ಬೇಸಿಗೆ ಇರಲಿ ಇಲ್ಲದೆ ಇರಲಿ ಸದಾ ಸಿಗುವ ಪಾನೀಯ ಅಂದರೆ ಈ ಎಳೆನೀರು. ಹೊಟ್ಟೆ ಹಸಿವೆ ಆದಾಗ ಒಂದು ಎಳೆನೀರ ಕುಡಿದರೆ ಹೊಟ್ಟೆ ತುಂಬಿಬಿಡುತ್ತದೆ.ಇನ್ನು ಬೇಸಿಗೆ ಬಂದರೆ ಸಾಕು ಕಣ್ಣು ಎಷ್ಟು ದೂರ ಅಡಿಸಿದರು ಕಾಣುವುದು ಎಳೆನೀರು ಕಾಣಿಸುವುದು ಸಹಜ. ಬೇಸಿಗೆಯ ಕಾಲದಲ್ಲಿ ಎಳೆನೀರಿಗೆ ನಾವು ತುಂಬಾ ಮಹತ್ವ ನೀಡುತ್ತೆವೆ. ಸಾಮನ್ಯವಾಗಿ ನೀವೆಲ್ಲರೂ ಕೇಳಿರುವ ಹಾಗೆ ಹಳ್ಳಿಯ ಜೋಗೊಳದ ಪದಗಳಲ್ಲಿ ಎಳೆನೀರಿನ ಬಗ್ಗೆ ಹಾಡುವುದನ್ನು ನೀವು ಗಮನಿಸಿರುತ್ತಿರಾ. ಇಷ್ಟೇ ಅಲ್ಲದೆ ಹಲವಾರು ರೀತಿಯಲ್ಲಿ ಎಳೆನೀರು ಉಪಯೋಗಿ ಆಗಿದೆ. ಅದು ಏನು ಅಂತ ತಿಳಿಬೇಕಾದರೆ ಈ ಲೇಖನ ಓದಿ…

ಒಂದು ಹೊತ್ತಿನ ಊಟ ಮಾಡುವುದನ್ನು ಬಿಟ್ಟು ಎಳೆನೀರನ್ನು ಕುಡಿದರೆ ಹೆಚ್ಚು ಆರೋಗ್ಯ ವಾಗಿರಬಹುದು. ಜ್ವರ ಬಂದು ದೇಹ ನಿಶಕ್ತನಕ್ಕೆ ಒಳಗಾಗಿದ್ದರೆ ಎಳೆನೀರನ್ನು ಕುಡಿಯಲು ಕೊಟ್ಟರೆ ದೇಹವು ಶಕ್ತಿ ಹೆಚ್ಚುತ್ತದೆ.

ಪೋಸ್ಟಿಕಾಂಶದ ಕೊರತೆ ಇದ್ದರೆ ನಿತ್ಯವೂ ಉಪಯೋಗಿಸಿ ಎಳೆನೀರನ್ನು. ದೇಹದಲ್ಲಿ ಡಿಹೈಡ್ರಷನ್ ನ ತೊಂದರೆ ಆದಾಗ ನೀರಿನ ಅಂಶ ಕಡಿಮೆಯಾಗುತ್ತದೆ. ಅಂತಹ ಸಮಯದಲ್ಲಿ ಎಳೆನೀರನ್ನು ಕೊಟ್ಟರೆ ದೇಹವು ಸಹಜ ಸ್ಥಿತಿಗೆ ಬರುತ್ತದೆ.

ಹೊಟ್ಟೆಯಲ್ಲಿ ಜಂತು ಹುಳು ಇದ್ದರೆ ಎಳೆನೀರನ್ನು ಕುಡಿಸಬೇಕು ಇದರಿಂದ ಹುಳು ನಿವಾರಣೆಗೊಂಡು ಹೊಟ್ಟೆ ನೋವು ಕಡಿಮೆ ಆಗುತ್ತದೆ. ಎದೆ ಹಾಲು ಕುಡಿಯುವ ಮಕ್ಕಳಿಗೆ ನೀರಿನ ಬದಲು ಎಳೆನೀರನ್ನು ಮಿತವಾಗಿ ನೀಡಿದರೆ ಮಗುವಿಗೆ ಹೊಟ್ಟೆ ನೋವು ಮತ್ತು ಅಜೀರ್ಣ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತದೆ.

ಕಿಡ್ನಿಯಲ್ಲಿ ಹರಳುಗಳು ಆಗಿದ್ದರೆ ಸಾಧ್ಯವಾದಷ್ಟು ಎಳೆನೀರನ್ನು ಕುಡಿಯಬೇಕು ಇದರಿಂದ ಮೂತ್ರದಲ್ಲಿ ಹರಳುಗಳು ಹೋಗಲು ಇದು ಸಹಕರಿಸುತ್ತದೆ. ಉರಿ ಮೂತ್ರದ ಸಮಸ್ಯೆ ಇದ್ದರೆ ನಿತ್ಯದಲ್ಲೂ ಎಳೆನೀರು ಕುಡಿಯಬೇಕು ಇದರಿಂದ ಮೂತ್ರದ ಸಮಸ್ಯೆ ಕಡಿಮೆಯಾಗುತ್ತ ಬರುತ್ತದೆ.

ಏನು ಖಾಯಿಲೆ ಇಲ್ಲದವರು ನಿತ್ಯದಲ್ಲೂ ಎಳೆನೀರನ್ನು ಸೇವಿಸುತ್ತಾ ಇರಬೇಕು ಇದರಿಂದ ದೇಹಕ್ಕೆ ಶಕ್ತಿ ಮತ್ತು ದೇಹ ಸದೃಢ ಗೊಳ್ಳುತ್ತದೆ. ದೇಹವನ್ನು ತಂಪಾಗಿಸುತ್ತದೆ. ಆರೋಗ್ಯವಾಗಿರಲು ಇದು ತುಂಬಾನೇ ಸಹಕಾರಿ.

ಎಳೆನೀರಿನ ಜೊತೆ ಜೇನುತುಪ್ಪ ಬೆರಿಸಿ ಕುಡಿದರೆ ಬೇಗನೆ ವಯಸ್ಸು ಆಗದಂತೆ  ನೋಡಿಕೊಳ್ಳುತ್ತದೆ. ನಿತ್ಯದಲ್ಲೂ ಎಳೆನೀರಿನೊಂದಿಗೆ ಜೇನುವನ್ನು ಮಿಶ್ರಣ ಮಾಡಿ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚಿಸಿ, ದೇಹಕ್ಕೆ ಶಕ್ತಿ ಮತ್ತು ಜೀರ್ಣ ಕ್ರಿಯೆಯನ್ನು ಉತ್ತಮ ಗೊಳಿಸುತ್ತದೆ. ಮತ್ತು ಕಿಡ್ನಿಯಲ್ಲಿ ಕಲ್ಲು ಅಗದಂತೆ  ತಡೆಯುತ್ತೆ. ಹಾಗೆ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಸಕ್ಕರೆ ಖಾಯಿಲೆ ಬರದಂತೆ  ತಡೆಹಿಡಿಯುತ್ತದೆ.

LEAVE A REPLY

Please enter your comment!
Please enter your name here