ಕೈಗಳು ಕಾಲುಗಳು ಚೆನ್ನಾಗಿ ಕಾಣಲು ಉಗುರಿನ ಅಂದ ತುಂಬಾನೇ ಮುಖ್ಯವಾಗಿರುತ್ತದೆ. ಹುಡಿಗಿಯರಿಗೆ ಉದ್ದವಾದ ಉಗುರು ಬೆಳೆಸಿಕೊಳ್ಳುವುದು ತುಂಬಾನೇ ಇಷ್ಟವಾದ ಕೆಲಸ, ಯಾಕೆ ಅಂತ ಹೇಳುವುದಾದರೆ ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಣ್ಣದ ನೆಲ್ ಪಾಲಿಷ ಗಳನ್ನೂ ಹಚ್ಚಿಕೊಂಡು ತಮ್ಮ ಉಗುರುಗಳನ್ನು ಅಂದವಾಗಿಡಿಸುವುದು ಅಂದ್ರೆ ತುಂಬಾ ಇಷ್ಟ. ಆದರೆ ಈಗಿನ ಟ್ರೆಂಡ್ ಉದ್ದವಾದ ಉಗುರುಗಳನ್ನು ಬೆಳಸಿ ಅದಕ್ಕೆ ವಿಧ ವಿಧವಾದ ಬಣ್ಣಗಳನ್ನು ಮಿಶ್ರಣ ಮಾಡಿ ಹಚ್ಚಿಕೊಂಡು ಅದರ ಮೇಲೆ ಚಿತ್ತಾರವನ್ನು ಬಿಡಿಸಿಕೊಳ್ಳುವುದು ಈಗ ಚಾಲ್ತಿಯಲ್ಲಿದೆ. ಆಧುನಿಕ ಬದುಕಿನಲ್ಲಿ ಏನೆ ಮಾಡಿದರು ಒಂದು ರೀತಿಯ ಫ್ಯಾಷನ್. ಕೆಲವೊಮ್ಮೆ ಗಡಿಬಿಡಿಯ ಸಮಯದಲ್ಲಿ ಉಗುರು ಮುರಿದು ಬಿಡುವ ಸಂಭವ ಹೆಚ್ಚಿರುತ್ತದೆ. ಹೀಗೆ ಮುರಿದ ಉಗುರನ್ನು ಹೇಗೆ  ಬೆಳೆಸುವುದು ಅಂತಾ ವಿಚಾರ ಮಾಡತಾ ಇದ್ದೀರಾ ಯೋಚನೆ ಬೇಡ ನಾವು ಹೇಳುವ ಮನೆ ಮದ್ದುಗಳನ್ನು ಬಳಸಿ  ಮನೆಯಲ್ಲೇ ಆರೋಗ್ಯವಂತ ಮತ್ತು ಆಕರ್ಷಕ ಉಗುರುಗಳನ್ನು ನಿಮ್ಮದಾಗಿಸಿಕೊಳ್ಳಿ.

ಸೂರ್ಯಕಾಂತಿ ಎಣ್ಣೆ, ಕೊಬ್ಬರಿ ಎಣ್ಣೆ , ಅರಳೆಣ್ಣೆ , ಆಲಿವ್ ಆಯಿಲ್ , ನ್ಯಾಚುರಲ್ ಆಗಿ ಸಿಗುವ ಈ ಎಣ್ಣೆಗಳನ್ನು ಮಿಶ್ರಣ ಮಾಡಿ ಬಿಸಿ ಮಾಡಬೇಕು. ನಂತರ ಉಗುರುಗಳನ್ನು ಅದರಲ್ಲಿ 5 ನಿಮಿಷದವರೆಗೂ ಅದ್ದಬೇಕು, ನಂತರ ನೀರಿನಿಂದ ತೊಳೆಯಬೇಕು, ಸ್ವಚ್ಛವಾಗಿರುವ ಬಟ್ಟೆಯಿಂದ ಒಣಗಿಸಿಕೊಳ್ಳಬೇಕು.

ಒಂದು ಬಟ್ಟಲಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಬಿಸಿ ಮಾಡಿಕೊಳ್ಳಬೇಕು, ನಂತರ ಮುರಿದ ಉಗುರಿನ ಮೇಲೆ 10 ರಿಂದ 15 ನಿಮಿಷ ನಿಧಾನವಾಗಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಉಗುರಗಳ್ಳಲಿ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ. ದಿನಕ್ಕೆ 3 ರಿಂದ 4 ಬಾರಿ ಹೀಗೆ ಮಾಡಿಕೊಳ್ಳುವುದು ಉತ್ತಮ.

ತೇವಾಂಶದ ಕೊರತೆ ಇದ್ದರೆ ಉಗುರುಗಳು ಮುರಿದು ಬಿಳ್ಳುತ್ತವೆ. ಉಗುರಗಳು ಮುರಿಯದೆ ಅಂದವಾಗಿ ಬೆಳೆಯಬೇಕಾದರೆ ವಿಟಮಿನ್ ಇ ಕ್ಯಾಪಸೋಲ್ಗಳನ್ನು ತೆಗೆದುಕೊಂಡು ಅದರಲ್ಲಿರುವ ಎಣ್ಣೆಯನ್ನು ತೆಗೆದುಕೊಂಡು ಉಗುರುಗಳ ಮೇಲೆ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಬೇಕು, ಹೀಗೆ 2 ರಿಂದ 3 ದಿನ ಮಸಾಜ್ ಮಾಡುವುದರಿಂದ ಉಗುರುಗಳು ಚೆನ್ನಾಗಿ ಬೆಳೆಯುತ್ತವೆ.

ಮನೆಯಲ್ಲಿರುವ ಟೊಮೇಟೊ ಹಣ್ಣಿಂದ ಉಗುರನ್ನು ಚೆನ್ನಾಗಿ ಬೆಳಿಸಿಕೊಳ್ಳಬಹುದು. ಲೆಕೊಪಿನ್ ಮತ್ತು ಬಯುಟಿನ್ ಎಂಬ ಅಂಶವು ಹೇರಳವಾಗಿರುತ್ತದೆ. ಇದರಿಂದ ಉಗುರು ಚೆನ್ನಾಗಿ ಬೆಳೆಸಲು ಸಹಕಾರಿಯಾಗುತ್ತದೆ. ಪಕ್ವವಾಗಿರುವ ಟೊಮೇಟೊ ಹಣ್ಣನು ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ಹಾಕಿ ನೀರನ್ನು ಬೆರಸದೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು, ನಂತರ ರುಬ್ಬಿದ ಮಿಶ್ರಣವನ್ನು ಒಂದು ಬಟ್ಟಲಿಗೆ ತೆಗೆದು ಅದಕ್ಕೆ ಆಲಿವ್ ಆಯಿಲ್ ಅನ್ನು ಹಾಕಿಕೊಳ್ಳಬೇಕು, ನಂತರ ಕೈ ಬೆರಳುಗಳನ್ನು ಅದರಲ್ಲಿ 15 ನಿಮಿಷಗಳ ಕಾಲ ನೆನಿಸಬೇಕು, ನಂತರ ತಣ್ಣೀರಿನಿಂದ ತೊಳಿಯಬೇಕು.

ವ್ಯಾಸಲಿನ್ ಬಳಸುವುದರಿಂದ ಉಗುರು ಉದುರುವ ಸಮಸ್ಯೆಯನ್ನ ಕಡಿಮೆ ಗೊಳಿಸಬಹುದು. ದಿನದಲ್ಲಿ 3 ರಿಂದ 4 ಬಾರಿ ವ್ಯಾಸಲಿನ್ ಹಚ್ಚಿ ಮಸಾಜ್ ಮಾಡಬೇಕು, ಇದರಿಂದ ಉಗುರು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಅರ್ಧ ಕಪ್ ಬಿಯರ್ ಗೆ ಸ್ವಲ್ಪ ಆಲಿವ್ ಆಯಿಲ್ ಅನ್ನು ಬಿಸಿ ಮಾಡಿಕೊಳ್ಳಬೇಕು ಹಾಗೆ ಸ್ವಲ್ಪ ವಿನೆಗರ್ ಹಾಕಿ, 10 ನಿಮಿಷ ಉಗುರನ್ನು ಅದರಲ್ಲಿ ಇಡಬೇಕು ನಂತರ ನೀರಿನಲ್ಲಿ ತೊಳಿಯಬೇಕು.

ಎರಡು ಚಮಚ ಉಪ್ಪಿಗೆ ನಿಂಬೆ ಹಣ್ಣಿನ ರಸವನ್ನು 2 ಅಥವಾ 3 ಹನಿ ಹಾಕಿ ಕೊಳ್ಳಬೇಕು, ಸ್ವಲ್ಪ ಆಲಿವ್ ಆಯಿಲ್ ಹಾಕಿಕೊಂಡು ಬೆಚ್ಚಗಿರುವ ನೀರಿಗೆ ಇದನ್ನು ಸೇರಿಸಿಕೊಳ್ಳಬೇಕು, 15 ರಿಂದ 20 ನಿಮಿಷ ಉಗುರನ್ನು ಈ ನೀರಿನಲ್ಲಿ ಉಗುರುಗಳನ್ನು ಇಡಬೇಕು. ಹೀಗೆ ವಾರದಲ್ಲಿ ೩ ರಿಂದ ೪ ದಿನ ಮಾಡಿದರೆ ಉಗುರು ಸೊಂಪಾಗಿ ಬೆಳೆಯುತ್ತದೆ ಜೊತೆಗೆ ಉಗುರು ಉದುರುವುದಿಲ್ಲ.

ಒಳ್ಳೆಯ ನೈಲ್ ಪಾಲಿಶ್ ಗಳನ್ನೂ ಹಚ್ಚಿಕೊಳ್ಳಬೇಕು, ಒಂದು ಸಾರಿ ಹಚ್ಚಿದ ಬಣ್ಣದ ಮೇಲೆ ಮತ್ತೆ ಇನ್ನೊಮ್ಮೆ ಹಚ್ಚಿಕೊಂಡರೆ ಉಗುರಿನ ಹೊಳಪು ಕಡಿಮೆ ಆಗುತ್ತದೆ.

LEAVE A REPLY

Please enter your comment!
Please enter your name here