ಸುಸ್ತು ಯಾರಿಗಾಗಲ್ಲ ಹೇಳಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಇದು ಇದ್ದೇ ಇರುತ್ತದೆ ಮಕ್ಕಳು ಸ್ಕೂಲಿಂದ ಬಂದರೆ ಸುಸ್ತು ಎನ್ನುತ್ತಾರೆ. ಇನ್ನ ದೊಡ್ಡವರು ಕೇಳಬೇಕಾ ಆಚೆಯಿಂದ  ಬಂದರೆ ಸುಸ್ತು ಅಂತ ಕೂತ್ಕೊಳ್ಳೋ ಸಾಕಷ್ಟು ಜನರು ಇದಾರೆ. ಕಾರಣ ಇಷ್ಟೇ ಈ ಟ್ರಾಫಿಕ್ ನಲ್ಲಿ ಹೋಗಿ ಬರುವುದರಲ್ಲಿ ಸಾಕು ಸಾಕಾಗಿ ಹೋಗುತ್ತೆ ಮನೆಗೆ ಬಂದಾಕ್ಷಣ ರೆಸ್ಟ್ ಮಾಡಿದ್ರೆ ಸಾಕಪ್ಪ ಅಂತ ಅನ್ಕೊಳೋರು  ಏನು ಕಡಿಮೇನಾ. ಮನೇಲಿ ಇರೋರಿಗೆ ಮನೆ ಕೆಲಸ ಮುಗಿಸಿಕೊಂಡು ಕೂತ್ಕೊಂಡ್ರೆ ಸಾಕಪ್ಪ ಇಷ್ಟೆಲ್ಲಾ ಸುಸ್ತಾಗಿ ಬಿಡುತ್ತದೆ ಅಂದುಕೊಳ್ಳುತ್ತೇವೆ. ಬೇಸಿಗೆ ಕಾಲದ ನಂತರ ಕೇಳೋದೇ ಬೇಡ ಮನೆಯಲ್ಲಿದ್ದರೂ ಸುಸ್ತು ಆಚೆ ಹೋದರು ನಮ್ಮನ್ನು ಸುಸ್ತಿಗೆ ನೂಕುತ್ತಿದೆ. ಇನ್ನ ಈ ಸುಸ್ತನ್ನು ಕಡಿಮೆ ಮಾಡಿಕೊಳ್ಳಲು ಈ ಒಂದು ಪದಾರ್ಥ ಬಳಸಿದರೆ ನಿಮ್ಮ ಸುಸ್ತು ಮಾಯವಾಗಿರುತ್ತದೆ. ಖರ್ಜೂರ ನ ಯಾರು ಬಳಸಲ್ಲ ಹೇಳಿ, ಇದು ಹಲವಾರು ರೋಗಗಳಿಗೆ ರಾಮಬಾಣ.ಮಕ್ಕಳಿಗೆ ಲಂಚ್ ಬಾಕ್ಸ್ ಗೆ ಇದನ್ನು ಹಾಕಿ ಕಳಸಬೇಕು,ಇದರಿಂದ ಅವರಿಗೆ ದೇಹದಲ್ಲಿ ಶಕ್ತಿ ಬರುವುದರ ಜೊತೆಗೆ ಸುಸ್ತು ಕಡಿಮೆ ಆಗುತ್ತದೆ. ಇನ್ನು ಆಚೆ ಕೆಲಸಕ್ಕೆ ಹೋಗೋವುರು ಇದನ್ನು ತೆಗೆದುಕೊಂಡು ಹೋಗಬಹುದು  ಹಸಿವೆ ಆದಾಗ ಇದನ್ನು ತಿನ್ನಬಹುದು.  ಇದು ಮೂಲತಃ ಅರಬ್ ದೇಶದ್ದು ಆದರೆ ಈಗ ಎಲ್ಲೆಡೆ ಸಿಗುವ ಹಣ್ಣಾಗಿದೆ. ಬಿಸಿಲಿನ ಕಾಲದಲ್ಲಿ ಇದನ್ನ ಹೆಚ್ಚಾಗಿ ಉಪಯೋಗಿಸಬೇಕು ಇದರಿಂದ ಬೇಸಿಗೆಯಲ್ಲಿ ಆಗುವ ಡಿಹೈಡ್ರಷನ ಸಮಸ್ಯೆ ಕಡಿಮೆ ಆಗುತ್ತದೆ .       ಇನ್ನ ಈ ಖರ್ಜೂರದಿಂದ ಸುಸ್ತು ಪರಿಹಾರವಾಗುತ್ತದೆ ಎಂದರೆ ಯಾಕೆ, ನೀವು ಕರ್ಜೂರ ನ ಉಪಯೋಗಿಸಬಾರದು? ಅದು ಹೇಗೆ ಅಂತೀರಾ ಈ ಕೆಳಗಡೆ ಓದಿ.

** ಒಂದು ಚಿಕ್ಕ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಅದರಲ್ಲಿ ಹತ್ತು ಅಥವಾ ಹನ್ನೆರಡು ಖರ್ಜೂರಗಳನ್ನು ನೆನೆಸಿಡಿ. ಅದಕ್ಕೆ ಒಂದು ಚಮಚ ಶುಂಠಿ, ಕಾಲು ಚಮಚ ಏಲಕ್ಕಿ ಪುಡಿ, ಒಂದು ಚಿಟಿಕೆಯಷ್ಟು ಕೇಸರಿ ಸೇರಿಸಬೇಕು, ಇದನ್ನು ಗಾಳಿ ಒಳಗಡೆ ಹೋಗದಂತೆ ಎರಡು ವಾರಗಳ ಕಾಲ ಮುಚ್ಚಿಡಬೇಕು 2 ವಾರಗಳ ಬಳಿಕ ದಿನಕ್ಕೆ ಒಂದಂತೆ ತಿನ್ನುತ್ತಾ ಬಂದರೆ ಸುಸ್ತು ಕಡಿಮೆಯಾಗುತ್ತಾ ಬರುತ್ತದೆ.

** 5 ಅಥವಾ ಹತ್ತು ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಡಬೇಕು ಬೆಳಗ್ಗೆ ಎದ್ದು ಅದನ್ನು ನುಣ್ಣಗೆ ರುಬ್ಬಿಕೊಂಡು ಕುಡಿಯಬೇಕು ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಚೈತನ್ಯವನ್ನು ಮೂಡಿಸುತ್ತದೆ ಆದರೆ ಖರ್ಜೂರ ಬೀಜ ಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಬೇಕು

** ಒಂದು ಗ್ಲಾಸ್ ತಾಜಾ ಮಾವಿನ ಹಣ್ಣಿನ ರಸ ಕುಡಿದು ಒಂದು ತಾಸಿನ ನಂತರ ಒಂದು ಅಥವಾ ಅರ್ಧ ಕಪ್ ಹಾಲಿಗೆ ಒಂದು ಚಿಟಿಕೆಯಷ್ಟು ಏಲಕ್ಕಿ ಪುಡಿ, ೧ ಚಿಟಿಕಿ ಅಷ್ಟು ಜಾಜಿಕಾಯಿ 1 ಚಮಚ ತುಪ್ಪ ಸೇರಿಸಿ ಕುಡಿಯಬೇಕು.

* ನೀವು ತಿಂದಿರುವ ಆಹಾರವೂ ಕರಗದೆ ಇದ್ದರೆ ಅಥವಾ ಕರಗುವ ಫೈವರ್ ಅಂಶವಿರುವ ಆಹಾರ ಸೇವಿಸಿದರೆ ಇದರಲ್ಲಿರುವ  ಅಮಿನೋ ಆಸಿಡ್ ಆಹಾರವನ್ನು ಜೀರ್ಣಿಸಲು ಖರ್ಜೂರವನ್ನು ತಿನ್ನಬೇಕು ಇದರಿಂದ ತಿಂದಿರುವ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

** ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ನೀರಿನೊಂದಿಗೆ ಸೇವಿಸಿದರೆ ಮಲಬದ್ಧತೆಗೆ ಉತ್ತಮ ಪರಿಹಾರವನ್ನು ಕರ್ಜೂರ ನೀಡುತ್ತದೆ.


.
** ಒಂದು ಮುಷ್ಟಿಯಷ್ಟು ಖರ್ಜೂರವನ್ನು ಆಡಿನ ಹಾಲಿನೊಂದಿಗೆ ನೆನೆಸ  ಬೇಕು ಬೆಳಗ್ಗೆ ಖರ್ಜೂರವನ್ನು ಹಾಲಿನೊಂದಿಗೆ ಅಗೆದು ತಿನ್ನಬೇಕು ಅದಕ್ಕೆ ಸ್ವಲ್ಪ ಜೇನು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಸೇವಿಸಿದರೆ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

** ಡಯಟ್ ಮಾಡುವವರು ಖರ್ಜೂರವನ್ನು ಯಾವುದೇ ಅಡೆತಡೆಗಳಿಲ್ಲದೆ ಹೆಚ್ಚಾಗಿ ತಿನ್ನಬಹುದು ಕಾರಣ ಇದರಲ್ಲಿ ಮತ್ತು ಕೊಲೆಸ್ಟ್ರಾಲ     ಅಂಶವನ್ನು  ಕಡಿಮೆ ಹೊಂದಿರುತ್ತದೆ.

**ದಂತಕ್ಷಯ ದ ನೋವನ್ನು ನೀವು ಅನುಭವಿಸುತ್ತಿದ್ದರೆ ನಿತ್ಯವೂ ಸೇವಿಸಿ ಖರ್ಜೂರ ಇದರಲ್ಲಿ ಕ್ಲೋರಿನ್ ಅಂಶ ಇರುವ ಕಾರಣ ಇದು ನೋವನ್ನು ಶಮನಗೊಳಿಸುತ್ತದೆ.

** ಇದೊಂದು ಶಕ್ತಿವರ್ಧಕ ಮತ್ತು ದೇಹಕ್ಕೆ ಬೇಕಾಗಿರುವ ಗ್ಲುಕೋಸ್ ಸುಕ್ರೋಸ್ ಹೊಂದಿರುವ ಕಾರಣ ಇದು ದೇಹಕ್ಕೆ ಸುಸ್ತು ಆಗುವುದನ್ನು  ಕಡಿಮೆಗೊಳಿಸುತ್ತದೆ ಇದೊಂದು ಆರೋಗ್ಯವರ್ಧಕ ಡ್ರೈ ಫ್ರೂಟ್ ಆಗಿದೆ.

** ಪೊಟ್ಯಾಶಿಯಂ ಅಧಿಕವಿರುವ ಖರ್ಜೂರ ವನ್ನು ಹೆಚ್ಚಾಗಿ ತಿಂದರೆ ಪಾರ್ಶವಾಯು ವಾಗುವುದರಿಂದ ಇದು ತಡೆ ಹಿಡಿಯುತ್ತದೆ.

** ಸೋಡಿಯಂ ಮತ್ತು ಪೊಟ್ಯಾಷಿಯಂ ಅನ್ನು ಹೊಂದಿರದ ಕಾರಣ ಇದು ನಿಮ್ಮಲ್ಲಿರುವ ಆರೋಗ್ಯಕರ ನರ ಮಂಡಲಗಳಿಗೆ ತುಂಬಾ           ಅನುಕೂಲಕರ.

ರುಚಿಯಾದ ಡ್ರೈ ಫ್ರೂಟ್ ಅಷ್ಟೇ ಅಲ್ಲದೆ ರಕ್ತಹೀನತೆ ನರ ದೌರ್ಬಲ್ಯ ಇತ್ಯಾದಿ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.ನಿತ್ಯವೂ ಉಪಯೋಗಿಸಿ ಖರ್ಜುರವನ್ನು, ದೇಹವನ್ನು ಸುಸ್ತಿನಿಂದ ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here