ಈಗಿನ ಕಾಲದಲ್ಲಿ ವಯಸ್ಸಿನ ಹಂಗಿಲ್ಲದೆ ಕಾಡುವ ರೋಗಗಳಲ್ಲಿ ಹೃದಯಾಘಾತವು ಒಂದು.  ನಡೆಸುತ್ತಿರುವ ಜೀವನ ಶೈಲಿ ಸೇವಿಸುತ್ತಿರುವ ಆಹಾರ ಎದುರಿಸುತ್ತಿರುವ ಒತ್ತಡಗಳು ಸುತ್ತಮುತ್ತಲಿನ ಪರಿಸರ ಹೀಗೆ ಅನೇಕ ಕಾರಣಗಳಿಂದ ಹೃದಯಾಘಾತವು ಸಂಭವಿಸುತ್ತದೆ. ಮೂವತ್ತರಿಂದ ಐವತ್ತರ ಆಸುಪಾಸಿನ ವ್ಯಕ್ತಿಗಳಲ್ಲಿ ಹೃದಯಾಘಾತವು ಸಾಮಾನ್ಯ ಎಂಬಂತಾಗಿದೆ.

ನಾವು ಸೇವಿಸುವ ಆಹಾರದಲ್ಲಿ ಕೆಲವೊಂದು ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿದರೆ ಹೃದಯದ ಸಮಸ್ಯೆಯಿಂದ ಸ್ವಲ್ಪವಾದರೂ ದೂರವಿರಬಹುದು.

ಸೇವಿಸುವ ಆಹಾರದಲ್ಲಿ  ಮೆಂತ್ಯ ಕಾಳು ಅಥವಾ ಮೆಂತ್ಯಸೊಪ್ಪನ್ನು ಬಳಸುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ, ರಕ್ತ ಹೆಪ್ಪುಗಟ್ಟದಂತೆ ಮಾಡುತ್ತದೆ ಮತ್ತು ರಕ್ತದ ಪ್ಲೇಟ್ಸ್  ಅನ್ನು ನಿಯಂತ್ರಿಸುತ್ತದೆ.

ಉದ್ದಿನಲ್ಲಿರುವ ವಿಟಮಿನ್ ಡಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರ ಸೇವನೆಯಿಂದ ರಕ್ತ ವೃದ್ದಿಯಾಗುತ್ತದೆ. ಹೃದಯದ ಮಾಂಸಖಂಡಗಳು ಬಲವಾಗುತ್ತದೆ.

ಸೋಯಾ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರಕ್ತದಲ್ಲಿರುವ ಲಿಪಿಡ್ಸ್ ಕಡಿಮೆಯಾಗಿ ಕೆಟ್ಟ ಕೊಲೆಸ್ಟ್ರಾಲನ್ನು ನಿಯಂತ್ರಿಸಲು ಸಹಾಯಕವಾಗಿದೆ.

ವಿಟಮಿನ್ ಇ ಹೆಚ್ಚಾಗಿರುವ ಹಸಿರು ತರಕಾರಿ ಕಾಳುಗಳು ಬೆಣ್ಣೆ ಮೀನು ಹುರುಳಿ ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹೃದಯದ ಆರೋಗ್ಯ ಸ್ಥಿರವಾಗಿರುತ್ತದೆ.

ಟೊಮೆಟೊ ಸೇಬು ಸ್ವಾಬೆರಿ ಮೋಸಂಬಿ ಪಪ್ಪಾಯಿ ಕ್ಯಾರೆಟ್ ಮೂಲಂಗಿ ನೆಲ್ಲಿಕಾಯಿ ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹೃದಯಾಘಾತ ಪಾಶ್ವವಾಯು ಇಂತಹ ರೋಗಗಳಿಂದ ದೂರವಿರಬಹುದು.

LEAVE A REPLY

Please enter your comment!
Please enter your name here