ಇತ್ತೀಚಿನ ದಿನಗಳಲ್ಲಿ ನೆನಪಿನ ಶಕ್ತಿ ಅಥವಾ ಸ್ಮರಣ ಶಕ್ತಿ ಕಡಿಮೆಯಾಗಿರುವುದು ನಾವೆಲ್ಲ ನಿತ್ಯ ದಲ್ಲೂ ನೋಡುತ್ತೇವೆ ಇದಕ್ಕೆ ವಯಸ್ಸಿನ ಇತಿಮಿತಿಗಳಿಲ್ಲ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಆದರೆ ನಮ್ಮ ಸುತ್ತಮುತ್ತಲಿರುವ  ಅಥವಾ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ನಾವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿರುವ ಮನೆಮದ್ದುಗಳನ್ನು ಬಿಟ್ಟು ವೈದ್ಯರ ಬಳಿಗೆ ಹೋಗುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ ಆದರೆ ಇವಕ್ಕೆಲ್ಲ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಲವಾರು ರೀತಿಯ ಗಿಡಮೂಲಿಕೆಗಳು ಇರುತ್ತವೆ, ಇದು ನಿಮ್ಮ ಗಮನಕ್ಕೆ ಬರುವುದಿಲ್ಲ ಗಡಿಬಿಡಿಯ ಬದುಕಿನಲ್ಲಿ ಮಕ್ಕಳಿಗಾಗಿ ಸಮಯವನ್ನು ನಿಗದಿ ಪಡಿಸುವುದು ತುಂಬಾನೇ ಕಷ್ಟ ಅವರ ಲಾಲನೆ ಪೋಷಣೆ ತುಂಬಾ ಅಗತ್ಯವಾದ ಮತ್ತು ಪ್ರಮುಖವಾದ ಪಾತ್ರ ನಮ್ಮ ಜೀವನದಲ್ಲಿ ಇರುತ್ತೆ ಎಷ್ಟೇ ದಣಿವಾದರೂ ಮಕ್ಕಳಿಗಾಗಿ ಸಮಯ ಕೊಡುವುದನ್ನು ನಾವು ನಿರ್ಲಕ್ಷಿಸಬಾರದು ಅವರ ಆಗು ಹೋಗುಗಳ ಬಗ್ಗೆ ವಿದ್ಯಾಭ್ಯಾಸದ ಬಗ್ಗೆ ನಾವು ಗಮನ ಹರಿಸಲೇಬೇಕು. ಅವರು ಓದಿರುವುದು ಅವರ ತಲೆಗೆ ಹೋಗುತ್ತದೆಯೋ ಇಲ್ಲವೋ ಎಂಬುದನ್ನು ನಾವು ಪರೀಕ್ಷಿಸುತ್ತಾ ಇರಬೇಕು ಪರೀಕ್ಷೆ ಸಮಯದಲ್ಲಿ ಮಾತ್ರ ಅವರಿಗೆ ಸಮಯ ಕೊಡದೆ ದಿನನಿತ್ಯದಲ್ಲಿ ಅವರ ಓದಿನ ಬಗ್ಗೆ ನಿಗಾ ವಹಿಸಬೇಕು. ಆಟದ ಬಗ್ಗೆ ಎಚ್ಚರವಹಿಸಬೇಕು ಬೆಳೆವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ನಾವು ಅವರನ್ನು ಉನ್ನತ ಸ್ಥಾನದಲ್ಲಿ ಇರಿಸಲು ಪ್ರಯತ್ನಿಸುತ್ತ ಇರಬೇಕು. ಓದಿದ್ದನ್ನು ಓದಿಸುವುದು ಬರೆಸುವುದು ಈ ರೀತಿ ಮಾಡಿದರೆ ಅವರಲ್ಲಿ ನೆನಪಿನ ಶಕ್ತಿ ಹೆಚ್ಚುತ್ತಾ ಹೋಗುತ್ತದೆ ಆದ್ದರಿಂದ ಅವರಿಗೆ ಪರೀಕ್ಷಾ ಸಮಯದಲ್ಲಿ ಸ್ವಲ್ಪವೂ ಕಷ್ಟವಿಲ್ಲದೆ ಪರೀಕ್ಷಾ ತಯಾರಿ ಮಾಡಿಕೊಳ್ಳುತ್ತಾರೆ. ಈ ರೀತಿ ಅವರನ್ನು ತಯಾರಿಸುವುದು ನಮ್ಮ ನಿಮ್ಮ  ಹೊಣೆ ಆದಷ್ಟು ಅವರಿಗೆ ಮನೆಯಲ್ಲೇ ಇರುವಂತಹ ಮನೆಮದ್ದು ಗಳನ್ನು ಬಳಸಿ ಅವರ ನೆನಪಿನ ಶಕ್ತಿಯನ್ನು ಅಥವಾ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದು ನಮ್ಮ ನಿಮ್ಮ ಕರ್ತವ್ಯ ವೈದ್ಯರ ಬಳಿ ಹೋಗದೆ ಸಾಧ್ಯವಾದಷ್ಟು ಅವರಿಗೆ ಮಾತ್ರೆಗಳಿಲ್ಲದೆ ಯಾವುದೇ ಟಾನಿಕ್ ನೀಡದೆ ಅವರಲ್ಲಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದು ಉತ್ತಮ ನಮಗೆ ತಿಳಿಯದ ಹಾಗೆ ನೀವು ದಿನನಿತ್ಯದ ಅಡುಗೆಯಲ್ಲಿ ಅಥವಾ ಯಾವುದೇ ಒಂದು ತಿನಿಸು ತಯಾರಿಸುವಲ್ಲಿ ಆಯುರ್ವೇದದ ಕೆಲವು ವಸ್ತುಗಳನ್ನು ಬಳಸುತ್ತೇವೆ ಆದರೆ ಇದು ನಮ್ಮ ಕಲ್ಪನೆಗೆ ಬಂದಿರುವುದಿಲ್ಲ. ಇನ್ನು ಜ್ಞಾಪಕ ಶಕ್ತಿ ಹೆಚ್ಚಿಸಲು ಯಾವುದನ್ನೆಲ್ಲ ಕೊಟ್ಟರೆ ಮಕ್ಕಳಲ್ಲಿ ಅಥವಾ ದೊಡ್ಡವರಲ್ಲಿ ಸ್ಮರಣ ಶಕ್ತಿಯನ್ನು ಹೇಗೆ ಹೆಚ್ಚಿಸಬಹುದು. ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ತುಂಬಾ ಅಗತ್ಯವಾಗಿರುತ್ತದೆ ಇದರಿಂದ ಅವರ ಮುಂದಿನ ಜೀವನದ ಭವಿಷ್ಯ ಅಡಗಿರುತ್ತದೆ. ಸಾಧ್ಯವಾದಷ್ಟು ಮಕ್ಕಳಿಗೆ ಪ್ರೋಟೀನ್ ವಿಟಮಿನ್  ಪೋಷಕಾಂಶಗಳನ್ನು ಹೊಂದಿರುವ ಆಹಾರಗಳನ್ನು ನೀಡಬೇಕು ಇದರಿಂದ ಅವರಲ್ಲಿ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಯಾವುದೇ ಅಡ್ಡಿ ಆಗುವುದಿಲ್ಲ. ಯಾವ ತರಹದ ಆಹಾರವನ್ನು ಮಕ್ಕಳಿಗೆ ನೀಡೂದ್ರಿಂದ ಅವರ ಜ್ಞಾಪಕ ಶಕ್ತಿ ಬೆಳಿಯುತ್ತದೆ ಅಂತ ಇಲ್ಲಿ ತಿಳಿಯೋಣ…

 

* ತಾಯಿಯ ಗರ್ಭದಿಂದಲೆ ಮಗುವಿನ ಬೆಳವಣಿಗೆ ಆಗುವುದು,ಸಾಧ್ಯವಾದಷ್ಟು ಮಟ್ಟಿಗೆ ಗರ್ಭಿಣಿ ಹೆಣ್ಣು ಮಕ್ಕಳಿಗೆ ವಿಟಮಿನ್, ಪ್ರೊಟೀನ್, ಮಿನರಲ್ಸ್, ಕ್ಯಾಲೋರೀಸ್,ಕಬ್ಬಿನಾಂಶ ಇರುವ ಆಹಾರ ಸೇವನೆ ತುಂಬಾ ಮುಖ್ಯವಾಗಿರುತ್ತದೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾದರೆ ಬುದ್ಧಿಮಾಂಧ್ಯ ಮತ್ತು ಜ್ಞಾಪಕ ಶಕ್ತಿ ಕಡಿಮೆಯಾಗುವ ಸಂಭವ ಹೆಚ್ಚಿರುತ್ತದೆ.

* ಮೂರರಿಂದ 4 ಚಮಚದಷ್ಟು ನೆಲ್ಲಿಕಾಯಿ ರಸ ಅಷ್ಟೇ ಪ್ರಮಾಣದ ಜೇನುತುಪ್ಪವನ್ನು ಬೆರೆಸಿ ಪ್ರತಿನಿತ್ಯ ಊಟದ ನಂತರ ಇದನ್ನು ಸೇವಿಸಬೇಕು.

*ಬೂದುಗುಂಬಳ ಕಾಯಿಯನ್ನು ಹಸಿಯಾಗಿಯೇ ಅಥವಾ ಅದರ ರಸವನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.

* ರಾತ್ರಿ ಮಲಗುವ ಮುನ್ನ ಒಂದು ಬಟ್ಟಲಿನಲ್ಲಿ ಹತ್ತರಿಂದ ಹದಿನೈದು ಬಾದಾಮಿಯನ್ನು ನೆನೆ ಹಾಕಿ ಬೆಳಗ್ಗೆ ಎದ್ದ ತಕ್ಷಣ ಮಕ್ಕಳಿಗೆ ಕೊಟ್ಟರೆ ಅವರ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.

* ಕೇಸರಿ ಹಾಕಿಕೊಂಡು ಹಾಲನ್ನು ಕುಡಿಯುವುದರಿಂದ ಮೆದುಳಿನ ಜೀವಕೋಶಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಆರೋಗ್ಯವಾಗಿರಲು ನೆರವಾಗುತ್ತದೆ.

* ಪ್ರತಿನಿತ್ಯ ಹತ್ತರಿಂದ ಹದಿನೈದು ಅಥವಾ 5ರಿಂದ 10 ಗೋಡಂಬಿಯನ್ನು ತಿನ್ನುತ್ತಾ ಬಂದರೆ ಜ್ಞಾಪಕಶಕ್ತಿಗೆ ದಿವ್ಯ ಔಷಧ.

* ಮೂಲಂಗಿ ಮೆಂತ್ಯೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಮೆಣಸು ಜೀರಿಗೆ ಸ್ವಲ್ಪ ಕರಿಬೇವು ಇಂಗು ಒಗ್ಗರಣೆ ಹಾಕಿ ಸೇವಿಸಿದರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಹಸಿ ಸೊಪ್ಪನ್ನು ತಿನ್ನುವುದನ್ನು ರೂಢಿಸಿಕೊಳ್ಳಬೇಕು ಇದರಿಂದ ದೇಹಕ್ಕೆ ಶಕ್ತಿ ಬರುತ್ತದೆ.

* ಊಟದ ನಂತರ ಸ್ವಲ್ಪ ಕೊತ್ತಂಬರಿ ಬೀಜದ ಪುಡಿ ಸ್ವಲ್ಪ ಜೇನುತುಪ್ಪ ಎರಡನ್ನು ಬೆರೆಸಿ ತಿಂದರೆ ಜ್ಞಾಪಕ ಶಕ್ತಿ ಕ್ರಮೇಣವಾಗಿ ಹೆಚ್ಚುತ್ತಾ ಹೋಗುತ್ತದೆ.

* ಬಜೆಯ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು ಇದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಯಾಗುವುದು.

* ಒಂದು ನೋಟ ಮಾವಿನ ಹಣ್ಣಿನ ರಸ ಅಷ್ಟೇ ಪ್ರಮಾಣದಲ್ಲಿ ಹಾಲು ಜೇನುತುಪ್ಪ ಸೇರಿಸಿ ಪ್ರತಿನಿತ್ಯವೂ ಯಾವುದೇ ಸಮಯದಲ್ಲಾದರೂ ಇದನ್ನು ಸೇವಿಸಬಹುದು.

* ಹಾಲಿಗೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದಕ್ಕೆ ಎರಡರಿಂದ ಮೂರು ಚಮಚದಷ್ಟು ಜೇನುತುಪ್ಪ ಬೆರೆಸಿ ಕುಡಿಯಬೇಕು.

* ಬಕುಳ ಮರದ ಚೆಕ್ಕೆ ಯಿಂದ ಕಷಾಯ ತಯಾರಿಸಿ ಪ್ರತಿನಿತ್ಯ ಕುಡಿಯುತ್ತಾ ಬಂದರೆ ನೆನಪಿನ ಶಕ್ತಿ ಹೆಚ್ಚಾಗುವುದು.

* ಹಸಿ ಅಲಸಂಡೆ ಕಾಳು ಗಳು ಅಥವಾ ಅಲಸಂದೆ ಕಾಳುಗಳನ್ನು ಎರಡರಿಂದ ಮೂರು ಹಿಡಿ ತಿನ್ನುತ್ತಾ ಬಂದರೆ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.

* ಒಂದೆಲಗದ ರಸವನ್ನು ಹಾಲಿನಲ್ಲಿ ಬೆರೆಸಿ ಸೇವಿಸಬೇಕು ಅಥವಾ ಬೇಳೆಯೊಂದಿಗೆ ಈ ಸೊಪ್ಪನ್ನು ಹಾಕಿ ಸಾಂಬಾರ್ ಮಾಡಿ ಕೊಡಬಹುದು.

* ದಾಲ್ಚಿನ್ನಿಯ ಅಥವಾ ಚಕ್ಕೆ ಪುಡಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು.

* ಸರಿಯಾದ ಸಮಯಕ್ಕೆ ಉತ್ತಮ ಆಹಾರ ಸೇವನೆ ಮತ್ತು ಸರಿಯಾದ ನಿದ್ದೆಯನ್ನು ಮಾಡಿದರೆ ನೆನಪಿನ ಶಕ್ತಿ ವೃದ್ಧಿಯಾಗುತ್ತಾ ಹೋಗುತ್ತದೆ.

*ಇವೆಲ್ಲ ತಗೊಳುವುದರ ಜೊತೆಗೆ ಕೆಲವಂದು ವ್ಯಾಯಾಮಗಳನ್ನು ಮಾಡೋದನ್ನು ರೂಡಿಸಿಕೊಳ್ಳಬೇಕು. ನೆನಪಿನ ಶಕ್ತಿ ಹೆಚ್ಚಾಗಿಸಲು ಇರುವ ವ್ಯಾಯಾಮಗಳನ್ನು ಮಾಡಿದರೆ ಒಳ್ಳೆಯದು.

* ಹೆಚ್ಚಾಗಿ ಹಸಿ ಸೊಪ್ಪು ಮತ್ತು ಕಾಳುಗಳನ್ನು ನೀಡಬೇಕು. ಮೊಳಕೆ ಬಂದಿರುವ ಕಾಳುಗಳನ್ನು ನಿತ್ಯದಲ್ಲೂ ಕೊಡಬೇಕು ಇದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.

* ಸಿಪ್ಪೆ ತೆಗೆಯದೆ ಸೇಬು ಹಣ್ಣನ್ನು ಹಾಗೆ ತಿನ್ನಬೇಕು. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

LEAVE A REPLY

Please enter your comment!
Please enter your name here