ಸೂಪ್ ಅಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರ ವರೆಗೂ ಎಲ್ಲರಿಗೂ ಇಷ್ಟ, ಊಟದ ಮೊದಲ ಹಂತದಲ್ಲಿ ಸೂಪ್ ನ ಉಪಯೋಗಿಸ್ತಾರೆ. ಸೂಪ್ ನಲ್ಲಿ ಎಲ್ಲ ಬಗೆಯ ತರಕಾರಿಗಳು ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯ ಆಹಾರ ಮತ್ತು ಇದರಲ್ಲಿ ಅತಿ ಹೆಚ್ಚು ಫೈಬರ್ ಇರುವುದರಿಂದ ಜೀರ್ಣ ಕ್ರಿಯೆಗೆ ತುಂಬಾ ಸಹಾಯಕ. ಸೂಪ್ ಕುಡಿಯೋದ್ರಿಂದ ದೇಹದ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿಡಲು ಸಹಾಯ ಮಾಡುತ್ತೆ.

ಸೂಪ್ ನಲ್ಲಿ ಹಲವಾರು ಬಗೆಗಳಿವೆ. ಅದ್ರಲ್ಲಿ ವೆಜಿಟೇಬಲ್ ಸೂಪ್ ಕೂಡ ಒಂದು ಅದನ್ನ ಹೇಗೆ ಮಾಡೋದು ಅಂತ ಈಗ ತಿಳ್ಕೊಳೋಣ.

ಒಂದು  ಕಪ್ ಸಣ್ಣಗೆ ಹೆಚ್ಚಿದ ಎಲೆ ಕೋಸು.

ಒಂದು ಕಪ್ ಬೀನ್ಸ್.

ಅರ್ಧ ಕಪ್ ಕ್ಯಾರಟ್.

ಅರ್ಧ ಕಪ್ ಹಸಿ ಬಟಾಣಿ.

ಅರ್ಧ ಕಪ್ ಸ್ವೀಟ್ ಕಾರ್ನ್.

ಸಣ್ಣಗೆ ಕಟ್ ಮಡಿದ ಬೆಳ್ಳುಳ್ಳಿ 2 ಎಸಳು.

ಕಾಳು ಮೆಣಸಿನ ಪುಡಿ 2 ಸ್ಪೂನ್.

ಕಾರ್ನ್ ಫ್ಲೋರ್ ಅಥವಾ ಅಕ್ಕಿ ಹಿಟ್ಟು 1 ಸ್ಪೂನ್.

ಸ್ಪ್ರಿಂಗ್ ಆನಿಯನ್ [ ಈರುಳ್ಳಿ ಹೂವು] 1ಕಪ್

ಉಪ್ಪು ರುಚಿಗೆ.

ಚೆನ್ನಾಗಿ ತೊಳೆದು ಹೆಚ್ಚಿದ ತರಕಾರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ, ಅದಕ್ಕೆ  ಒಂದು ಲೀಟರ್ ಅಥವಾ 4 ಲೋಟ ನೀರು ಮತ್ತು ಉಪ್ಪು ಹಾಕಿ ಬೇಯಿಸ ಬೇಕು.

ನಂತರ  ಒಂದು ಬಟ್ಟಲಿನಲ್ಲಿ  ಕಾರ್ನ್ ಫ್ಲೋರ್ ಅಥವಾ ಅಕ್ಕಿ ಹಿಟ್ಟಿಗೆ ನೀರು ಬೆರೆಸಿ ಗಂಟಿಲ್ಲದಂತೆ ಕಲಸಿಕೊಳ್ಳಿ.

ಬೆಂದ ತರಕಾರಿಗೆ ಕಲಸಿಕೊಂಡ ಹಿಟ್ಟನ್ನು ಬೆರೆಸಿ ನಿದಾನವಾಗಿ ಕಲಕುತ್ತಿರಿ.

ನೀರು ಮಂದವಾಗಿ ತರಕಾರಿಗಳೊಂದಿಗೆ ಬೆರೆತು ಕೊಂಡು ಸೂಪ್ ಹದವಾಗಿ ಬೆರೆಯುತ್ತದೆ.

ಕೊನೆಯಲ್ಲಿ ಮೆಣಸಿನ ಪುಡಿ ಹಾಕಿ ಮೇಲೆ ಸ್ವಲ್ಪ ಕ್ರೀಮ್ ಅಥವಾ ಬೆಣ್ಣೆ ಹಾಕಿ.

ಸಿಂಪಲ್ ಆಗಿ ಮನೆಯಲ್ಲೇ ಸೂಪ್ ಮಾಡಿ ಮಕ್ಕಳಿಗೆ ಕೊಡಿ. ರುಚಿಯಾಡಾ ಹೇಳ್ದು ಸೂಪ್ ಮಾಡೋಕು ಸುಲಭ, ಹೆಚ್ಚು ಸಮಯನು ಬೇಕಾಗೋದಿಲ್ಲ.

LEAVE A REPLY

Please enter your comment!
Please enter your name here