಕ್ರಮೇಣ ನಿಲ್ಲುತ್ತದೆ.

ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಹಸುವಿನ ಸೆಗಣಿಯ ವಾಸನೆಯನ್ನು ದೀರ್ಘವಾಗಿ ತೆಗೆದುಕೊಂಡರೆ ರಕ್ತ ಸೋರುವುದು ನಿಲ್ಲುತ್ತದೆ.

ಹಸುವಿನ  ನೊರೆ  ಹಾಲನ್ನು ಎರಡು ಹನಿ ಮೂಗಿನ ಹೊಳ್ಳೆಗಳಿಗೆ ಹಾಕಿದರೆ ರಕ್ತ ಸೋರುವುದು ನಿಲ್ಲುತ್ತದೆ.

ಗಣಿಕೆ ಸೊಪ್ಪಿನ ಪಲ್ಯ ಸಾರು ಸೇವಿಸುವುದರಿಂದ ಮೂಗಿನಲ್ಲಿ ರಕ್ತ ಸೋರುವುದು ನಿಲ್ಲುತ್ತದೆ.

ಹಸಿ ಈರುಳ್ಳಿಯ ವಾಸನೆಯನ್ನು ದೀರ್ಘವಾಗಿ ಎಳೆದು ಕೊಳ್ಳುವುದರಿಂದಲು ಮೂಗಿನಲ್ಲಿ ರಕ್ತ ಬರುವುದು ನಿಲ್ಲುತ್ತದೆ.

ಸಾಧ್ಯವಾದಷ್ಟು ದೇಹವನ್ನು ತಂಪಾಗಿಡ ಬೇಕು, ಹಸಿರು ತರಕಾರಿ ಗಳನ್ನಿ ಹೆಚ್ಚು ಸೇವಿಸಿ, ಹೆಸರು ಬೇಳೆ ಹೆಸರು ಕಾಳು  ಹೆಚ್ಚಾಗಿ ಉಪಯೋಗಿಸುವುದರಿಂದ ದೇಹದ ಉಷ್ಣತೆ ಕಡಿಮೆಯುಗುತ್ತದೆ.

 

 

LEAVE A REPLY

Please enter your comment!
Please enter your name here