ಈಗಿನ ಆಹಾರದ ಪದ್ದತಿ ಹದಗೆಟ್ಟಿರುವ ಕಾರಣ ನಾನಾ ರೋಗಗಳಿಂದ ಬಳಲುವಂತಾಗಿದೆ. ನಮ್ಮ ಪೂರ್ವಿಕರು ಆಹಾರದ ಪದ್ಧತಿ ಚೆನ್ನಾಗಿರುವ ಕಾರಣ, ಅವರಿಗೆ ಯಾವದೇ ರೋಗಗಳಿಗೆ ಗುರಿಯಾಗುತ್ತಿರಲಿಲ್ಲ ಅನ್ನುವುದು ನಿಮಗೆ ಗೊತ್ತಿರುವ ವಿಚಾರ. ಊಟಕ್ಕೆ ತಕ್ಕಂತೆ ಕೆಲಸವನ್ನು ಅವರು ಮಾಡುತಿದ್ದರು, ಆದರೆ ಈಗಿನ ದಿನಗಳ್ಲಲಿ ಆಹಾರವಿದೆ ತಿನ್ನಲು ಬಾಯಿಗಳಿಲ್ಲ, ಒತ್ತಡದ ಬದಕು ಎಲ್ಲರನ್ನು ಹದಗೆಡಿಸಿಬಿಟ್ಟಿದೆ. ಹೆಚ್ಚಾಗಿ ತಿಂದರೆ ದಪ್ಪ ಆಗತಿವಿ ಅಂತ ಲೈಟ್ ಫುಡ್ ಗೆ ಮಾರಿಹೋಗಿದ್ದೇವೆ. ಹಲ್ಲು ಇದ್ದರೆ ಕಡಲೆ ಇಲ್ಲ, ಕಡಲೆ ಇದ್ದರೆ ಹಲ್ಲು ಇಲ್ಲ. ಅನ್ನುವ ಗಾದೆ ಮಾತು ನೂರಕ್ಕೆ ನೂರು ಸತ್ಯ. ಹೊರಗಿನ ಆಹಾರ ಎಣ್ಣೆಯಲ್ಲಿ ಕರೆದ ತಿನಿಸುಗಳು ಜಂಕ್ ಫುಡ್, ದಿನದ ಓಡಾಟ ಹೋಗೆ, ಧೂಳು, ಆಚೆ ಕಡೆ ಹೋಗುವಾಗ ಹೆಲ್ಮೆಟ್ ಧರಿಸುವ ಕಾರಣ ಕೂದಲು ಉದುರುವುದು ಹೆಚ್ಚಾಗಿದೆ. ಇನ್ನ ಮಿಕ್ಕಿರುವ ಕೂದಲನ್ನು ಆದರೂ ಚೆನ್ನಾಗಿ ಇಟ್ಟುಕೊಳ್ಳನ ಅಂತಾ ಸಿಕ್ಕ ಸಿಕ್ಕ ಔಷಧಿ ತೆದುಕೊಳ್ಳುವುದು, ಎಣ್ಣೆ ಹಚ್ಚುವುದು, ಇನ್ನು ಹೆಚ್ಚಾಗಿ ಪಾರ್ಲರ್ ಗೆ ಹೋಗಿ ಹೇರ್ ಕಟ್ ಮಾಡಿಸಿಕೊಳ್ಳುವ ಹೆಣ್ಣು ಮಕ್ಕಳೇ ಹೆಚ್ಚು. ಇಷ್ಟೆಲಾ ಮಾಡಿದ್ರು ಕೂದಲು ಬೆಳೆದಿಲ್ಲ ಅನ್ನೂರಿಗೆ ಇಲ್ಲಿವೆ ಸರಳ ಮನೆ ಮದ್ದುಗಳು…

** ವೀಳ್ಯದೆಲೆಯನ್ನು ನುಣ್ಣಗೆ ರುಬ್ಬಿಕೊಂಡು, ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಬೆರಸಿ, ತಲೆಗೆ ಹಚ್ಚಿಕೊಳ್ಳಬೇಕು. ಒಂದು ತಾಸಿನ ನಂತರ ತಲೆ ಸ್ನಾನ ಮಾಡಬೇಕು. ಇದರಿಂದ ಕೂದಲು ಉದುರುವುದು ಕಡಿಮೆ ಆಗುವುದರ ಜೊತೆಗೆ ತಲೆ ಹೊಟ್ಟು ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ.

** ದಂಟಿನ ಸೊಪ್ಪಿನ ರಸ ತೆಗೆದುಕೊಂಡು, ತಲೆ ಕೂದಲಿಗೆ ಹಚ್ಚಿದರೆ ಕೂದಲು ದಟ್ಟವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಕೂದಲು ಕಪ್ಪು ಬಣ್ಣಕೆ ಬರುತ್ತದೆ. ಬಿಳಿ ಕೂದಲಿನಿಂದ ಮುಕ್ತಿ ಹೊಂದುತ್ತದೆ.

** ಪ್ರತಿನಿತ್ಯ ನೆಲ್ಲೆಕಾಯಿಯನ್ನು ತಿನ್ನುತಾ ಬಂದರೆ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತಾ ಬರುತ್ತದೆ.

** ಬೆಣ್ಣೆಗೆ ಮೆಂತ್ಯ ಪುಡಿಯನ್ನು ಕಲಿಸಿ, ಮಕ್ಕಳಿಗೆ ಹಚ್ಚುತ್ತಾ ಬಂದರೆ ಅವರಲ್ಲಿ ಆಗುವ ಬಾಲ ನೆರೆ ತಡೆಗಟ್ಟಬಹುದು. ದೊಡ್ಡವರು ಕೂಡ ಹಚ್ಚಿಕೊಳ್ಳಬಹುದು. ಹಚ್ಚಿಕೊಂಡು ಸ್ವಲ್ಪು ಹೊತ್ತು ಬಿಟ್ಟು ಉಗರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು.

** ಹರಳೆಣ್ಣೆಗೆ ಮೆಂತ್ಯ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳುವುದರಿಂದ, ಕೂದಲು ಉದುರುವುದು ಕ್ರಮೇಣ ಕಡಿಮೆ ಆಗುತ್ತಾ ಬರುವುದರ ಜೊತೆಗೆ ಕೂದಲು ದಟ್ಟವಾಗಿ ಬೆಳೆಯುತ್ತದೆ.

** ನೆಲ್ಲಿಕಾಯಿ ರಸಕ್ಕೆ ಕೊಬ್ಬರಿ ಎಣ್ಣೆಯನ್ನು ಬೆರಿಸಿ ಹಚ್ಚಬೇಕು. ಇದನ್ನು ತಲೆ ಸ್ನಾನ ಮಾಡುವಾಗ ಹಚ್ಚದೆ ನಿತ್ಯದಲ್ಲೂ ಉಪಯೋಗಿಸಬಹುದು. ಇದು ಬಿಳಿ ಕೂದಲು ಆಗದಂತ್ತೆ ಕಾಪುಡುವುದರ ಜೊತೆಗೆ ಕೂದಲು ದಟ್ಟವಾಗಿ ಬೆಳೆಯಲು ಸಹಾಯವಾಗುತ್ತದೆ.

** ಹಿಂದಿನ ರಾತ್ರಿ ಮೆಂತ್ಯೆಯನ್ನು ನೀರಿನಲ್ಲಿ ನೆನೆಯಿಟ್ಟು ಬೆಳಿಗ್ಗೆ ಎದ್ದು ಅದನ್ನು ನುಣ್ಣಗೆ ರುಬ್ಬಿಕೊಂಡು ತಲೆಗೆ ಹಚ್ಚಿಕೊಂಡು ೧ ರಿಂದ ೨ ತಾಸು ಬಿಟ್ಟು ತಲೆ ಸ್ನಾನ ಮಾಡಿದರೆ, ಕೂದಲಿಗೆ ಹೊಳಪು ಬರುವುದರ ಜೊತೆಗೆ ಕೂದಲು ಬೇಗ ಬಿಳಿ ಆಗುವುದ್ದನ್ನು ಇದು ತಡೆಗಟ್ಟುತ್ತದೆ.

** ದಾಸವಾಳದ ಎಲೆಯೊಂದಿಗೆ ಮೆಂತ್ಯೆ ಹಾಕಿ ರುಬ್ಬಿಕೊಂಡು ಇದನ್ನು ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತವೆ.

**ತಲೆ ಹೊಟ್ಟಿನ ಸಮಸ್ಯೆ ಜಾಸ್ತಿ ಇದ್ದಾರೆ ನಿಂಬೆಕಾಯಿಯನ್ನು ೨ ಹೋಳು ಮಾಡಿಕೊಂಡು ತಲೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ೧ ತಾಸು ಬಿಟ್ಟು ತಲೆ ಸ್ನಾನ ಮಾಡಬೇಕು.

LEAVE A REPLY

Please enter your comment!
Please enter your name here