ಸಂಪ್ರದಾಯಿಕ ಅಡಿಗೆಗಳಲ್ಲಿ ಹಾಲುಬಾಯಿಯು ಹಿಂದಿನ ದಿನಗಳಲ್ಲಿ ಹೆಚ್ಚಾಗಿ ಮಾಡುತ್ತಿದ್ದ ಸಿಹಿ ತಿಂಡಿಗಳಲ್ಲಿ ಇದು ಒಂದು.  ಈಗಲೂ ಕೆಲವೊಬ್ಬರ ಮನೆಗಳಲ್ಲಿ ಇದನ್ನು ಮಾಡುವುದುಂಟು. ಇದರಲ್ಲಿ ಯಾವುದೇ ರೀತಿಯ ಕೆಟ್ಟ ಕೊಬ್ಬು ಮತ್ತು ಜಿಡ್ಡಿನಂಶ ಇರುವುದಿಲ್ಲ  ಹಾಗಾಗಿ ಇದನ್ನು ಯಾರು ಬೇಕಾದರೂ ಸೇವಿಸಬಹುದು. ಮಾಡಲು ಸುಲಭವಾದ ಈ ಹಾಲುಬಾಯಿ ಮಾಡೋದು ಹೇಗೆ ಅಂತ ಗೊತ್ತ…

ಅಕ್ಕಿ 3 ಕಪ್

ಬೆಲ್ಲ 1 ಕಪ್

ತೆಂಗಿನ ತುರಿ 2 ಕಪ್

ಗೋಡಂಬಿ ಪುಡಿ ಎರಡು ಸ್ಪೂನ್

ಏಲಕ್ಕಿ ಪುಡಿ

ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಒಂದು ಗಂಟೆ ನೆನೆಸಬೇಕು. ಒಂದು ಗಂಟೆಯ ನಂತರ ಅಕ್ಕಿಯ ನೀರನ್ನು ಬಸಿದು ಬಿಡಿ.

ಮಿಕ್ಸಿ ಜಾರಿಗೆ ಅಕ್ಕಿ ಕಾಯಿತುರಿ ಬೆಲ್ಲ ಹಾಕಿ ರುಬ್ಬಿಕೊಳ್ಳಿ ಈ ಮಿಶ್ರಣವು ದೋಸೆ ಹಿಟ್ಟಿನಂತೆ ಇರಬೇಕು.

ದಪ್ಪ ತಳದ ಬಾಣಲೆಗೆ ರುಬ್ಬಿದ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಸ್ವಲ್ಪ ಸಮಯದ ನಂತರ ಹಿಟ್ಟು ಗಟ್ಟಿಯಾಗುತ್ತಾ ಬರುತ್ತದೆ.

ಈಗ ಏಲಕ್ಕಿ ಪುಡಿ ಮತ್ತು ಗೋಡಂಬಿ ಪುಡಿಯನ್ನು ಬೆರೆಸಿ ಕೈಯಾಡಿಸಿ ಹಿಟ್ಟು ಗಟ್ಟಿಯಾದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ.

ತೆಂಗಿನ ತುರಿ ಮತ್ತು ಬೆಲ್ಲ ಎರೆಡು ಆರೋಗ್ಯಕ್ಕೆ ಒಳ್ಳೆಯ ಆಹಾರ ಮೃದುವಾಗಿರುವಾ ರುಚಿಯಾದ ಹಾಲುಬಾಯಿ ಮಕ್ಕಳಿಗೂ  ಮತ್ತು  ವೃದ್ಧರಿಗೂ ಒಳ್ಳೆಯ ಆಹಾರ.

ಹಾಲ್ಬಾಯಿಯನ್ನು ಅಕ್ಕಿ ಅಷ್ಟೇ ಅಲ್ಲದೆ ರಾಗಿ ಮತ್ತು ಗೋದಿ ಹಿಟ್ಟಿನಿಂದಲೂ ತಯಾರಿಸಬಹುದು.

LEAVE A REPLY

Please enter your comment!
Please enter your name here