ಮೆಕ್ಕೆಜೋಳ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಟೈಮ್ ಪಾಸ್ ಗೆ ಅಥವಾ ಬಾಯಿರುಚಿಗೆ ಅಂತ ತಿನ್ನುವ ಮೆಕ್ಕೆಜೋಳದಲ್ಲಿ ಎಷ್ಟೆಲ್ಲಾ ಉಪಯೋಗಗಳಿವೆ ಗೊತ್ತಾ. ಮೆಕ್ಕೆಜೋಳದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವ ಕಾರ್ಬೋಹೈಡ್ರೇಟ್ ಗಳು  ನಾರಿನಂಶ ಹೆಚ್ಚಾಗಿದೆ. ಈ ಮೆಕ್ಕೆಜೋಳದಲ್ಲಿ ವಿಟಮಿನ್ ಬಿ ಕೆರೋಟಿನಾಡ್ಸ್ ಪ್ರೋಟೀನ್ ಗಳು ಜಿಂಕ್ ತಾಮ್ರ ಮತ್ತು ಕಬ್ಬಿಣ ಅಂಶಗಳು ಹೇರಳವಾಗಿದೆ.ಮೆಕ್ಕೆಜೋಳದ ಸೇವನೆಯಿಂದ ತತ್ತಕ್ಷಣ ಶಕ್ತಿ ದೊರೆಯುತ್ತದೆ ಮಧುಮೇಹದಿಂದ ಬಳಲುವವರಿಗೆ ಮೆಕ್ಕೆಜೋಳ ಒಂದು ಉತ್ತಮ ಆಹಾರ.

ಮೆಕ್ಕೆ ಜೋಳ ದಲ್ಲಿರುವ ಪ್ರೊಟೀನ್ ಗಳು ಗರ್ಭಿಣಿ ಮತ್ತು ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಅದಲ್ಲಿರುವ ಪಾಸ್ಪರಸ್ ಅಂಶವು ಮೂಳೆ ಗಳನ್ನು ಗಟ್ಟಿಯಾಗಿಸಿ ಮೂತ್ರಪಿಂಡದ  ಆರೋಗ್ಯವನ್ನು ಕಾಪಾಡುತ್ತದೆ, ಮತ್ತು ಶರೀರದ ಬೆಳವಣಿಗೆಗೆ ಲಾಭದಾಯಕವಾಗಿದೆ.

ಬಿಸಿಯಾದ ಮೆಕ್ಕೆಜೋಳವನ್ನು ತಿನ್ನುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಮೆಕ್ಕೆಜೋಳದಲ್ಲಿ ವಿಟಮಿನ್ ಎ ವಿಟಮಿನ್ ಇ ಮತ್ತು ಪೋಲಿಕ್ ಆಮ್ಲ ಗಳು ಹೆಚ್ಚಾಗಿದ್ದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ಬೇಯಿಸಿದ ಮೆಕ್ಕೆ ಜೋಳದ ಕಾಳನ್ನು ಸೇವಿಸುವುದರಿಂದ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ.

ಜೀರ್ಣಶಕ್ತಿ ಹೆಚ್ಚುತ್ತದೆ ಹೆಚ್ಚಾಗಿ ಮೆಕ್ಕೆ ಜೋಳವನ್ನು ತಿನ್ನುವುದರಿಂದ ನರಗಳು ಸದೃಢವಾಗುತ್ತದೆ.ದೇಹದಲ್ಲಿನ ಕೊಬ್ಬು ಕರಗುತ್ತದೆ.ಜೀರ್ಣ ಕ್ರಿಯೆ ಹೆಚ್ಚಾಗುತ್ತದೆ.

ಪ್ರತಿದಿನ ಮೆಕ್ಕೆ ಜೋಳವನ್ನು ತಿನ್ನುತ್ತಿದ್ದರೆ ರಕ್ತ ಹೀನತೆ ಕಡಿಮೆಯಾಗುತ್ತದೆ ಮತ್ತು ರಕ್ತ ವೃದ್ದಿಯಾಗುತ್ತದೆ.

ಮೆಕ್ಕೆಜೋಳದ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕ್ಯಾನ್ಸರ್ ಮತ್ತು ಹೃದಯದ ತೊಂದರೆಗಳನ್ನು ದೂರವಿಡುತ್ತದೆ.

LEAVE A REPLY

Please enter your comment!
Please enter your name here