ಕೇವಲ ಒಂದು ದಿನ ಮಾತ್ರ ಮಹಿಳಿಯರಿಗೆ ಸೀಮಿತವಾಗಿರದೆ, ಅವರಿಗೂ ಸಿಗಬೇಕಾದ ಸ್ಥಾನಗಳು ಸಿಗಬೇಕು. ಒಂದು ದಿನದ ಮಟ್ಟಿಗೆ ಮಹಿಳಾ ದಿನವನ್ನು ಮಾಡಿ ಮಾರನೇ ದಿವಸ ಅವಳಿಗೆ ಹಿಂಸೆ ಕೊಡುವ ಪುರುಷರೇ ಹೆಚ್ಚು. ಕೆಲವಂದು ಸಂಘಟನೆಗಳು, ಸಂಸ್ಥೆಗಳು, ಹೆಣ್ಣಿನ ಪರ ಹೋರಾಟ ಮಾಡುತ್ತವೆ ಅಂತ ದಿನ ಪತ್ರಿಕೆಗಳಲ್ಲಿ ಓದುತ್ತ ಇರುತ್ತೇವೆ. ಆದರೂ ದಿನದಲ್ಲಿ ಅತ್ಯಾಚಾರಗಳು ಹಿಂಸೆ ಕೊಡುವುದು ಮಾತ್ರ ಕಡಿಮೆ ಆಗಿಲ್ಲ. ಇನ್ನ ಯಾವ ಸುಖಕ್ಕೆ ಮೆಹಿಳೆಯರಿಗೆ ದಿನ ಅಂತ ಯಾಕೆ ಸೀಮಿತ ಮಾಡಿದ್ರು ಗೊತ್ತಿಲ್ಲ. ಮಹಿಳಿಯರಿಗೆ ನಿಜವಾಗಿಯೂ ಸ್ವಾತಂತ್ರ ಸಿಕ್ಕಿದಿಯಾ ಅನ್ನುವ ಪ್ರಶ್ನೆಗೆ ಇನ್ನು ಉತ್ತರ ಮಾತ್ರ ಸಿಗುತ್ತಿಲ್ಲ . ಯಾಕೆ ಅನ್ನಬೇಕು ನಾವು ೨೧ ನೇ ಶತಮಾನದಲ್ಲಿ ಇದ್ದೀವಿ ಅಂತ.

ಹೆಣ್ಣು ಮಕ್ಕಳು ಗಂಡನಿಂದ ಆಪೇಕ್ಷೆ ಪಡುವುದು ಅವನ ದುಡ್ಡು ಅಲ್ಲ, ಅವನು ತಂದು ಕೊಡುವ ಸಂಬಳ ಅಲ್ಲ , ಅವನಿಂದ ಬಯಸುವುವದು ಅವನ  ಪ್ರೀತಿ. ಕೇವಲ ಮಾರ್ಚ್ ೮ ವಿಶ್ವ ಮಹಿಳಾ ದಿನಾಚರಣೆ ದಿವಸ ಮಾತ್ರ ವಿಶ್ ಮಾಡದೇ, ನಿತ್ಯದಲ್ಲೂ ಅವರಿಗೆ ಒಂದು ಗುಡ್ ವಿಶ್ ಮಾಡಿದ್ರೆ ಸಾಕು. ಊಟಕ್ಕೆ ಆಚೆ ಹೋಗುವುದು, ಹೂವಿನ ಬುಕ್ಕೇ ಕೊಡುವ ಬದಲು ಅವಳಿಗೆ ನಿತ್ಯದಲ್ಲೂ ಒಂದು ಪ್ರೀತಿಯ ಮಾತು ಸಾಕು. ಆಗಿದ್ದು ಕಷ್ಟ ಆಗಲೇ ನಾನೆ ಎಲ್ಲ ಕೆಲಸ ಮಾಡ್ತೀನಿ ಅನ್ನು ಅಮ್ಮದೀರುನ್ನು ನೀವು ನಿಮ್ಮ ಮನೆಯಲ್ಲಿ ನೋಡಿದಿರಾ . ಹಂತ ಅಮ್ಮನಿಗೆ ನಾವು ದಿನದಲ್ಲೂ ಅವರೊಂದಿಗೆ ಒಂದು ಪ್ರೀತಿಯ ಮಾತು ಆಡಿದರೆ ಸಾಕಲ್ವೇ ಆ ತಾಯಿಯ ಹೃದ್ಯಯ ಎಷ್ಟ್ಟು ಸಂತಸ ಗೊಳ್ಳುತ್ತದೆ. ಒಂದು ನಿಮಿಷವೂ ಬಿಡುವು ಕೊಡದೆ, ಯಾವದೇ ರಜೆ ಇಲ್ಲದೆ ,ವರ್ಷದ ೧೨ ತಿಂಗಳು, ೩೬೫ ದಿವಸವು, ದುಡಿಯುವ ಆ ಹೆಣ್ಣಿಗೆ ಕೇವಲ ಒಂದು ದಿನ ಸಾಕೇ?

ಕಾರ್ಯೇಶು ದಾಸಿ, ಕರೆನೇಷು ಮಂತ್ರಿ, ಭೊಜೇಷು ಮಾತ, ಶೆಯೆನುಷು ರಂಭ, ಕ್ಷಯೇನಿಶು ಧರಿತ್ರಿ, ರೂಪೇಶು ಲಕ್ಷ್ಮಿ, ಸತ್ಕ್ರಮಯುಕ್ತ ಕುಲಧರ್ಮ ಪತ್ನಿ , ಭರತಕುಲ ಸ್ತ್ರೀಯೇ, ಎಂದು ಬಾಯಲ್ಲಿ ಮಾತ್ರ ಈ ಸ್ತುತಿ ಪಠಿಸುತ್ತೇವೆ. ಆದರೆ ಮನೆಯಲ್ಲಿ ಕೆಲಸಕ್ಕೆ ಮಾತ್ರ ಸೀಮಿತವಾಗಿರುವ ಹೆಣ್ಣು ಮಕ್ಕಳು ಹೊರಗಿನ ಪ್ರಪಂಚಕ್ಕೆ ಪರಿಚಯವಾಗಬೇಕು. ಬರಿ ಕಸ ಗುಡಿಸಲು, ಅಡುಗೆ ಮಾಡಲು, ಮನೆಯವರ ಆರೈಕೆಗೆ ಮಾತ್ರ ಹೆಣ್ಣು ಮಕ್ಕಳು ಬೇಕು ಅನ್ನುವರ ಸಂಖ್ಯೆ ಹೆಚ್ಚು. ಮಕ್ಕಳನ್ನು ಹೇರೊವುದು, ಗಂಡನ ಕಾಳಜಿ, ಬಟ್ಟೆ, ಅವನಿಗೆ ಇಷ್ಟದ ಆಹಾರ ತಯಾರಿಸುವುದು, ಇಷ್ಟೇಕೆ ಸೀಮಿತ ನಮ್ಮ ಹೆಣ್ಣು ಮಕ್ಕಳ ಜೀವನ. ಇವರಿಗೂ ಒಂದು ಪ್ರಪಂಚ ಇದೆ ಅಂತ ತೋರಿಸುವ ಹೊಣೆ ಗಂಡ ಮಕ್ಕಳದು ಆಗಿರಬೇಕು.ಇವಳು ಎಲ್ಲ ಕೆಲಸಗಳನ್ನು ಚೊಕ್ಕಾಗಿ ನಿಭಾಯಿಸುತ್ತಾಳೆ.ಹಿಂತಹ ಜೀವವನ್ನು ಖುಷಿಯಾಗಿ ಇರಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಅಲ್ಲವೇ.

ನಮ್ಮ ದೇಶದಲ್ಲಿ ಎಷ್ಟು ಹೆಣ್ಣು ಮಕ್ಕಳು ಅವರದೇ ಆದ ಕಲ್ಪನೆಯಲ್ಲಿ ಬದುಕಿ ಬಾಳಿ ತೋರಿಸಿರುವ ಉದಾಹರಣೆಗಳು ಸಾಕಷ್ಟ್ಟಿವೆ.ಹೆಣ್ಣು ಮನಸ್ಸು ಮಾಡಿದರೆ ಆಕಾಶದೆತ್ತರಕೆ ಸಾಧನೆ ಮಾಡಿರುವವರು ಇದಾರೆ.  ಅದೆಷ್ಟು ಹೆಣ್ಣು ಮಕ್ಕಳು ನಮ್ಮ ಸುತ್ತಮುತ್ತದಲ್ಲೇ ಇದ್ದಾರೆ. ತೊಟ್ಟಿಲನ್ನು ತೋಗುವ ಕೈ ದೇಶವನ್ನೇ ತೊಗಬಲ್ಲದು. ಹಿಂತಾ ಸಾಧನೆಯ ಹಾದಿಯಲ್ಲಿ ಹೆಣ್ಣಿನ ದಿಟ್ಟ ಹೆಜ್ಜೆ ಗುರುತು ಕೀರ್ತಿ, ಪ್ರತಿಭಾ ದೇವಿ ಸಿಂಗ್ ಪಾಟೀಲ್, ಇಂದಿರಾ ಪ್ರಿಯಾ ದರ್ಶನಿ ಗಾಂಧಿ, ಬ್ಯಾಹ್ಯಾಕಾಶದಲ್ಲಿ ಹಾರಿದ ಮೊದಲ ಮಹಿಳೆ ಕಲ್ಪನಾ ಚಾವ್ಲಾ, ಭಾರತೀಯ ಸೇನೆಯಲ್ಲಿ ಮೊದಲ ಮಹಿಳೆಯಾಗಿ ಪುನೀತಾ ಅರೋರಾ, ಪ್ರಿಯಾ ಜಿನ್ಗನ್. ಮೌಂಟ್ ಎವರೆಸ್ಟ್ ಹತ್ತಿದ ಕೀರ್ತಿ ನಮ್ಮ ಭಾರತೀಯ ಬಚೇಂದ್ರಿ ಪಾಲ್ ಅವರಿಗೆ ಸೇರುತ್ತದೆ. ಕರ್ಣಮ್ ಮಲ್ಲೇಶ್ವರಿ, ಪಿ.ವಿ. ಸಿಂಧು, ರೀಟಾ ಫೆರಿಯ, ಸುಶ್ಸ್ಮಿತ ಸೆನ್, ಕಿರಣ್ ಬೇಡಿ, ಅದಿತಿ ಗೋವಿಟ್ರಿಕರ, ಅವನಿ ಚತುರವೇಧಿ, ಹೀಗೆ ಹಲವಾರು ಮಹಿಳೆಯರು ನಮ್ಮ ದೇಶದಲ್ಲಿ ಅವರದೇ ಛಾಪು ಮೂಡಿಸಿದ್ದಾರೆ.

ಸ್ವಾತಂತ್ರಕ್ಕೆ ಹೋರಾಡಿ ತಮ್ಮ ಜೀವಗಳನ್ನು ದೇಶಕ್ಕಾಗಿ ಕೊಟ್ಟಿರುವ ಮಹಿಳೆಯರು ಸಾವಿರಾರು ಮಹಿಳೆಯರು ಇದಾರೆ.ಝಾನ್ಸಿ ರಾಣಿ ಲಕ್ಷ್ಮಿ ಬಾಯ್,ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಜೀಜಾಬಾಯಿ, ವೀರವನಿತೆ ಓಬ್ಬವ್ವ, ರಾಣಿ ದುರ್ಗಾವತಿ, ತಾರಾಬಾಯಿ, ಹದಿ ರಾಣಿ, ಕೆಳದಿ ಚೆನ್ನಮ,ವಿದ್ಯಾವತಿ ದೇವಿ, ಹೀಗೆ ಹಲವಾರು ಮಹಿನಿಯರು ನಮ್ಮ ದೇಶದ ಸ್ವಾತಂತ್ರಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು. ಹಿಂತಾ ಮಹಾನ ದೇಶದಲ್ಲಿ ಹುಟ್ಟಿದ ಮಹಿಳಿಯರಿಗೆ ಕೇವಲ ಒಂದು ದಿನ ಸಾಕೇ? ನೀವೇ ವಿಚಾರ ಮಾಡಿಕೊಳ್ಳಿ. ಸಿಕ್ಕ ಅವಕಾಶದ ಸಮಯದಲ್ಲಿ ತನ್ನದೇ ಛಾಪು ಮೂಡಿಸಿ ನಾವು ಪುರುಷರಗೆ ಸರಿ ಸಮಾನವಾಗಿ ನಿತ್ತು ಸಾಧನೆ ಮಾಡಿ ತೋರಿಸಿದ್ದಾರೆ. ಪ್ರತಿ ವರ್ಷದ ಪರೀಕ್ಷೆಯಲ್ಲೂ ಹೆಣ್ಣು ಮಕ್ಕಳೆ ಮೇಲುಗೈ ಅನ್ನುವುದು ಪ್ರತಿವರ್ಷ ನೀವು ನೋಡಿರಿತೀರಾ. ಮಹಿಳೆಯನ್ನು ಹೀನವಾಗಿ ನೋಡುವುದನ್ನು ಬಿಟ್ಟು ಅವಳಿಗೂ ಒಂದು ಮನಸಿದೆ, ಅವಳಿಗೂ ಒಂದು ಜೀವವಿದೆ ಅನ್ನುವುದನ್ನು ಅರಿತಿಕೊಳ್ಳುವುದು ಉತ್ತಮ. ಅವಳಿಗೆ ಸಿಗಬೇಕಾದ ಸ್ಥಾನಮಾನಗಳನ್ನೂ ಕೊಟ್ಟು ಅವರನ್ನು ಬದುಕಲು ಬಿಡಿ.

ಎಂತಹದೇ ಕೆಲಸ ಕೊಟ್ಟರು ನೀಟಾಗಿ ಮಾಡುವ ಮಹಿಳೆಯರಿಗೆ ಒಳ್ಳೆಯ ಅವಕಾಶ ಹುಡುಕಿ ಕೊಂಡು ಬರುತ್ತದೆ. ಮನೆಯಲ್ಲಿರುವ, ಮತ್ತು  ಆಚೆ ಕೆಲಸ ಮಾಡುವ ಎಲ್ಲ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.

LEAVE A REPLY

Please enter your comment!
Please enter your name here