ಭಾರತವು ಮಸಾಲೆ ಪದಾರ್ಥಗಳಿಗೆ ಹೆಸರುವಾಸಿ ಅನೇಕ ಮಸಾಲೆ ಪದಾರ್ಥಗಳಲ್ಲಿ ಇಂಗೂ ಕೂಡ ಒಂದು . ಇಂಗನ್ನು ಹಿಂದಿನ ಕಾಲದಿಂದಲೂ ಔಷಧಿಯ ರೂಪದಲ್ಲಿ ಉಪಯೋಗಿಸುತ್ತಿದ್ದಾರೆ. ಅಡುಗೆಯಲ್ಲಿ ಇಂಗನ್ನು ಹಾಕಿದರೆ ಅದರ ಪರಿಮಳವೇ ಬೇರೆ ಇಂಗು ಬರಿ ಅಡುಗೆಗೆ ಮಾತ್ರವಲ್ಲ ಹಲವಾರು ಸಮಸ್ಯಗಳ ನಿವಾರಣೆಗೂ ಔಷದಿಯ ರೂಪದಲ್ಲಿ ಹಿಂದಿನ ಕಾಲದಿಂದಲೂ ಬಳಸಲ್ಪಡಿತ್ತಿದೆ.

ದೇಹದಲ್ಲಿ ಕಜ್ಜಿ ದ್ದದ್ದು ಇಸುಬು ಗಳಾಗಿದ್ದಾರೆ 1 ಸ್ಪೂನ್ ಇಂದಿಗೆ ಒಂದು ಸ್ಪೂನ್  ಕೊಬ್ಬರಿ ಎಣ್ಣೆ ಬೆರೆಸಿ ಪೇಸ್ಟ್ ನಂತೆ ಮಾಡಿ, ಅವುಗಳ ಮೇಲೆ ಲೇಪಿಸುವುದರಿಂದ ನಿವಾರಣೆಯಾಗುತ್ತವೆ.

ಮಕ್ಕಳಿಗೆ ಹೊಟ್ಟೆಯಲ್ಲಿ ಜಂತುಹುಳ ಬಿದ್ದು ಹೊಟ್ಟೆ ನೋವು ಇದ್ದರೆ ಇಂಗನ್ನು ತುಪ್ಪದಲ್ಲಿ ಹುರಿದು ಒಂದು ಲೋಟ ಬಿಸಿ ನೀರಿಗೆ ಅರ್ಧ ಚಮಚ ಇಂಗು ಬೆರೆಸಿ ಕುಡಿದರೆ ಜಂತು ಹುಳಗಳ ಸಮಸ್ಯೆ ತಪ್ಪುತ್ತದೆ.

ಮೊಡವೆ ಮತ್ತು ಕಲೆಗಳಿಗೆ ಇಂಗಿನಾ ಪೇಸ್ಟ್ ಹಚ್ಚುವುದರಿಂದ ಮೊಡವೆ ಮತ್ತು ಕಲೆಗಳು ದೂರವಾಗುತ್ತವೆ.

ಉಷ್ಣದಿಂದ ದೇಹದಲ್ಲಿ ಗುಳ್ಳೆ ಗಳಾಗಿದ್ದು ಅವು ಕೀವು  ತುಂಬಿದ್ದರೆ  1 ಸ್ಪೂನ್ ನಿಂಬೆ ರಸಕ್ಕೆ 1 ಸ್ಪೂನ್ ಇಂಗನ್ನು  ಬೆರೆಸಿ ಗುಳ್ಳೆಗಳ ಮೇಲೆ ಹಚ್ಚುವುದರಿಂದ ಗುಳ್ಳೆಗಳು ನಿವಾರಣೆಯಾಗುತ್ತದೆ.

ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿ ಮತ್ತು ಇಂಗನ್ನು ಬೆರೆಸಿ ಕಷಾಯ ತಯಾರಿಸಿ  ತಯಾರಿಸಿದ ಕುಡಿಯುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

ಇಂಗನ್ನು ಸೇವಿಸುವ ಮೊದಲು ಸ್ವಲ್ಪ ಬಿಸಿ ಮಾಡಿ ತುಪ್ಪ ಬೆರೆಸಿ ಡಬ್ಬಿಯಲ್ಲಿ ಹಾಕಿದ ಬೇಕು.

LEAVE A REPLY

Please enter your comment!
Please enter your name here