ಸೀಸನ್ ಗೆ ತಕ್ಕಂತೆ ಎಲ್ಲ ಹಣ್ಣುಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಸಿಗುವ ವಿಟಮಿನ್ಸ್, ಪ್ರೋಟೀನ್ಸ್ , ಮಿನರಲ್ಸ್, ಸಿಗುತ್ತವೆ. ಸಾಮಾನ್ಯವಾಗಿ ಎಲ್ಲ ಕಡೆ ಕಡಿಮೆ ಬೆಲೆಯಲ್ಲಿ ಸಿಗುವಂತಹ ಹಣ್ಣು ಎಂದರೆ ಬಾಳೆಹಣ್ಣು. ಬೇರೆ ಹಣ್ಣುಗಳಿಗೆ ಹೋಲಿಸಿದರೆ ಬಾಳೆಹಣ್ಣಿನಲ್ಲಿ ಎರಡು ಪಟ್ಟು ಪ್ರೋಟೀನ್ಸ್ ಇರುತ್ತದೆ. ವಿಟಮಿನ್ ಎ ಇನ್ನು ಹಲವಾರು ಖನಿಜಾಂಶಗಳನ್ನು ಇದು ಹೊಂದಿರುತ್ತದೆ. ಕೈಗೆ ಎಟಕದ ಬೆಲೆಯಲ್ಲಿ ಸಿಗದ ಹಣ್ಣುಗಳನ್ನು ತಿನ್ನುವುದಕ್ಕಿಂತ ಕೈಗೆ ಎಟುಕುವ ಬೆಲೆಯಲ್ಲಿ ಸಿಗುವ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಶಕ್ತಿ ಸಿಗುತ್ತದೆ. ಬಾಳೆಹಣ್ಣಿನಲ್ಲಿ ಹಲವಾರುಹೆಸರುಗಳನ್ನೂ  ಹೊಂದಿವೆ. ಏಲಕ್ಕಿ ಬಾಳೆಹಣ್ಣು, ಪಚ್ಚಿ ಬಾಳೆಹಣ್ಣು, ಕೆಂಪು ಮೂತಿಯ ಬಾಳೆಹಣ್ಣು ಹೀಗೆ ಹಲವು ಬಗೆಯ ಬಾಳೆಹಣ್ಣನ್ನು ನೀವು ಎಲ್ಲ ಕಡೆಯಲ್ಲೂ ನೋಡಿರ್ತೀರ. ಮನೆಯಲ್ಲಿ ಸೇಬು , ಸಪೋಟ ,ಇನ್ನು ಮಿಕ್ಕಿದ ಹಣ್ಣುಗಳು ಮನೆಯಲ್ಲಿ ಇಲ್ಲ ಅಂದರು ಬಾಳೆಹಣ್ಣನ್ನು ಮನೆಯಲ್ಲಿ ಇರುತ್ತೆ. ಯಾವದೇ ಹಬ್ಬವಿರಲಿ ಅದರಲ್ಲಿ ಮೊದಲು ಆದ್ಯತೆ ಬಾಳೆಹಣ್ಣಿಗೆ ಇರುತ್ತೆ. ಬಾಳೆಗಿಡದ ಪ್ರತಿಯೊಂದು ಭಾಗದಲ್ಲಿ ಒಂದೊಂದು ರೀತಿಯ ಪ್ರಯೋಜನಗಳಿವೆ. ಬಾಳೆಗಿಡದ ಹೂವು , ದಿಂಡು, ಕಾಯಿಯನ್ನು ಕೊಡ ತರಕಾರಿಯಂತೆ ನಿತ್ಯದಲ್ಲೂ ಬಳಸಬಹುದು. ಸರ್ವ ವೃತಗಳಲ್ಲೂ ಸಿಗುಬಹುದಾದ ಬಾಳೆಹಣ್ಣಿನ ಉಪಯೋಗ ಇನ್ನಷ್ಟು ತಿಳಿಯ ಬೇಕಾದರೆ ನೀವು ಲೇಖನ ಓದಿ …

ದೊಡ್ಡ ಬಾಳೆಹಣ್ಣು ಅಥವಾ ಪಚ್ಚೆ ಬಾಳೆಹಣ್ಣುನ್ನು ಹಸಿವೆ ಆದಾಗ ತಿಂದರೆ ಹೊಟ್ಟೆ ತುಂಬುತ್ತದೆ, ಇದರಿಂದ ಯಾವದೇ ಕೆಲಸವನ್ನು ಸುಲಭವಾಗಿ ಮಾಡಬಹುದು. ದುಡಿಯಲು ಬೇಕಾದಷ್ಟು ಶಕ್ತಿಯನ್ನು ಇದು ದೇಹಕ್ಕೆ ಒದಗಿಸುತ್ತದೆ.

ಸುಕ್ರೋಸ್, ಗ್ಲೋಕೋಸ್ , ಪ್ರುಕ್ಟೊಸ್ ಎಂಬ 3 ಅಂಶಗಳನ್ನು ಇದು ಹೊಂದಿರುತ್ತದೆ. ಇದರಲ್ಲಿ ನಾರಿನ ಅಂಶ ಹೆಚ್ಚಾಗಿರುತ್ತದೆ, ದೇಹಕ್ಕೆ ಹೆಚ್ಚಾಗಿ ಶಕ್ತಿ ಬರಬೇಕಾದರೆ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸಬೇಕು.

ರಕ್ತ ಹೀನತೆಯನ್ನು ದೂರ ಮಾಡಲು ಬಾಳೆಹಣ್ಣನ್ನು ಹೆಚ್ಚಾಗಿ ತಿನ್ನಬೇಕು. ಇದರಲ್ಲಿ ಕಬ್ಬಿಣ ಅಂಶ ಅಧಿಕವಾಗಿರುತ್ತದೆ. ಇದರಲ್ಲಿ b6 ವಿಟಮಿನ್ ಹೆಚ್ಚಾಗಿರುವ ಕಾರಣ ಇದು ದೇಹದಲ್ಲಿ ಗ್ಲೋಕಸ್ ಮಟ್ಟವನ್ನು ಸರಿ ಪ್ರಮಾಣದಲ್ಲಿ ನಿಯಂತ್ರಿಸುತ್ತದೆ.

ಸೊಳ್ಳೆ ಕಚ್ಚಿದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ತಿಕ್ಕಬೇಕು ಇದರಿಂದ ಕಚ್ಚಿದ ಭಾಗದಲ್ಲಿರುವ ಬಾವು ಮತ್ತು ತುರಿಕೆ ಕಡಿಮೆಯಾಗುತ್ತದೆ.

ಮಲಬದ್ದತೆ ಆದಾಗ ಮಾತ್ರೆಗಳನ್ನು ಕೊಡುವ ಮೊದಲಿಗೆ ಬಾಳೆಹಣ್ಣನ್ನು ಕೊಡಬಹದು ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

ಗ್ಯಾಸ್ಟ್ರಿಕ್, ಅಸಿಡಿಟಿ , ಅಥವಾ ಎದೆಯಲ್ಲಿ ಹುಳಿ ತೇಗು ತುಂಬಾ ಬರುತ್ತಿದ್ದರೆ ಹಂತವರು ಬಾಳೆಹಣ್ಣನ್ನು ಹೆಚ್ಚಾಗಿ ಉಪಯೋಗಿಸಬೇಕು.

ಬ್ಲಡ್ ಫ್ರೆಷೆರ್ ಇದ್ದವರು ಬಾಳೆಹಣ್ಣಿನ ಸೇವನೆ ಮಾಡಬಹುದು ಇದರಲ್ಲಿ ಪೋಟ್ಯಾಷಿಯುಮ್ ಹೆಚ್ಚಾಗಿದ್ದು ಲವನಾಂಶ ಕಡಿಮೆ ಇರುತ್ತದೆ.

ಮಗುವಿಗೆ 5 ನೇ ತಿಂಗಳಿಂದ ಬಾಳೆಹಣ್ಣನ್ನು ತಿನ್ನಿಸುವುದರಿಂದ ಮಗುವಿಗೆ ಅಜೀರ್ಣ ಕ್ರಿಯೆಯ ಸಮಸ್ಯೆ ಆಗುವುದಿಲ್ಲ. ಅವರ ಬೆಳವಣಿಗೆ ಕೂಡ ಚೆನ್ನಾಗಿ ಆಗುತ್ತದೆ.

ದಿನಕ್ಕೆ ಒಂದು ಬಾಳೆಹಣ್ಣನ್ನು ಬೇಸಿಗೆಯಲ್ಲಿ ತಿನ್ನುವುದರಿಂದ ದೇಹವು ತಂಪಾಗಿರುತ್ತದೆ. ಇದರಲ್ಲಿ ಮಾಡುವ ಚಿಪ್ಸಗಳು ತಿನ್ನಲು ತುಂಬಾನೇ ರುಚಿಯಾಗಿರುತ್ತದೆ.

LEAVE A REPLY

Please enter your comment!
Please enter your name here