ಮನುಷ್ಯನ ದೇಹದಲ್ಲಿ ಯಾವದೇ ಒಂದು ಅಂಗ ಊನವಾದ್ರೂ ಬದುಕಲು ಬೇಸರ ಅನಿಸುವುದು ಸಹಜ. ನಮಗೆ ಬದುಕಲು ನೀರು,ಗಾಳಿ, ಆಹಾರ, ಎಷ್ಟು ಮುಖ್ಯವು. ಹಾಗೆ ದೇಹವು ಆರೋಗ್ಯದಿಂದುರುವುದು ಅಷ್ಟೇ ಮುಖ್ಯ. ಪಂಚದ್ರೆಯಗಳು ಅತಿ ಮುಖ್ಯವಾದವು. ಎಷ್ಟೇ ತೋರಸಿದ್ರು ಕಿವಿಯ ಸಮಸ್ಯೆ ದೂರ ಆಗತಾ ಇಲ್ಲ ಅನ್ನೂರು ಎಕ್ಕಿ ಗಿಡದ ಉಪಯೋಗ ಪಡೆಯಿರಿ. ಈ ಗಿಡವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರ್ತೀವಿ. ನಿಮ್ಮ ಸುತ್ತಮುತ್ತ ಪರಿಸರದಲ್ಲಿ ಇದು ಇದ್ದೆ ಇರುತ್ತದೆ. ಅದರಲ್ಲೂ ಇದು ಗೆಣೇಶನ ಪೂಜೆಗೆ ಶ್ರೇಷ್ಠವಾದ ಹೂವು. ಎಕ್ಕೆ ಗಿಡವು ೨ ವಿಧವಾದ ಹೂವುಗಳು ಬಿಡುತ್ತವೆ. ಬಿಳಿ ಮತ್ತು ನೀಲಿ ಬಣ್ಣದ ಹೂವುಗಳು. ಪೂಜೆಗೆ ಅಷ್ಟೇ ಅಲ್ಲದೆ ಹಲವು ರೋಗಗಳಿಗೆ ಇದು ಧಿವ್ಯ ಔಷಧಿಯಾಗಿದೆ.

೧. ಎಕ್ಕದ ಎಲೆಗಳನ್ನು ತುಪ್ಪದಲ್ಲಿ ಹುರಿದುಕೊಂಡು ಅದರಿಂದ ರಸ ತೆಗೆದುಕೊಂಡು ನಿಯಮಿತವಾಗಿ ಕಿವಿಗಳಿಗೆ ಹಾಕುವುದರಿಂದ. ಕಿವಿಗಳ ನೋವು, ಕಿವಿ ಸೋರುವುದು, ಕಡಿಮೆಯಾಗುತ್ತದೆ.

೨. ಕೀಲು ನೋವಿನಿಂದ ಬಳಲುವುರು, ಎಕ್ಕದ ಎಲೆಗಳನ್ನು ಬಿಸಿ ಮಾಡಿ ನೋವಿರುವ ಜಾಗಕ್ಕೆ ಕಟ್ಟಬೇಕು. ನೋವು ಶಮನಗೊಳ್ಳುತ್ತದೆ.

 

೪. ಗಾಯವಾಗಿರುವ ಜಾಗಕ್ಕೆ ಎಕ್ಕದ ಎಲೆಗಳನ್ನು ಬಿಸಿ ಮಾಡಿ ಹಚ್ಚಿದರೆ, ಗಾಯ ಬೇಗ ಗುಣವಾಗುತ್ತದೆ.

೫. ಚರ್ಮದ ತೊಂದರೆ ಇದ್ದರೆ ಎಕ್ಕದ ಎಲೆಯ ರಸಕ್ಕೆ ಎಳ್ಳಣ್ಣೆ ಮತ್ತು ಅರಿಶಿನ ಸೇರಿಸಿ ಹಚ್ಚಿದರೆ, ಚರ್ಮದ ತೊಂದರೆ ನಿವಾರಣೆಯಾಗುವುದು.

೬. ಮುಳ್ಳು ಚುಚ್ಚಿದ ಜಾಗಕ್ಕೆ ಎಕ್ಕದ ಹಾಲನ್ನು ಹಾಕಿ ೨ ನಿಮಿಷ ಬಿಟ್ಟು ನಂತರ ಆ ಜಾಗವನ್ನು ಒತ್ತಿದರೆ ಮುಳ್ಳು ಸುಲಭವಾಗಿ ಆಚೆ ಬರುತ್ತದೆ.

ವಿ. ಸೂ:- ಎಕ್ಕದ ಎಲೆಯನ್ನು ಬಿಡಿಸುವಾಗ ಮತ್ತು ಅದರ ಹಾಲನ್ನು ಉಪಯೋಗಿಸುವಾಗ ತುಂಬಾ ಎಚ್ಚರದಿಂದ ಇರಬೇಕು. ಇದರ ಹಾಲು ಕಣ್ಣಿಗೆ ಸಿಡಿದರೆ ಕಣ್ಣಿಗೆ ಹಾನಿಉಂಟಾಗಬಹುದು.

LEAVE A REPLY

Please enter your comment!
Please enter your name here