ಈಗಿನ ಆಹಾರದ ಕ್ರಮ ಅಥವಾ ಪದ್ದತಿಗಳು ಯಾವದು ಸರಿ ಇಲ್ಲ. ಮುಂಜಾನೆಯ ಗಡಿಬಿಡಿ ಇರಬಹುದು. ಫಾಸ್ಟ್ ಲೈಫ್ ತರ ಫಾಸ್ಟ್ ಫುಡ್ ಇತ್ತೀಚಿನ ಜೀವನಕ್ಕೆ ಅಂಟಿಕೊಂಡುಬಿಟ್ಟಿದೆ. ಹೇಗೆಲ್ಲಾ ಆತುರದ ಊಟ ಹೊಟ್ಟೆಗೆ ಹೋಗುತ್ತೋ  ಹಾಗೆ ದೇಹವು ಅನಾರೋಗ್ಯಕ್ಕೆ ತುತ್ತಾಗುತ್ತಿದೆ.  ಭಾರತ ದೇಶದಲ್ಲಿ ಹಿಂದಿನ ಕಾಲದಿಂದಲ್ಲೂ ಕಾಳುಗಳನ್ನು ಬೆಳೆಯುತ್ತಾರೆ. ಆದರೆ ಯಾವ ಕಾಳುಗಳನ್ನ ತಿಂದರೆ ದೇಹಕ್ಕೆ ಎಷ್ಟು ಪ್ರೋಟೀನ್ಸ್ ದೊರೆಯುತ್ತವೆ ಎಂಬುದು ನಿಮಗೆ ಅರಿಯದ ವಿಷಯ. ಹುರುಳಿಕಾಳು ಆಗ್ನೇಯ ಏಷಿಯಾದ ಉಪಖಂಡ ಹಾಗೂ ಉಷ್ಣವಲಯವಾದ ಆಫ್ರಿಕಾದ ಸ್ಥಳೀಯ ಬೆಳೆಯಾಗಿದೆ. ಇದು ಕೇವಲ ಕಿಡ್ನಿ ಕಲ್ಲು ಕರಗಿಸುವ ಶಕ್ತಿ ಹೊಂದಿರದೆ ಇನ್ನು ಹಲವಾರು ರೀತಿಯಲ್ಲಿ ಇದು ದೇಹಕ್ಕೆ ಅನೇಕ ರೀತಿಯ ಉಪಯೋಗ ನೀಡುತ್ತದೆ. ಹಾಗಿದ್ರೆ ಏನು ಈ ದ್ವಿದಳ ಕಾಳಿನ ಉಪಯೋಗ ಅಂತ ಇಲ್ಲಿ ಓದಿ ತಿಳಿದಿಕೊಳ್ಳಿ.

ಮಲಗುವ ಮುಂಚೆ ಹುರಳಿ ಕಾಳನ್ನು ನೆನಿಸಿ ಇಡಬೇಕು, ಬೆಳಿಗ್ಗೆ ಎದ್ದು ಅದನ್ನು ಬೇಯಿಸಿಕೊಂಡು ತಿನ್ನಬೇಕು. ಇದರಿಂದ ಕಿಡ್ನಿಯಲ್ಲಿರುವ ಹರಳುಗಳು ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ. ಇನ್ನು ಯಾವದೇ ಮೆಡಿಸಿನ್ ಕೊಟ್ಟರು ಕೆಮ್ಮು ಕಡಿಮೆ ನೆ ಆಗಿಲ್ಲ ಅಂತ ತಲೆ ಕೆಡಿಸ್ಕೊಬೇಡಿ. ಹುರಳಿ ಕಾಳಿನ ಸೋಪ್ ಮಾಡಿ ಕುಡಿಯಿರಿ ಇದರಿಂದ ಕೆಮ್ಮು ಕಫ ಬೇಗ ಕಡಿಮೆ ಆಗುತ್ತದೆ.

ತೂಕ ಇಳಿಸಲು ಪ್ರಯತ್ನ ಮಾಡುವರು, ಹುರಳಿ ಕಾಳನ್ನು ರಾತ್ರಿ ನೀರಿನಲ್ಲಿ ನೆನಸಬೇಕು. ಬೆಳಿಗ್ಗೆ ಅದನ್ನು ಚೆನ್ನಾಗಿ ಬೇಯಿಸಿಕೊಂಡು ಅದಕ್ಕೆ ಸೈಧವ ಲವಣ, ಕರಿ ಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿಕೊಂಡು ಬೆಳಗಿನ ಟಿಫಿನ್ ಸಮಯಕ್ಕೆ ತೆಗೆದು ಕೊಂಡರೆ ತೂಕ ಮತ್ತು ಬೊಜ್ಜು ಕಡಿಮೆ ಆಗುತ್ತಾ ಬರುತ್ತದೆ.

ಪ್ರತಿದಿನ ಹುರಳಿ ಕಾಳಿನ ಸೋಪ್ ಅಥವಾ ಸಲಾಡ್ ಸೇವನೆ ಮಾಡುತ್ತ ಬಂದರೆ ತಿಂಗಳದ ಋತು ಸ್ರಾವ ಸರಿಯಾಗಿ ಆಗುತ್ತದೆ. ಮತ್ತು  ಬಿಕ್ಕಳಿಗೆ ಹೆಚ್ಚಾಗಿ ಬಂದರೆ ಹುರಳಿ ಕಾಳನ್ನು ಸುಟ್ಟು ಅದರ ಹೊಗೆಯನ್ನು ಬಾಯಿಂದ ತೆಗೆದು ಕೊಳ್ಳಬೇಕು ಇದರಿಂದ ಬಿಕ್ಕಳಿಕೆ ಕಡಿಮೆ ಆಗುತ್ತಾ ಬರುತ್ತೆ.

ನೋವಿರುವ ಜಾಗದಲ್ಲಿ ಅಥವಾ ಸಂಧಿವತಗಳಿರುವ ಜಾಗಕ್ಕೆ ಹುರಳಿ ಕಾಳಿನ ಪೇಸ್ಟ್ ಮಾಡಿ ಹಚ್ಚಿದರೆ ಬೇಗ ಊತ, ನೋವು ಶಮನಗೊಳ್ಳುತ್ತದೆ.  ಬಿಳಿ ಸ್ರಾವ ಅಥವಾ ಬಿಳಿ ಮುಟ್ಟು ಹೆಚ್ಚಾಗಿ ಆಗುತ್ತಿದರೆ, ಹುರಳಿ ಕಾಳನ್ನು ರಾತ್ರಿ ನೆನಿಸಿ ಮರುದಿನ ಆ ನೀರನ್ನು3 ಬಾರಿ ಕುಡಿದರೆ ಬಿಳಿಸ್ರಾವ ಕಡಿಮೆ ಆಗುತ್ತಾ ಬರುತ್ತೆ.

ಮಲವಿಸರ್ಜನೆಯ ಸಮಸ್ಯೆ ಇದ್ದರೆ ರಾತ್ರಿ ನೀರಿನಲ್ಲಿ ಹುರಳಿ ಕಾಳನ್ನು ನೆನಿಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬೇಯಿಸಿದೆ ಹಾಗೆ ಸೇವಿಸುತ್ತಾ ಬಂದರೆ ಮಲವಿಸರ್ಜನೆ ಸುಲಭವಾಗುತ್ತದೆ. ದೇಹದಲ್ಲಿರುವ ಬೇಡದಿರುವ ಕೊಬ್ಬನ್ನು ಕರಗಿಸಲು ನಿತ್ಯವು ಹುರಳಿ ಕಾಳನ್ನು ದಿನ್ನಕೇ2 ಬಾರಿ ಖಾಲಿ ಹೊಟ್ಟೆಗೆ ಸೇವಿಸಬೇಕು ಇದರಿಂದ ಕೊಬ್ಬು ಬೇಗ ಕಡಿಮೆ ಆಗುತ್ತಾ ಬರುತ್ತದೆ.

LEAVE A REPLY

Please enter your comment!
Please enter your name here