ವಿಟಮಿನ್ಸ್ ಮಿನಿರಲ್ಸ್ ನ್ಯೂಟ್ರೇಯೆಂಟ್ಸ್  ಇನ್ನೂ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ  ಬಾದಾಮಿ.  ಪ್ರತಿದಿನ 4, 5 ಸೇವಿಸುತ್ತಾ ಬಂದರೆ ದೇಹಕ್ಕೆ ಬೇಕಾಗಿರುವ ಅನೇಕ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಬೆಳಗ್ಗೆ ಅದನ್ನು ತಿನ್ನಬೇಕು ಇದರಿಂದ ಬಾದಾಮಿಯಲ್ಲಿರುವ ಸಂಪೂರ್ಣ ಪೋಷಕಾಂಶಗಳು ಶರೀರಕ್ಕೆ ದೊರೆಯುತ್ತದೆ. ದೇಹದಲ್ಲಿ ಸುಲಭವಾಗಿ ಬೆರೆಯುತ್ತದೆ.

ಬಾದಾಮಿಯಲ್ಲಿರುವ ಫೋಲಿಕ್ ಆಸಿಡ್ ಗರ್ಭಿಣಿ ಸ್ತ್ರೀಯರಿಗೆ ತುಂಬಾ ಒಳ್ಳೆಯ ಆಹಾರ ಆರೋಗ್ಯಯುತ ಮಗು ವಿನ ಜನನಕ್ಕಾಗಿ ಫೋಲಿಕ್ ಆಸಿಡ್ ತುಂಬಾ ಮುಖ್ಯ.

ನೆನೆಸಿದ ಬಾದಾಮಿಯನ್ನು ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಬಾದಾಮಿಯಲ್ಲಿ ಇರುವ ವಿಟಮಿನ್ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ದೇಹದ ತೂಕ ಕಡಿಮೆ ಯಾಗುತ್ತದೆ.

ಬಾದಾಮಿಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಗುಣ ಗಳು ಇರುವುದರಿಂದ ಇದರ ಸೇವನೆಯಿಂದ ಕ್ಯಾನ್ಸರ್ ಅನ್ನು ದೂರವಿರಿಸಬಹುದು.

ಬಾದಾಮಿಯಲ್ಲಿರುವ ಕಡಿಮೆ ಕ್ಯಾಲೋರಿ ಗಳಿಂದ ರಕ್ತದಲ್ಲಿನ ಇನ್ಸುಲಿನ್ ಮತ್ತು ಸಕ್ಕರೆ ಅಂಶವನ್ನು ಸುಸ್ಥಿತಿಯಲ್ಲಿ ಇಡಬಹುದು.

ನೆನೆಸಿದ ಬಾದಾಮಿಯ ಹಸಿವನ್ನು ಕಡಿಮೆಗೊಳಿಸುವುದರಿಂದ ತೂಕ ಕಡಿಮೆಯಾಗಲು ನೆರವಾಗುತ್ತದೆ. ನೆನೆಸಿದ ಬಾದಾಮಿಯಲ್ಲಿ ಹೈ ಡೆನ್ಸಿಟಿ ಲೈ ಪ್ರೋಟೀನ್ ಹೆಚ್ಚಾಗಿರುತ್ತದೆ.ಇದರಿಂದ ಹೃದಯದ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.

ಬಾದಾಮಿಯಲ್ಲಿರುವ ವಿಟಮಿನ್ ಇ ಮೆಗ್ನೀಷಿಯಂ ಪೊಲೀಕ ಈ ಅಂಶಗಳಿಂದ ರಕ್ತನಾಳಗಳ ಅಡಚಣೆ ಮತ್ತು ಹೃದಯಾಘಾತವನ್ನು ತಡೆಯುವಲ್ಲಿ ಸಹಾಯಕಾರಿಯಾಗಿದೆ.

ಪ್ರ ತಿದಿನ ಖಾಲಿ ಹೊಟ್ಟೆಯಲ್ಲಿ 4, 5 ನೆನೆಸಿದ ಬಾದಾಮಿಯನ್ನು ನಿಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ

LEAVE A REPLY

Please enter your comment!
Please enter your name here