ಹೆಚ್ಚು ನೀರು ಮತ್ತು ನಾರಿನಿಂದ ಕೂಡಿರುವ ಹೀರೇಕಾಯಿ ಒಂದು  ಪೌಷ್ಟಿಕ ತರಕಾರಿ. ಅಷ್ಟೇ ಅಲ್ಲದೆ ಅನೇಕ ಔಷಧಿ ಗುಣಗಳನ್ನು ಹೊಂದಿದೆ. ಇದರ ಸೇವನೆಯಿಂದ ಮಲಬದ್ಧತೆ ಜೀರ್ಣ ಸಂಬಂಧಿ ಕಾಯಿಲೆಗಳು ಮೂಲವ್ಯಾದಿ ಇವುಗಳಿಂದ ದೂರವಿರಬಹುದು ಹೀರೆಕಾಯಿ ಇದರ ಹೆಸರು ಕೇಳಿದರೇನೇ ಮುಖ ಸಿಂಡರಿಸುವ ಜನರಿಗೆ ಇದರ ಉಪಯೋಗಗಳು ತಿಳಿದರೆ ಖಂಡಿತ ತಿನ್ನಲು ಶುರು ಮಾಡ್ತಾರೆ.

ಹೀರೆಕಾಯಿ ಯಲ್ಲಿರುವ ವಿಟಮಿನ್ ಎ ಮತ್ತು ಬೀಟಾ ಕೆರೋಟಿನ್ ಅಂಶವು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದರಲ್ಲಿ ಅಲ್ಕಲಾಯ್ಡ್ಸ್ ಎಂಬ ಅಂಶವಿದ್ದು ಅದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ಮೊಡವೆ ಗಳನ್ನು ನಿವಾರಿಸಿ ಚರ್ಮದ ತೊಂದರೆಯಿಂದ ದೂರವಿರಲು ಹೀರೇಕಾಯಿ ಯ ಸೇವನೆ ಪ್ರಯೋಜನಕಾರಿ.

ರಕ್ತವನ್ನು ಶುದ್ಧೀಕರಿಸಿ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ.

ಹೀರೆ ಕಾಯಿಯ ಜ್ಯೂಸ್ ಸೇವಿಸುವುದರಿಂದ ಜಾಂಡಿಸ್ ನಿವಾರಣೆಯಾಗುತ್ತದೆ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹೀರೆಕಾಯಿಯಲ್ಲಿ ಅಧಿಕ ನೀರು ಮತ್ತು ನಾರಿನಂಶ ಇರುವುದರಿಂದ ಮೂಲವ್ಯಾಧಿ ಮತ್ತು ಮಲಬದ್ಧತೆಯ ಸಮಸ್ಯೆಯಿಂದ ದೂರವಿರಬಹುದು.

ಅತ್ಯಧಿಕ ಫೈಬರ್ ವಿಟಮಿನ್ ಸಿ ಜಿಂಕ್ ಐರನ್ ಮೆಗ್ನೀಷಿಯಂ ಹೀಗೆ ಇನ್ನೂ ಅನೇಕ ವಿಟಮಿನ್ ಮತ್ತು ಮಿನರಲ್ ಗಳನ್ನು ಹೊಂದಿದೆ.

LEAVE A REPLY

Please enter your comment!
Please enter your name here