ಈ ತಲೆಹೊಟ್ಟು ಅನ್ನೋದು ಮಹಿಳೆಯರು ಪುರುಷರು ಮಕ್ಕಳು ಯಾರನ್ನು ಬಿಡದೆ ಕಾಡ್ತಾ ಇರೋ ಒಂದು ದೊಡ್ಡ ಸಮಸ್ಯೆ. ಪರಿಸರದಲ್ಲಿನ ಮಾಲಿನ್ಯ, ಋತುಗಳ ಬದಲಾವಣೆ , ಕಾಲುಶಹಿತ ವಾತಾವರಣ, ನೀವು ಬಳಸ್ತಾ ಇರೋ ಶಂಪೂ ಹೇರ್ ಆಯಿಲ್, ಮತ್ತು ನೆತ್ತಿ ಮತ್ತು ಕೂದಲನ್ನು ಶುಚಿಯಾಗಿಡದೆ ಇರುವುದು ಈ ಎಲ್ಲ ಕಾರಣಗಳಿಂದ ತಲೆ ಹೊಟ್ಟಿನ ಸಮಸ್ಯೆ ಬರುತ್ತವೆ. ತಲೆಹೊಟ್ಟು ಬರದೇ ಇರೋಕೆ ಮತ್ತು ಬಂದಿರೋ ತಲೆ ಹೊಟ್ಟನ್ನು ಹೋಗ್ಸೋಕೆ  ಈ ಕೆಲವೊಂದು ಟಿಪ್ಸ್ ನ ಫಾಲೋ ಮಾಡಿ.

ತಲೆ ತೊಳೆಯಲು ತುಂಬಾ ಬಿಸಿ ನೀರಿನ ಬಳಕೆ ಬೇಡ, ಉಗುರು ಬಿಚ್ಚಗಿನ ನೀರನ್ನು ಬಳಸಿ , ಬಿಸಿ ನೀರಿನಿಂದ ತಲೆಯ ಚರ್ಮ ಡ್ರೈ ಆಗಿ ಹೊಟ್ಟಾಗುವ ಸಾಧ್ಯತೆಗಳಿವೆ.

ವಾರದಲ್ಲಿ ಕನಿಷ್ಠ ಒಂದು ಬಾರಿ ಹರಳೆಣ್ಣೆ ಇಂದ ಮಸಾಜ್ ಮಾಡಿ ಒಂದು ಗಂಟೆಯ ನಂತರ ತೊಳೆಯಿರಿ, ಇದರಿಂದ ನೆತ್ತಿ ತಂಪಾಗಿ ಕೂದಲಿಗೆ ಬೇಕಾಗಿರುವ ಪೋಷಣೆ ಸಿಗುತ್ತದೆ. ತಲೆಹೊಟ್ಟು ಬರುವುದಿಲ್ಲ.

ಚೆನ್ನಾಗಿ ಕಳಿತ ಬಾಳೆಹಣ್ಣಿಗೆ ಒಂದು ಸ್ಪೂನ್ ಗ್ಲಿಜರಿನ್ ಮತ್ತು ನಿಂಬೆ ರಸ ಬೆರೆಸಿ ತಲೆ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ ಒಂದು ಗಂಟೆಯ ನಂತರ ತೊಳೆದು ಕೊಳ್ಳಬೇಕು. ವಾರಕ್ಕೆ 2 ಬಾರಿಯಂತೆ ಒಂದು ತಿಂಗಳ ಕಾಲ ಹಚ್ಚಬೇಕು.

ನಿಂಬೆ ರಸವನ್ನು ತಲೆ ಬುಡಕ್ಕೆ ಹಚ್ಚಿ 1/2 ಗಂಟೆಯ ನಂತರ ತೊಳೆದರೆ ಹೊಟ್ಟು ಬರುವುದಿಲ್ಲ ಮತ್ತು ಕೂದಲ ಹೊಳಪು ಹೆಚ್ಚುತ್ತದೆ.

ವಾರದಲ್ಲಿ ಒಂದು ಸಾರಿ ಬಾದಾಮಿಎಣ್ಣೆ, ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ ಸಮಪ್ರಮಾಣದಲ್ಲಿ ಬೆರೆಸಿ ಸ್ವಲ್ಪ ಬೆಚ್ಚಗೆ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ ಒಂದು ಗಂಟೆಯ ನಂತರ ವಾಷ್ ಮಾಡಿ ಇದರಿಂದ ಕೂದಲು ಸೊಂಪಾಗಿ ಬೆಳೆಯುವುದು ಮತ್ತು ಹೊತ್ತು ನಿವಾರಣೆ ಯಾಗುವುದು.

ಹುಣಸೆ ಹಣ್ಣನು ನೆನೆಸಿ ಚೆನ್ನಾಗಿ ಕಿವಿಚಿ ರಸ ತೆಗೆದು ಅದನ್ನು ತಲೆಗೆ ಹಚ್ಚಿ ತೊಳೆದರೆ ಹೊತ್ತು ನಿವಾರಣೆಯಾಗುತ್ತದೆ.

ಮೊಸರಿನೊಂದಿಗೆ ತೆಂಗಿನ ತುರಿಯನ್ನು ರುಬ್ಬಿ ಕೂದಲಿಗೆ ಹಚ್ಚುವುದರಿಂದಲೂ ಹೊಟ್ಟು ನಿವಾರಣೆಯಾಗಿ ಕೂದಲು ಬೆಳೆಯುತ್ತದೆ.

LEAVE A REPLY

Please enter your comment!
Please enter your name here